ಬೆಂಗಳೂರು, ಡಿ.13; “ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಕೇವಲ ಉದ್ಯೋಗ ಅವಕಾಶವಲ್ಲ, ಅದು ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಾನವೀಯ ಮೌಲ್ಯ ಮತ್ತು ಜವಾಬ್ದಾರಿಯೊಂದಿಗೆ ಬಳಸಬೇಕಾದ ಶಕ್ತಿ. ಭವಿಷ್ಯದ ಎಂಜಿನಿಯರ್ ಗಳು ತಾಂತ್ರಿಕ ಜ್ಞಾನದ ಜೊತೆಗೆ ವಿಮರ್ಶಾತ್ಮಕ ಚಿಂತನೆ, ನಿರಂತರ ಕಲಿಕೆ ಮತ್ತು ನೈತಿಕತೆಗಳನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು” ಎಂದು ವಿಪ್ರೋ ಸಂಸ್ಥೆಯ ಎಐ ಕಾರ್ಯತಂತ್ರ, ಪರಿಹಾರ ಮತ್ತು ಸಲಹಾ ಮಂಡಳಿಯ ಜಾಗತಿಕ ಮುಖ್ಯಸ್ಥರಾದ ವೀನಾ ಶ್ರೀಗೋಪಾಲ್ ಕರೆ ನೀಡಿದರು.ಬೆಂಗಳೂರಿನ ಪ್ರತಿಷ್ಠಿತ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 40ನೇ ವಾರ್ಷಿಕ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ “ಸಮ್ಮಿಲನ 2025”ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾಗತಿಕ ಪರಿವರ್ತನೆಗಳು, ಭವಿಷ್ಯದ ಉದ್ಯೋಗ ಮಾರುಕಟ್ಟೆ, ಹಾಗೂ ವಿದ್ಯಾರ್ಥಿಗಳು ಹೊಂದಬೇಕಾದ ಬಹುಮುಖ ಕೌಶಲ್ಯಗಳ ಕುರಿತು ಗಮನ ಹರಿಸಬೇಕು. ಎಐ ತಂತ್ರಜ್ಞಾನದ ಆಳವಾದ ಒಳನೋಟಗಳು ಯುವ ಮನಸ್ಸುಗಳಿಗೆ ದಿಕ್ಕು ತೋರಿಸುತ್ತವೆ ಎಂದರು. ಎಂ.ಎನ್. ಪ್ರಾಂಶುಪಾಲರಾದ ಡಾ. ತಿಪ್ಪೇಸ್ವಾಮಿ ಅವರು ಅನೇಕ ಪ್ರತಿಭೆಗಳ ಜಾಗತಿಕ ಮಟ್ಟದ ವೃತ್ತಿ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಶೈಕ್ಷಣಿಕ ಪ್ರಗತಿ, ಸಂಶೋಧನಾ ಸಾಧನೆಗಳು, ನವೀನ ತಾಂತ್ರಿಕ ಉಪಕ್ರಮಗಳು ಹಾಗೂ ಭವಿಷ್ಯದ ಗುರಿಗಳನ್ನು ವಿವರಿಸಿದರು.
ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ ಎಂದು ಹೇಳಿದರು.ವಿವಿಧ ಪೀಳಿಗೆಯ ಹಳೆಯ ವಿದ್ಯಾರ್ಥಿಗಳು, ಅಧ್ಯಾಪಕರು, ಟ್ರಸ್ಟ್ ಸದಸ್ಯರು ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರುವ ಮೂಲಕ ಸಂಸ್ಥೆಯೊಂದಿಗಿನ ಆತ್ಮೀಯ ಬಾಂಧವ್ಯವನ್ನು ಪುನರುಜ್ಜೀವನಗೊಳಿಸಿದರು. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಉತ್ಸಾಹಭರಿತವಾಗಿ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಶ್ರೀ ಕೆಇಟಿ ಅಧ್ಯಕ್ಷರಾದ ವಿ. ಶ್ರೀನಿವಾಸ ರಾಜು, ಸಂಸ್ಥೆಯ ಸ್ಥಾಪಕ ಟ್ರಸ್ಟಿ ಹಾಗೂ ಅಕಾಡೆಮಿಕ್ ಸಮಿತಿ ಅಧ್ಯಕ್ಷರಾದ ಕೆ.ವಿ. ಶೇಖರ್ ರಾಜು ಮತ್ತು ಟ್ರಸ್ಟ್ ನ ಸದಸ್ಯರಾದ ಎನ್.ಜಿ. ರಾಜು, ಎಂ.ಎನ್., ಪ್ರಾಂಶುಪಾಲರಾದ ಡಾ. ತಿಪ್ಪೇಸ್ವಾಮಿ, ಉಪಪ್ರಾಂಶುಪಾಲರಾದ ಡಾ. ಭಾರತಿ ಗಣೇಶ್, ಅವರು ಭಾಗವಹಿಸಿದ್ದರು. ಪ್ರೊ. ಕೆ. ವಿ. ಆರ್. ಪ್ರಸಾದ್, ಅಲೂಮ್ನಿ ಅಸೋಸಿಯೇಷನ್ನ ಕಾರ್ಯದರ್ಶಿಗಳು, ಕಾರ್ಯಕ್ರಮದ ಸಮಾರೋಪದಲ್ಲಿ ಹಾಜರಿದ್ದ ಎಲ್ಲಾ ಅಲೂಮ್ನಿಗಳಿಗೆ ತಮ್ಮ ಅಮೂಲ್ಯ ಹಾಜರಾತಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳು, ಆಲೋಚನೆಗಳು ಮತ್ತು ಪ್ರೇರಣಾದಾಯಕ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಪ್ರೊ. ಕೆ. ವಿ. ಆರ್. ಪ್ರಸಾದ್, ಅಲೂಮ್ನಿ ಅಸೋಸಿಯೇಷನ್ನ ಕಾರ್ಯದರ್ಶಿಗಳು, ಕಾರ್ಯಕ್ರಮದ ಸಮಾರೋಪದಲ್ಲಿ ಹಾಜರಿದ್ದ ಎಲ್ಲಾ ಅಲೂಮ್ನಿಗಳಿಗೆ ತಮ್ಮ ಅಮೂಲ್ಯ ಹಾಜರಾತಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳು, ಆಲೋಚನೆಗಳು ಮತ್ತು ಪ್ರೇರಣಾದಾಯಕ ಸಂದೇಶಗಳನ್ನು ಹಂಚಿಕೊಂಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.