ಸಚಿವರಿಂದ ಸುಳ್ಳು ಮಾಹಿತಿ: ಮಹೇಶ್ ಟೆಂಗಿನಕಾಯಿ

varthajala
0

ಬೆಳಗಾವಿ: ಗೃಹಲಕ್ಷ್ಮಿ (Grihalakshmi Yojana) ಯೋಜನೆಯ ಹಣ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ; ಆದರೆ, ಸಚಿವರು ಈ ಕುರಿತಂತೆ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakayi)( ಅವರು ಆರೋಪಿಸಿದ್ದಾರೆ.ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ಸಂಬಂಧಿತ ಇಲಾಖಾ ಉಪ ನಿರ್ದೇಶಕರು ಫೆಬ್ರವರಿ, ಮಾರ್ಚ್ 2025ರ ಮೊತ್ತ ನೀಡಿಲ್ಲ ಎಂದಿದ್ದಾರೆ.

 ಮಾನ್ಯ ಸಚಿವರು ಈ ವಿಷಯದಲ್ಲಿ ಸದನಕ್ಕೆ ಸುಳ್ಳು ಹೇಳಿದ್ದಾರೆ ಎಂದು ದೂರಿದರು.ಇಡೀ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು. ಲಂಚ್, ಡಿನ್ನರ್ ಮೀಟಿಂಗ್ ಮಾಡಿ ಪ್ರಯೋಜನವಿಲ್ಲ ಎಂದು ಅವರು ಟೀಕಿಸಿದರು. ಅಭಿವೃದ್ಧಿಗಾಗಿ ಲಂಚ್, ಡಿನ್ನರ್, ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಬೇಕೆಂದು ಅವರು ಒತ್ತಾಯಿಸಿದರು.ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಜೊತೆ ಅಭಿವೃದ್ಧಿ ಕುರಿತು ಸಭೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.


Post a Comment

0Comments

Post a Comment (0)