ಆಟೋ ಘಟಕದ ಅಧ್ಯಕ್ಷರಾಗಿ ತಾಜುದ್ದೀನ್ ಪದಗ್ರಹಣ

varthajala
0

 ಬೆಂಗಳೂರು: ಆಟೋ ಚಾಲಕರು ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ನಿಮ್ಮ ಕಷ್ಟ ಸುಖಗಳಿಗೆ ಜಯ ಕರ್ನಾಟಕ ಸಂಘಟನೆ ಯಾವತ್ತು ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ, ಅದಕ್ಕೆ ನೀವು ಕಟಿ ಬದ್ಧರಾಗಿರಬೇಕು ಎಂದು ಜಯ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ಬಿ ಎನ್ ಜಗದೀಶ್ ತಿಳಿಸಿದರು.ಬೆಂಗಳೂರಿನ ಆನಂದ್ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ನಗರ ಆಟೋ ಘಟಕದ ಅಧ್ಯಕ್ಷರನ್ನಾಗಿ ಸಿಎಂ ತಾಜ್ ಉದ್ದೀನ್ ಅವರನ್ನು ನೇಮಕ ಮಾಡಿ ಆದೇಶ ಪತ್ರ ನೀಡುವ ಮೂಲಕ ಪದಗ್ರಹಣ ಮಾಡಿ ಮಾತನಾಡಿದರು, ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘಗಳು ಇದ್ದಾವೆ ಯಾವುದೇ ಸಂಘಟನೆ ಆಗಲಿ ಒಳ್ಳೆ ಕೆಲಸ ಮಾಡುವವರಿದ್ದರೆ ಅವರಿಗೆ ಕೈಜೋಡಿಸುವುದು ಆಟೋ ಚಾಲಕರ ಕರ್ತವ್ಯವಾಗಿದೆ. ಆದರೆ ಒಂದು ಸಂಘಟನೆಯವರು ಮತ್ತೊಂದು ಸಂಘಟನೆಯವರು ಕಾಲೆಳೆಯುವ ಕೆಲಸವನ್ನು ಯಾರು ಮಾಡಬಾರದು ಎಂದು ಆಟೋ ಚಾಲಕರಿಗೆ ಕಿವಿಮಾತು ಹೇಳಿದರು.

ಜಯ ಕರ್ನಾಟಕ ಕಾನೂನು ಘಟಕದ ಅಧ್ಯಕ್ಷರು ಹಾಗೂ ವಕೀಲರಾದ ನಾರಾಯಣಸ್ವಾಮಿ ಕಾನೂನು ಡೈರಿ ಬಿಡುಗಡೆ ಮಾಡಿ ಮಾತನಾಡಿ, ಆಟೋ ಚಾಲಕರಿಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ ಕಾನೂನು ವಿಚಾರದಲ್ಲಿ ಯಾವುದೇ ತೊಡಕುಗಳು ಬಂದರೂ ಸಹ ಅವರಿಂದ ಯಾವುದೇ ಹಣವನ್ನು ಪಡೆಯದೆ ಕಾನೂನು ವಿಚಾರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಹಾಗೂ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.ಆಟೋ ಚಾಲಕರು ಯಾವತ್ತೂ ಕಾನೂನನ್ನು ಉಲ್ಲಂಘನೆ ಮಾಡದೆ, ನಿಯಮ ಬಾಹಿರವಾಗಿ ಚಾಲನೆ ಮಾಡದೆ ಪ್ರಯಾಣಿಕರಿಂದ ಯಾವುದೇ ತೊಂದರೆಗಳನ್ನು ಮಾಡಿಕೊಳ್ಳದೆ ನಿಯಮಾನುಸಾರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲಿ ಎಂದರು. ಆಟೋ ಚಾಲಕರ ಕಲ್ಯಾಣ ನಿಧಿಗೆ 50,000 ದಣಿಗೇನು ಸಹ ನೀಡಿದರು. 


ಜಯ ಕರ್ನಾಟಕ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಯೋಗಾನಂದ ಮಾತನಾಡಿ, ಆಟೋ ಸಂಘಟನೆಗಳಲ್ಲಿ ಒಮ್ಮತದ ಅಭಿಪ್ರಾಯಗಳು ಇಲ್ಲ, ಬರೀ ಒಂದೊಂದು ಸಂಘಟನೆಗಳು ಒಂದೊಂದು ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತದೆ ಅವುಗಳನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ ಕೆಲವರು ಕಾಲೆಳೆಯುವ ಕೆಲಸಗಳನ್ನು ಮಾತ್ರ ಮಾಡಿಕೊಂಡಿದ್ದಾರೆ ಅವರಿಗೆ ಅರಿವಾಗಬೇಕು ಎಂದರು.

ಆಟೋ ಚಾಲಕರ ಸಂಘಟನೆಗಳು ಎಲ್ಲರೂ ಸಹ ಒಂದು ಗುಡಿದಾಗ ಮಾತ್ರ ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ಹೇಳಿಕೊಳ್ಳಲು ಸಹಕಾರಿಯಾಗುತ್ತದೆ, ಹಾಗೆ ಜಯ ಕರ್ನಾಟಕ ಸಂಘದಿಂದ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಜಯ ಕರ್ನಾಟಕದ

ಆಟೋ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ನೇಮಕಾತಿ ಪತ್ರವನ್ನು ನೀಡಲಾಯಿತು. ಈ ವೇಳೆ ಕಾನೂನು ಘಟಕದ ಮಾಜಿ ಅಧ್ಯಕ್ಷರಾದ ಅರವಿಂದ್ ಕಾಮತ್,ವಕೀಲರು, ಸಿಎಂ ತಾಜ್ ಉದ್ದೀನ್ ,ಬೆಂಗಳೂರು ಆಟೋ ಘಟಕದ ನೂತನ ಅಧ್ಯಕ್ಷ, ನಟರಾಜ್, ಬೆಂ.ಜಿ.ಕಾರ್ಯಾಧ್ಯಕ್ಷರು,

ಅರಸಪ್ಪ, ಬೆಂ.ಆಟೋ ಗೌ.ಅಧ್ಯಕ್ಷ ಅನಂತರಾಮು, ಕಾರ್ಯಧ್ಯಕ್ಷರು, ನಾಗರಾಜು,ಕಾರ್ಯಧ್ಯಕ್ಷರು

ಮುನಿಸ್ವಾಮಿ ಸೇರಿದಂತೆ ಆಟೋ ಚಾಲಕರು ಉಪಸ್ಥಿತರಿದ್ದರು.


Post a Comment

0Comments

Post a Comment (0)