ರಾಸಾಯನಿಕ ವಿಶ್ಲೇಷಣಾ ವರದಿ ನಂತರವೇ ಬಿಯರ್ ಮಾರಾಟಕ್ಕೆ ಬಿಡುಗಡೆ : ಅಬಕಾರಿ ಸಚಿವ ತಿಮ್ಮಾಪುರ

varthajala
0

ಬೆಳಗಾವಿ / ಬೆಂಗಳೂರು: ಬ್ರಿವೇರಿಗಳಲ್ಲಿ  ಉತ್ಪಾದನೆಯಾಗುವ ಬಿಯರ್ ಗಳಲ್ಲಿ ಇಥೈಲ್ ಆಲ್ಕೋಹಾಲ್ ಇರುವಿಕೆ ಮತ್ತು ಮಿಥೈಲ್ ಆಲ್ಕೋಹಾಲ್, Obnoxious Substance  ಮತ್ತು Suspended Sediments   ಇಲ್ಲದಿರುವಿಕೆಯನ್ನು ಖಚಿತಪಡಿಸಿಕೊಂಡು ಮಾನವ ಸೇವನೆಗೆ ಯೋಗ್ಯವಾಗಿದೆ ಎಂದು ರಾಸಾಯನಿಕ ವಿಶ್ಲೇಷಣಾ ವರದಿಯನ್ನು ನೀಡಲಾದ ನಂತರವೇ ಬಿಯರ್ ಅನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಬಕಾರಿ ಸಚಿವರಾದ ಆರ್.ಜಿ.ತಿಮ್ಮಾಪುರ  ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಶಾಸಕರಾದ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರ ಅವರು                     ಅಬಕಾರಿ ಇಲಾಖೆಯಲ್ಲಿ 2 ರಾಸಾಯನಿಕ ಪ್ರಯೋಗಾಲಯಗಳು ಬೆಂಗಳೂರು ಮತ್ತು ಧಾರವಾಡದಲ್ಲಿ ಮಂಜೂರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ರಾಸಾಯನಿಕ ಪ್ರಯೋಗಾಲಯವು ಕಾರ್ಯನಿರ್ವಹಿಸುತ್ತಿದೆ. ಧಾರವಾಡದಲ್ಲಿನ ಪ್ರಯೋಗಾಲಯ ಪ್ರಾರಂಭಿಸಲು ಪರಿಶೀಲಿಸಲಾಗುತ್ತಿದ್ದು, ಅಬಕಾರಿ ಇಲಾಖೆಯಿಂದ ಖಾಸಗಿ ಪ್ರಯೋಗಾಲದ ಜೊತೆ ಯಾವುದೇ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ 2025-26 ನೇ ಸಾಲಿನ ಅಕ್ಟೋಬರ್ 2025 ರ ಅಂತ್ಯಕ್ಕೆ ಸ್ವತಂತ್ರ ಆರ್.ವಿ.ಬಿ (Independent RVB) 64 ಹಾಗೂ ವಿವಿಧ ರೀತಿಯ ಸನ್ನದಿಗೆ ಹೊಂದಿಕೊಂಡಂತಿರುವ ಆರ್.ವಿ.ಬಿ (Attached RVB) 915 ಹೀಗೆ, ಪ್ರಸ್ತುತ ಒಟ್ಟು 979 ಸಂಖ್ಯೆಯ  ಆರ್.ವಿ.ಬಿ (ಪಬ್) ಸನ್ನದುಗಳು ಇರುತ್ತವೆ.

ಆರ್.ವಿ.ಬಿ ಸನ್ನದುಗಳಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ 80.89  ಲಕ್ಷ ಲೀಟರ್ ಡ್ರಾಟ್ ಬಿಯರ್ ಹಾಗೂ  2024-25 ಆರ್ಥಿಕ ಸಾಲಿನಲ್ಲಿ 77.97 ಲಕ್ಷ ಲೀಟರ್ ಡ್ರಾಟ್ ಬಿಯರ್ ಮಾರಾಟವಾಗಿರುತ್ತದೆ ಎಂದು ಮಾಹಿತಿ ನೀಡಿದರು.

Post a Comment

0Comments

Post a Comment (0)