ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವು ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ(ರಿ) ಇವರ ಸಹಯೋಗದಲ್ಲಿ 2025 ನೇ ಡಿಸೆಂಬರ್ 29 ರಂದು ಡಾ.ಆರ್ ಕೆ ಪಾಟೀಲ ಶೈಕ್ಷಣಿಕ ಸಾಮೂಹ ಪ್ರಾಂಗಣ ಸಂಖ ಮಹಾರಾಷ್ಟ್ರ ರಾಜ್ಯ ಇಲ್ಲಿ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಹಾಗೂ ಮಹಾರಾಷ್ಟ್ರ ಕನ್ನಡ ಶಾಲೆಗಳಿಗೆ ಕನ್ನಡ ಭಾμÁ ನಲಿ-ಕಲಿ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಜತ್ತ ಶಾಸಕರಾದ ಗೋಪಿಚಂದ್ ಪಡೋಲ್ಕರ್ ರವರು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿÀಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ರವರು ನಲಿ-ಕಲಿ ಕಲಿಕಾ ಸಾಮಗ್ರಿ ವಿತರಣೆ ಹಾಗೂ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗುರುಪಾದ ಶಿವಾಚಾರ್ಯರು ಗುಡ್ಡಾಪುರ ರವರ ದಿವ್ಯ ಸಾನಿಧ್ಯ ವಹಿಸಿದ್ದರು. ಗುರುಪಾದ್ ಕುಂಬಾರ್, ಡಾ. ಆರ್ ಕೆ ಪಾಟೀಲ್, ಚಂದ್ರಶೇಖರ್ ಗೊಬ್ಬಿ, ಗುರುಬಸು ಪಾಟೀಲ್, ಕಿರಣ್ ಪಾಟೀಲ್, ಧರೆಪ್ಪಾ ಕಟ್ಟಿಮನಿ, ಶ್ರೀಮತಿ ಕವಿತಾ ಪಾಟೀಲ್, ಸರದಾರ ಪಾಟೀಲ್, ವಿಜಯ ಪಾಟೀಲ್, ಮಲಿಕಜಾನ್ ಶೇಖ, ಗುರುಬಸು ವಗ್ಗೋಲಿ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಡಿ ಪ್ರಾಧಿಕಾರದ ಅನುದಾನದಲ್ಲಿ ನೀಡಿದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ(ರಿ) ಯ ನೂತನ ಶಾಲಾ ಕೊಠಡಿಯನ್ನು ಸಹ ಉದ್ಘಾಟನೆ ಮಾಡಲಾಯಿತು.