ಪ್ರಾದಾದಿಂದ ಲಿಡ್ಯಾಂ ಮತ್ತು ಲಿಡ್ಕರ್ ಕುಶಲಕರ್ಮಿಗಳ ಸಹಯೋಗದಲ್ಲಿ ಕೊಲ್ಲಾಪುರಿ ಚಪ್ಪಲಿಗಳಿಂದ ಸ್ಫೂರ್ತಿ ಪಡೆದ ಸೀಮಿತ ಆವೃತ್ತಿಯ ಚಪ್ಪಲಿಗಳ ಬಿಡುಗಡೆ

varthajala
0

 ಮುಂಬೈ / ಬೆಂಗಳೂರು:-ಭಾರತೀಯ ರ‍್ಮೋದ್ಯಮವನ್ನು ಹಾಗೂ ಕೊಲ್ಲಾಪುರಿ ಚಪ್ಪಲಿಯ ಪರಂಪರೆ ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುತ್ತಿರುವ ಪ್ರಾದಾ, ಲಿಡ್ಯಾಂ (ಸಂತ್ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಅಂಡ್ ರ‍್ಮಕಾರ್ ಡೆವಲಪ್ಟೆಂಟ್ ಕಾಪೊರೇಷನ್ ಲಿ.) ಮತ್ತು ಲಿಡ್ಕರ್ (ಡಾ.ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್ಟೆಂಟ್ ಕಾಪೆರ್Çರೇಷನ್ ಲಿ.) ನಿನ್ನೆ ಮುಂಬೈನಲ್ಲಿ ಇಟಲಿಯ ರಾಯಭಾರ ಕಛೇರಿಯೊಂದಿಗೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದೆ. ಮುಂಬೈನಲ್ಲಿ ನಡೆದ ಇಬಲಿ-ಭಾರತ ಬಿಸಿನೆನ್ ಫೋರಂ ಸಂರ‍್ಭದಲ್ಲಿ ಈ ಸಹಿ ಹಾಕಲಾಯಿತು. ಒಪ್ಪಂದವು "ಪ್ರಾದಾ ಮೇಡ್ ಇನ್ ಇಂಡಿಯಾ ಘಿ ಇನ್ಸ್‍ಫರ‍್ಡ್ ಬೈ ಕೊಲ್ಲಾಪುರಿ ಚಪ್ಪಲ್ಸ್" ಯೋಜನೆಯ ಚೌಕಟ್ಟು, ಅನುಷಾ್ಠನ ಮತ್ತು ಮರ‍್ಗರ‍್ಶನ ನೀಡಲಿದ್ದು ಅದು ಸೀಮಿತ ಆವೃತ್ತಿಯ ಚಪ್ಪಲಿಗಳ ಸಂಗ್ರಹದ ಮೂಲಕ ಭಾರತೀಯ ಕರಕುಶಲತೆಯನ್ನು ಸಂಭ್ರಮಿಸುತ್ತದೆ. ಇವುಗಳನ್ನು ಭಾರತದಲ್ಲಿ ಸಾಂಪ್ರದಾಯಿಕ ಕೊಲ್ಲಾಪುರಿ ಚಪ್ಪಲಿಗಳನ್ನು ತಯಾರಿಸುತ್ತಿದ್ದ ಮಹಾರಾಷ್ಟ್ರ ಮತ್ತು ರ‍್ನಾಟಕ ಪ್ರದೇಶಗಳ ಪ್ರತಿಭಾವಂತ ಕುಶಲರ‍್ಮಿಗಳ ಸಹಯೋಗದಲ್ಲಿ ಉತ್ಪಾದಿಸಲಾಗುತ್ತದೆ. ಸಾಂಪ್ರದಾಯಿಕ ತಂತ್ರಗಳನ್ನು ಪ್ರಾದಾದ ಸಮಕಾಲೀನ ವಿನ್ಯಾಸ ಮತ್ತು ಪ್ರೀಮಿಯಂ ವಸ್ತುಗಳೊಂದಿಗೆ ಸಂಯೋಜಿಸಿ ಈ ಸಂಗ್ರಹವು ಭಾರತೀಯ ಪರಂಪರೆ ಮತ್ತು ಆಧುನಿಕ ಐಷಾರಾಮಿ ಅಭಿವ್ಯಕ್ತಿಯ ನಡುವೆ ವಿಶಿಷ್ಟ ಸಂವಾದ ಸೃಷ್ಟಿಸುತ್ತದೆ.ಸಾಂಪ್ರದಾಯಿಕ ಕೊಲ್ಲಾಪುರಿ ಚಪ್ಪಲಿಗಳನ್ನು ಮಹಾರಾಷ್ಟ್ರದ ನಾಲ್ಕು (ಕೊಲ್ಲಾಪುರ, ಸಾಂಗ್ಲಿ, ಸತಾರಾ, ಸೋಲಾಪುರ)ಮತ್ತು ರ‍್ನಾಟಕದ ನಾಲ್ಕು (ಬೆಳಗಾವಿ, ಬಾಗಲಕೋಟೆ, ಧಾರವಾಡ, ಬಿಜಾಪುರ) ಒಳಗೊಂಡು ಎಂಟು ಜಿಲ್ಲೆಗಳಲ್ಲಿ ಉತ್ಪಾದಿಸಲಾಗುತ್ತದೆ.

 ಕೊಲ್ಲಾಪುರಿ ಚಪ್ಪಲಿಗಳಿಗೆ ಭೌಗೋಳಿಕ ಗುರುತು (ಜಿಐ) ಟ್ಯಾಗ್ ದೊರೆತಿದ್ದು ಅದು ಅವುಗಳ ವಿಶ್ವಾಸರ‍್ಹತೆಯನ್ನು ರಕ್ಷಿಸುತ್ತವೆ ಮತ್ತು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತವೆ.ಲಿಡ್ಕಾಂ ವ್ಯವಸ್ಥಾಪಕ ನರ‍್ದೇಶಕಿ ಶ್ರೀಮತಿ ಪ್ರೇಮಾ ದೇಶಭ್ರತರ್ ಮಾತÀನಾಡಿ, ಈ ಯೋಜನೆಯು ಸುಸ್ಥಿರ ಸಂವಾದ ಮತ್ತು ಈ ಸಾಂಪ್ರದಾಯಿಕ ಕಲೆಯನ್ನು ಸಂರಕ್ಷಿಸಿಕೊಂಡು ಬಂದಿರುವ ತಲೆಮಾರುಗಳ ಕಲಾವಿದರಿಗೆ ಹಂಚಿಕೊಂಡ ಬದ್ಧತೆಯ ಫಲಿತಾಂಶವಾಗಿದೆ. ಪ್ರಾದಾ ಜೊತೆಯ ಸಹಯೋಗವು ಮಹಾರಾಷ್ಟ್ರ ಮತ್ತು ರ‍್ನಾಟಕದ ಕುಶಲರ‍್ಮಿಗಳೊಂದಿಗೆ ನೇರವಾಗಿ ಕೆಲಸ ಮಾಡುವ ಜಾಗತಿಕ ಬ್ರಾಂಡ್ ನ ನೈತಿಕ ಸಹಯೋಗ ಬಿಂಬಿಸುತ್ತಿದ್ದು ಅವರ ಪರಿಣಿತಿಯನ್ನು ಮಾನ್ಯ ಮಾಡುತ್ತದೆ ಮತ್ತು ಅವರಿಗೆ ಪರ‍್ಣ ಕ್ರೆಡಿಟ್ ನೀಡುತ್ತದೆ. ಮಹಾರಾಷ್ಟ್ರ ರ‍್ಕಾರವು ಲಿಡ್ನಾಂ ಮೂಲಕ ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ವೇದಿಕೆಗಳಿಗೆ ಕೊಂಡೊಯ್ಯುವ ಹಾಗೂ ಕೊಲ್ಲಾಪುರಿ ಚಪ್ಪಲಿಗಳ ವಿಶ್ವಾಸರ‍್ಹತೆ ಮತ್ತು. ಪರಂಪರೆಯನ್ನು ಸಂಭ್ರಮಿಸುವುದನ್ನು ತೋರುವ ಈ ಉಪಕ್ರಮಕ್ಕೆ ಬೆಂಬಲಿಸಲು ಸಂತೋಷಿಸುತ್ತದೆ ಎಂದರು.ಲಿಡ್ಕರ್ ವ್ಯವಸ್ಥಾಪಕ ನರ‍್ದೇಶಕಿ ಡಾ.ಕೆ.ಎಂ. ವಸುಂಧರಾ ಮಾತನಾಡಿ, ಕೊಲ್ಲಾಪುರಿ ಚಪ್ಪಲಿಗಳ ಪರಂಪರೆಯು ರ‍್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತಲೆಮಾರುಗಳಿಂದ ಸಾಗಿ ಬಂದ ಶತಮಾನಗಳ ಕರಕುಶಲತೆಯನ್ನು ಬಿಂಬಿಸುತ್ತದೆ. ಈ ಜಿಐ ಟ್ಯಾಗ್ ಪಡೆದ ಕಲೆಯನ್ನು ರಕ್ಷಿಸುವುದು ಮತ್ತು ನಮ್ಮ ಕಲಾವಿದರನ್ನು ಪ್ರಶಂಸಿಸುವುದು ಈ ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ರ‍್ಥಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮುಖ್ಯವಾಗಿದೆ. ಪ್ರಾದಾ ಜೊತೆಯಲ್ಲಿ ನಮ್ಮ ಸಹಯೋಗವು ರ‍್ನಾಟಕದ ಕುಶಲರ‍್ಮಿಗಳಿಗೆ ಲಿಡ್ಕರ್ ಮೂಲಕ ಹೊಸ ಜಾಗತಿಕ ಅವಕಾಶಗಳನ್ನು ತೆರೆದಿದ್ದು ಸಂಪ್ರದಾಯವನ್ನು ಸಂರಕ್ಷಿಸುವುದೇ ಅಲ್ಲದೆ ಸಮುದಾಯಗಳನ್ನು ತರಬೇತಿ, ಉದ್ಯೋಗಾವಕಾಶಗಳು ಮತ್ತು ಸುಸ್ಥಿರ ಜೀವನೋಪಾಯಗಳ ಮೂಲಕ ಸಬಲೀಕರಿಸುತ್ತಿದೆ. ಭಾರತೀಯ ಕರಕುಶಲತೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುತ್ತಿರುವ ಪ್ರಾದಾದೊಂದಿಗೆ ಕೈಜೋಡಿಸಲು ನಾವು ಹೆಮ್ಮೆ ಪಡುತ್ತೇವೆ ಎಂದರು.ಈ ಉಪಕ್ರಮಗಳು "ಮೇಡ್ ಇನ್..." ಯೋಜನೆಯಲ್ಲಿ ಹೊಸ ಅಧ್ಯಾಯವಾಗಿದ್ದು ಜಾಗತಿಕವಾಗಿ ಕರಕುಶಲತೆಯ ಶ್ರೇಷ್ಠತೆಯನ್ನು ಸಂಭ್ರಮಿಸಲು ಇದನ್ನು ಪ್ರಾದಾ ಒಂದು ದಶಕದ ಹಿಂದೆಯೇ ಬಿಡುಗಡೆ ಮಾಡಿದೆ. ಇದು ಭೌಗೋಳಿಕ ಗಡಿಗಳನ್ನು ಮೀರುವ ಸರಿಸಾಟಿ ಇರದ ಗುಣಟ್ಟವನ್ನು ಹೊತ್ತ ಸಮಕಾಲೀನ, ಅವಿಷಾ್ಕರಕ ವಿನ್ಯಾಸಗಳ ಕುಶಲಿಗರನ್ನು ಗುರುತಿಸುವುದು ಮತ್ತು ಸಹಯೋಗ ಪಡೆಯುವ ಗುರಿ ಹೊಂದಿದೆ.ಈ ಉಪಕ್ರಮದ ಮೂಲಕ ಪ್ರಾದಾ ಗ್ರೂಪ್ ಲಿಡ್ಕಾಂ ಮತ್ತು ಲಿಡ್ಕರ್ ಸಹಯೋಗದಲ್ಲಿ ಸ್ಥಳೀಯವಾಗಿ ತರಬೇತಿ ಕರ‍್ಯಕ್ರಮಗಳನ್ನು ನಡೆಸಲಿದೆ ಮತ್ತು ಈ ಯೋಜನೆಗೆ ಸ್ಪರ‍್ತಿ ನೀಡಿದ ಸಾಂಪ್ರದಾಯಿಕ ಕರಕುಶಲತೆಯನ್ನು ಸಂರಕ್ಷಿಸುವುದಲ್ಲದೆ ಕರಕುಶಲಿಗರಿಗೆ ಪ್ರಾದಾ ಗ್ರೂಪ್ ಅಕಾಡೆಮಿ ಮಾದರಿಯ ಮೂಲಕ ಅವರ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತದೆ. ಇದರ ಗುರಿ ಕೌಶಲ್ಯಗಳ ಮತ್ತು ಜ್ಞಾನ ವಿನಿಮಯವಾಗಿದ್ದು ಈ ತಂತ್ರಗಳು ಸ್ಥಳೀಯ ಸಮುದಾಯಗಳ ಯುವಜನರಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ ವೃದ್ಧಿಸುತ್ತವೆ.ಪ್ರಾದಾ ಕಾಪೆರ್Çರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯ ಗ್ರೂಪ್ ಹೆಡ್ ಲೊರೆಂಝೊ ರ‍್ಟೆಲ್ಲಿ, ಲಿಡ್ಕಾಂ ಮತ್ತು ಲಿಡ್ಕರ್ ಜೊತೆಯಲ್ಲಿ ನಮ್ಮ ಸಹಯೋಗವು ರ‍್ಥಪರ‍್ಣ ಸಾಂಸ್ಕೃತಿಕ ವಿನಿಮಯದಿಂದ ಮೂಡಿಬಂದಿದ್ದು ಇದರಲ್ಲಿ ಪ್ರತಿಧ್ವನಿಯೂ ಬರೀ ಉತ್ಪನ್ನ ಸೃಷ್ಟಿಸಲು ಮಾತ್ರವಲ್ಲ, ಬದಲಿಗೆ ವಿಸ್ತಾರ ಉಪಕ್ರಮಕ್ಕೆ ಕೊಡುಗೆ ನೀಡುತ್ತದೆ. ಈ ಸಂಗ್ರಹವನ್ನು ಬಿಡುಗಡೆ ಮಾಡಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಭಾರತೀಯ ಕುಶಲರ‍್ಮಿಗಳಿಗೆ ಬೆಂಬಲಿಸುವ ತರಬೇತಿ ಕರ‍್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಅಸಾಧಾರಣ ಕರಕುಶಲತೆಯು ಇಂದಿನ ವಿಕಾಸಗೊಳ್ಳುತ್ತಿರುವ ಉದ್ಯಮದಲ್ಲಿ ತನ್ನ ಸ್ಥಾನ ಪಡೆಯುತ್ತದೆ ಎಂದರು.

Post a Comment

0Comments

Post a Comment (0)