ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನಗರದ ಎನ್.ಆರ್. ಕಾಲೋನಿಯ ಬಿ.ಎಂ. ಶ್ರೀ. ಪ್ರತಿಷ್ಠಾನದಲ್ಲಿ ಏಳು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿತ್ತು .
ಕರ‍್ಯಕ್ರಮದಲ್ಲಿ ಅನ್ನಪರ‍್ಣ ಪಬ್ಲಿಷಿಂಗ್ ಹೌಸ್ ನ ಲಕ್ಷ್ಮಿ ಶ್ರೀನಿವಾಸ ರವರ ರ‍್ವಜ್ಞ ಕವಿಯ ತ್ರಿಪದಿಗಳನ್ನು ಸರಳ ಕನ್ನಡದಲ್ಲಿ ವಿವರಣೆಗೊಳಿಸಿದ ಲೇಖನಾಧಾರಿತ ಪುಸ್ತಕ .,ಡಾ ವೆಂಕೋಬ ರಾವ್ ಎಂ ಹೊಸಕೋಟೆ ರವರ ಮಕ್ಕಳನ್ನು ಮಕ್ಕಳಾಗಿರಲು ಬಿಡಿ , ಗೀತಾಂಜಲಿ ಪಬ್ಲಿಕೇಷನ್ ನ ನಿಡಸಾಲೇ ಪುಟ್ಟಸ್ವಾಮಯ್ಯ ರವರಬಾಪು ಮಂದಿರ , ಕನ್ನಡ ರಥವೇರಿದ ರತ್ನಗಳು , ಸಪ್ನ ಬುಕ್ ಹೌಸ್ ನ ನಾಡೋಜ ಡಾ ಪಿ ಎಸ್ ಶಂಕರ್ ರವರ ನನ್ನ ಅರೋಗ್ಯ ನನ್ನ ಹಕ್ಕು ,ಪರ‍್ಥ ಪ್ರಕಾಶನದ ಅಮೂಲ್ಯ ಎಸ್ ಪ್ರಮೋದ್ ರವರ ಅಂಶ , ವಸಂತ ಪ್ರಕಾಶನದ ಗುರುರಾಜ್ ಎಸ್ ದಾವಣಗೆರೆರವರ ಕೃತಕ ಬುದ್ದಿಮತ್ತೆ ಸೇರಿದಂತೆ ಏಳು ಕೃತಿಗಳು ಲೋಕರ‍್ಪಣೆಯಾಯಿತು .
ಸಮಾರಂಭವನ್ನು ರ‍್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ ಉದ್ಘಾಟಿಸಿದರು .ರ‍್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕನ್ನಡ ಭಾಷೆ ಮತ್ತು ಸಾಹಿತ್ಯವು ನಮ್ಮ ಸಾಂಸ್ಕೃತಿಕ ಅಸ್ತಿತ್ವದ ಆತ್ಮ. ಈ ಆತ್ಮವನ್ನು ಜೀವಂತವಾಗಿಡುವ ಹೊಣೆಗಾರಿಕೆಯನ್ನು ಹೊತ್ತುಕೊಂಡು ರ‍್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಕರ‍್ಯನರ‍್ವಹಿಸುತ್ತಿದೆ” ಎಂದು ಹೇಳಿದರು.ಬರಹಗಾರರು, ಪ್ರಕಾಶಕರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸಂಘವು ಕನ್ನಡ ಸಾಹಿತ್ಯದ ಸಮಕಾಲೀನ ಚಿಂತನೆಗಳಿಗೆ ಹೊಸ ಆಯಾಮ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಸಂಘಟನಾ ಬಲರ‍್ಧನೆ, ಜಿಲ್ಲಾ ಮಟ್ಟದ ಸಾಹಿತ್ಯ ಕರ‍್ಯಕ್ರಮಗಳು ಹಾಗೂ ಡಿಜಿಟಲ್ ಮಾಧ್ಯಮದ ಮೂಲಕ ಕನ್ನಡ ಸಾಹಿತ್ಯ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಬಿ ಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಕೃತಿಗಳ ಪರಿಚಯ ಮಾಡಿದರು .2026 ರ ಕ್ಯಾಲೆಂಡರ್ ಅನ್ನು ಐ ಬಿ ಹೆಚ್ ಪ್ರಕಾಶನದ ಹೆಚ್ ಕೆ ಲಕ್ಷ್ಮೀನಾರಾಯಣ ಅಡಿಗ ಬಿಡುಗಡೆ ಮಾಡಿದರು ಮತ್ತು ಮುದ್ರಕ ಸ್ವಾನ್ ಕೃಷ್ಣಮರ‍್ತಿ ರವರನ್ನು ಗೌರವಿಸಲಾಯಿತು .ರ‍್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕರ‍್ಯರ‍್ಶಿ ದೊಡ್ಡೇಗೌಡ , ಬಿ ಕೆ. ಸುರೇಶ್ ಮೊದಲಾದವರು ವೇದಿಕೆಯಲ್ಲಿದ್ದರು .