ಸಮಾರಂಭದಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಶ್ರೀಯುತ ಜಿ ಸಿ ಮಂಜುನಾಥ್ ನಿವೃತ್ತ ಡಿವೈಎಸ್ಪಿ ಹಾಗೂ ಶ್ರೀಯುತ ತಿಮ್ಮಯ್ಯನವರು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ರವರು ಹಾಗೂ ಶ್ರೀಯುತ ವೆಂಕಟರಾಮ್ ರವರು ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು ನಿವೃತ್ತ ಪೊಲೀಸರ ಆರೋಗ್ಯ ವಿಮೆ ಹಾಗೂ ಹಲವು ವಿಚಾರಗಳ ಬಗ್ಗೆ ಮುಂದೆ ಅವಿರೋಧವಾಗಿ ಆಯ್ಕೆಯಾಗಿರುವ ಹೊಸ ಸಮಿತಿಯು ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಸರ್ವಾನುಮತದಿಂದ ತೀರ್ಮಾನಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀಯುತ ಡಾ. ಸಲೀಂ ರವರನ್ನು ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಶ್ರೀಯುತ ಸಿಮಂತ್ ಕುಮಾರ್ ಸಿಂಗ್ ರವರನ್ನು ಹೊಸ ಪದಾಧಿಕಾರಿಗಳು ಭೇಟಿಯಾಗಿ ಸಂಘದ ಬೆಳವಣಿಗೆಯ ಸಹಕಾರ ಕೋರುವ ಬಗ್ಗೆ ಅವರನ್ನು ಸಂಪರ್ಕಿಸಲು ಮುಖ್ಯ ಚುನಾವಣಾಧಿಕಾರಿಗಳಾದ ಜಿ ಸಿ ಮಂಜುನಾಥ್ ರವರು ಸಲಹೆ ಸೂಚನೆಗಳನ್ನು ನೀಡಿದರು