ಬೆಂಗಳೂರು: ಬೆಂಗಳೂರಿನ ಥಣಿಸಂದ್ರದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪಡೆಯುತ್ತಿರುವ 8ನೇ ತಂಡದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಒಟ್ಟು 416 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಡಿಸೆಂಬರ್ 20 ರಂದು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಂ.ಎ.ಸಲೀಂ ಅವರು ಪಥ ಸಂಚಲನದ ಪರೀವೀಕ್ಷಣೆ ಮತ್ತು ಬಹುಮಾನ ವಿತರಿಸಲಿದ್ದಾರೆ. ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಬಿ.ದಯಾನಂದ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಉಪಸ್ಥಿತರಿರಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಧಿಕಾರಿ/ಸಿಬ್ಬಂದಿಗಳಾದ ಕೇದಾರನಾಥ ಜಿ.ಹೆಚ್, ಡಿವೈಎಸ್‍ಪಿ / ಉಪ ಪ್ರಾಂಶುಪಾಲರು, ಪಿಟಿಎಸ್, ಥಣಿಸಂದ್ರ ಬೆಂಗಳೂರು, ಮೊ.ಸಂ:9916230983 ಮತ್ತು ಅ.ಬ ಹಿರೇಗೌಡರ್, ಪೊಲೀಸ್ ಇನ್ಸ್‍ಪೆಕ್ಟರ್, ಪಿಟಿಎಸ್, ಥಣಿಸಂದ್ರ, ಬೆಂಗಳೂರು, ಮೊ.ಸಂ. 9845540390 ಗೆ ಸಂಪರ್ಕಿಸಬಹುದು ಎಂದು ಥಣಿಸಂದ್ರ ಪೆÇಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕರು ಮತ್ತು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.