'ವಜ್ರಕ್ಷೇತ್ರ"ದಲ್ಲಿ ಹರಿದಾಸ ಮಂಜರಿ ಕಾರ್ಯಕ್ರಮ

varthajala
0

----------------------

ಬೆಂಗಳೂರು : ತ್ಯಾಗರಾಜನಗರದ ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನ "ವಜ್ರಕ್ಷೇತ್ರ"ದಲ್ಲಿ ಡಿಸೆಂಬರ್ 6, ಶನಿವಾರ ಸಂಜೆ 6-30ಕ್ಕೆ "ಹರಿದಾಸ ಮಂಜರಿ" ಕಾರ್ಯಕ್ರಮದಲ್ಲಿ ಕು|| ಬಿ. ಸಂಗೀತ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಲಿದ್ದು, ಇವರ ಗಾಯನಕ್ಕೆ ಮೃದಂಗ ವಾದನದಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ, ಕೀ-ಬೋರ್ಡ್ ವಾದನದಲ್ಲಿ ಶ್ರೀ ಕುಮಾರ್, ತಬಲಾ ವಾದನದಲ್ಲಿ ಶ್ರೀ ಅಭಿಜಿತ್ ಮತ್ತು ಜಂಬೆ ವಾದನದಲ್ಲಿ ಶ್ರೀ ಕೃಷ್ಣಕುಮಾರ್ ಸಾಥ್ ನೀಡಲಿದ್ದಾರೆ ಎಂದು ದೇವಸ್ಥಾನದ ಅರ್ಚಕರಾದ ಶ್ರೀ ನರಹರಿ ಆಚಾರ್ ತಿಳಿಸಿದ್ದಾರೆ.

 ಸ್ಥಳ : ಶ್ರೀ ನರಸಿಂಹಸ್ವಾಮಿ ದೇವಸ್ಥಾನ, "ವಜ್ರಕ್ಷೇತ್ರ". 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560028.

ವಿ.ಸೂ. ಈ ಕಾರ್ಯಕ್ರಮವು ಶ್ರೀ ವಜ್ರಕ್ಷೇತ್ರ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರವಿರುತ್ತದೆ.

Post a Comment

0Comments

Post a Comment (0)