ಬೆಂಗಳೂರು: ಬ್ರಾಹ್ಮಿ ಅಕಾ ಡೆಮಿಕ್ ಟ್ರಸ್ಟ್ ನ ವತಿಯಿಂದ ಕನ್ನಡ ರಾಜ್ಯೋತ್ಸವ, ಪುಸ್ತಕ ಬಿಡುಗಡೆ ಮತ್ತು ಪ್ರಮಾಣಪತ್ರ ಪ್ರಧಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರನ್ನಾಗಿ ಅಜಯ್ ಕುಮಾರ್ (H.S.R.A ಪ್ರಕಾಶನ), ಶ್ರೀಮತಿ ನಂದಾ ಹರಿಪ್ರಸಾದ್ (ವಿಕ್ರಮ ಪ್ರಕಾಶನ), ಶ್ರೀಮತಿ ದೀಪಾ (ಅಜ್ಜಿಮನೆ ಪ್ರೀ ಸ್ಕೂಲ್), ಡಾ: ನಾಗರಾಜ್ ಎಸ್. (ಪ್ರಯುಕ್ತಿ ಪದವಿ ಕಾಲೇಜು), ಶ್ರೀಮತಿ ನಿಳಿನಾ ದ್ವಾರಕಾನಾಥ್ (ಲೇಖಕಿ, ಶಿಕ್ಷಕಿ), ಡಾ: ವೆಂಕೋಬರಾವ್, ಹೊಸಕೋಟೆ (ಲೇಖಕರು, ಪ್ರಾಧ್ಯಾಪಕರು), ಮಂಗಳಾ (ಶಿಕ್ಷಕಿ), ಶ್ರೀ ಶಾಮಸುಂದರ್ (ಸಮೃದ್ಧಿ ಪಾರ್ಟಿ ಹಾಲ್), ಶ್ರೀ ಪ್ರಸನ್ನ ಕುಮಾರ್ ಬಿ.ಕೆ. (ವಿ.ಕೆ. ಡಿಜಿಟಲ್ ನ್ಯೂಸ್) ಮತ್ತು ಬೃಂದಾ ಲಕ್ಷ್ಮೀ (ಶಿಕ್ಷಕಿ) ಇವರುಗಳನ್ನು ಆಹ್ವಾನಿಸಲಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಮಹಾಲಕ್ಷ್ಮೀ ಆರ್. ರವರು ನಡೆಸಿಕೊಟ್ಟರು. ದೀಪ್ತಿಯವರು ಎಲ್ಲರಿಗೂ ಸ್ವಾಗತ ಕೋರಿದರು. ಅತಿಥಿಗಳಾದ ಶ್ರೀಧರ್ ಪಿ ದೇವಾಂಗರವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ರಾಧಿಕಾ ಹೃಷಿಕೇಶ (ಅಧ್ಯಕ್ಷರು ಮತ್ತು ಸಂಸ್ಥಾಪಕಿ, ಬ್ರಾಹ್ಮಿ ಅಕಾಡೆಮಿಕ್ ಟ್ರಸ್ಟ್) ರವರು ಪ್ರಾಸ್ತಾವಿಕ ಭಾಷಣವನ್ನು ನೆರವೇರಿಸಿದರು. ಅತಿಥಿಗಳಾಗಿ ಬಂದಿದ್ದ ಶ್ರೀಧರ್ ಪಿ ದೇವಾಂಗ (ಸಂಸ್ಥಾಪಕರು, ದೇವಲ ಮಹರ್ಷಿ ವಿಶ್ವವಿದ್ಯಾನಿಲಯ) ರವರು ಕಾರ್ಯಕ್ರಮವನ್ನು ಉದ್ದೇಶಿಸಿ ನಾಲ್ಕು ಮಾತುಗಳನ್ನಾಡಿದರು. ವಿಶೇಷ ಆಹ್ವಾನಿತರಾದ ನಳಿನಾ ದ್ವಾರಕನಾಥ್ (ಕನ್ನಡ ಬರಹಗಾರರು), ವೆಂಕೋಬರಾವ್(ಸಾಹಿತಿ, ಪ್ರೊಫೇಸರ್), ಮತ್ತು ಗೀತಾ ಚಂದ್ರಶೇಖರ್ (ವಿ.ಕೆ. ನ್ಯೂಸ್ ವರದಿಗಾರರು) - ಇವರುಗಳು ಕನ್ನಡ ರಾಜ್ಯೋತ್ಸವದ ಬಗ್ಗೆ ಒಂದೆರಡು ಮಾತುಗಳನ್ನಾಡಿದರು.
"ಪ್ರೀತಿ ಇಲ್ಲದ ಮೇಲೆ ಮತ್ತು ಇತರ ಕಥೆಗಳು" ಪುಸ್ತಕದ ಬಗ್ಗೆ ಅಂಬಿಕಾರವರು ವಿವರಣೆಯನ್ನು ನೀಡಿದರು. ವಿಶೇಷ ಆಹ್ವಾನಿತರಾದ ಗೀತಾ ಚಂದ್ರಶೇಖರ್ (ವಿ.ಕೆ. ನ್ಯೂಸ್ ವರದಿಗಾರರು) ರವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
NTT ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರನನ್ನು ಅತಿಥಿಗಳಾದ ಶ್ರೀಧರ್ ಪಿ ದೇವಾಂಗ (ಸಂಸ್ಥಾಪಕರು, ದೇವಲ ಮಹರ್ಷಿ ವಿಶ್ವವಿದ್ಯಾನಿಲಯ) ರವರು ನೀಡಿದರು. ವಿದ್ಯಾರ್ಥಿಗಳಾದ ಆಫ್ರೀನ್, ಅಂಬಿಕಾ, ದೀಪ್ತಿ, ಮಹಾಲಕ್ಷ್ಮೀ ಆರ್., ಸಮೀರ್ ಮತ್ತು ಶೈಲಾ ಮೇರಿ ಯವರು ಪ್ರಮಾಣ ಪತ್ರವನ್ನು ಸ್ವೀಕರಿಸಿದರು. NTT ತರಗತಿ ಮತ್ತು ಅದರ ಉಪಯೋಗಗಳ ಬಗ್ಗೆ ಆಫ್ರೀನ್ ಮತ್ತು ಅದರ ಅವಶ್ಯಕತೆಗಳ ಬಗ್ಗೆ ಸಮೀರ್ ಮಾತನಾಡಿದರು.
ನಂತರ ಅಲ್ಪ ವಿರಾಮವನ್ನು ನಿಡಲಾಯಿತು. ವಿರಾಮದ ನಂತರ ಸುಗಮ ಸಂಗೀತ ಕಾರ್ಯಕ್ರಮವನ್ನು ಪ್ರಸನ್ನ ಲಕ್ಷ್ಮೀ, ಮಹಾಲಕ್ಷ್ಮೀ ಆರ್., ಕುಮಾರಿ ಸಂಹಿತಾ ಮತ್ತು ನಳಿನಿ ನಡೆಸಿಕೊಟ್ಟರು. ಶೈಲಾ ಮೇರಿಯವರು ವಂದನಾರ್ಪಣೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.
ವರದಿಗಾರ್ತಿ: ಮಹಾಲಕ್ಷ್ಮೀ ಆರ್.



