ಬೆಂಗಳೂರು - ಬನಶಂಕರಿಯ ಪದ್ಮನಾಭನಗರದಲ್ಲಿ ಶ್ರೀ ವರಪ್ರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಇಂದು ವಿಶೇಷ ಪೂಜೆ, ಹೋಮ–ಹವನ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಸುಮಾರು 1,500ಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ಪುಣ್ಯಲಾಭ ಪಡೆದರು. ಭಕ್ತರಿಗೆ ಉಚಿತ ಮಹಾ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸಂಜೆಯ ವೇಳೆಯಲ್ಲಿ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಏರ್ಪಡಿಸಲಾಗಿದ್ದು, ಸ್ಥಳೀಯ ಕಲಾವಿದರು ಭಾಗವಹಿಸಿ ಭಕ್ತರನ್ನು ಆಕರ್ಷಸಿದರು
