ರಾಜ್ಯದ ಯಾವುದೇ ಕಡೆಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಗುಟಕಾ ಮಾರಾಟ ಕಂಡುಬಂದಿಲ್ಲ: ಗೃಹ ಸಚಿವರಿಂದ ಸ್ಪಷ್ಟನೆ

varthajala
0

 ಬೆಳಗಾವಿ / ಬೆಂಗಳೂರು: ಉತ್ತರ ಕರ್ನಾಟಕದ ವಿಜಯಪುರ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಸ್ಥಳಿಯ ಗುಟಕಾ ಮಾರಾಟ ಕಂಡುಬಂದಿರುವುದಿಲ್ಲ ಮತ್ತು ಈ ಸಂಬಂಧ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಇಂದು ಮೇಲ್ಮನೆಯಲ್ಲಿ ಸ್ಪಷ್ಟನೆ ನೀಡಿದರು.ಪ್ರಶ್ನೋತ್ತರ ವೇಳೆ, ಸದಸ್ಯರಾದ ಕೇಶವ ಪ್ರಸಾದ್ ಎಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,  ಮಾದಕ ವಸ್ತುಗಳ ಹಾವಳಿಯ ಪ್ರಕರಣಗಳನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, 2023ರಲ್ಲಿ 133.58 ಕೋಟಿ ರೂ ಮೌಲ್ಯದ 10,626 ಕೆ ಜಿ ಗಾಂಜಾ ಮತ್ತು ಇನ್ನಿತರ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ. 2024ರಲ್ಲಿ 164.91 ಕೋಟಿ ರೂ. ಮೌಲ್ಯದ 6609 ಕೆ.ಜಿ. ಗಾಂಜಾ ಮತ್ತು ಇತರೆ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ. 2025ರಲ್ಲಿ 185.72 ಲಕ್ಷ ರೂ ಮೌಲ್ಯದ 5079 ಕೆ.ಜಿ. ಗಾಂಜಾ ಮತ್ತು ಇನ್ನಿತರ ಮಾದಕ ಪದಾರ್ಥ ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತು ಮಾರಾಟ ಉತ್ಪಾದನೆ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985ರಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ಘಟಕಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ.
ಮಾದಕ ವಸ್ತುಗಳ ಹಾವಳಿಗಳನ್ನು ತಡೆಗಟ್ಟಲು ಎನ್‍ಡಿಪಿಎಸ್ ಕಾಯ್ದೆ-1985 ರಡಿಯಲ್ಲಿ 2023ರಲ್ಲಿ 6768, 2024ರಲ್ಲಿ 4168 ಮತ್ತು 2025ರಲ್ಲಿ 5930 ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಾದಕ ವಸ್ತು ಸಾಗಾಟಕ್ಕೆ ಬಳಸಲಾಗುತ್ತಿರುವ ಖಾಸಗಿ ಕಾರುಗಳು, ಬೈಕ್ ಗಳು ಹಾಗೂ ಇತರೆ ವಾಹನಗಳ ವಿರುದ್ಧ ಸಹ ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ವಾಹನಗಳನ್ನು ಜಪ್ತಿ ಮಾಡಿ ಅಮಾನತ್ತುಪಡಿಸಿ ಠಾಣಾ ಪಿಎಫ್‍ನಲ್ಲಿ ನಮೂದು ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

Post a Comment

0Comments

Post a Comment (0)