ಬೆಂಗಳೂರು : ವಿಕಸನ ಟ್ರಸ್ಟ್ ವತಿಯಿಂದ ಡಿಸೆಂಬರ್ 7, ಭಾನುವಾರ ಸಂಜೆ 4-30ಕ್ಕೆ ಮೇರು ಕವಿ ಡಾ|| ಎಚ್.ಎಸ್. ವೆಂಕಟೇಶ ಮೂರ್ತಿ ಮತ್ತು 'ರಿದಮ್ ಕಿಂಗ್' ಶ್ರೀ ಎಸ್. ಬಾಲಿ, ಇವರ ನೆನಪಿನಲ್ಲಿ "ಗಾನ ನಮನ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸುಗಮಸಂಗೀತ ಗಾಯಕರಾದ ಶ್ರೀ ಶ್ರೀನಿವಾಸ ಉಡುಪ ವಹಿಸುವರು ಶ್ರೀಮತಿ ಅಪರ್ಣಾ ನರೇಂದ್ರ, ಶ್ರೀ ನಿತಿನ್ ರಾಜಾರಾಂ ಶಾಸ್ತ್ರಿ, ವಿಕಸನ ಹಾಗೂ ಗುರುಕುಲಂ ಮಕ್ಕಳು"ಗಾನ ನಮನ" ಸಲ್ಲಿಸುವರು. ವಾದ್ಯ ಸಹಕಾರದಲ್ಲಿ-ಶ್ರೀ ಕೃಷ್ಣ ಉಡುಪ, ಶ್ರೀ ಜಿ. ಎಲ್. ರಮೇಶ್ ಕುಮಾರ್, ಶ್ರೀ ಆರ್. ಲೋಕಿ ಮತ್ತು ಶ್ರೀ ಎನ್. ಗುರುರಾಜ್. ನಿರೂಪಣೆ : ಶ್ರೀ ದಿವಾಕರ ಕಶ್ಯಪ್. ಸ್ಥಳ : ಶ್ರೀ "ಶಂಕರ ಕೃಪ" ಸಭಾಂಗಣ, ಶ್ರೀ ಶೃಂಗೇರಿ ಶಾರದಾಂಬಾ ದೇವಾಲಯ, ಗಿರಿನಗರ, ಬೆಂಗಳೂರು-85.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅಪರ್ಣಾ ನರೇಂದ್ರ ವಿನಂತಿಸಿದ್ದಾರೆ.
