ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆ ಹಿನ್ನೆಲೆ ಎಂ- .ಜಿ.ರೋಡ್–ಬ್ರಿಗೇಡ್ ರೋಡ್‌ನಲ್ಲಿ ಕ್ಷೇತ್ರ ಪರಿಶೀಲನೆ

varthajala
0

ಬೆಂಗಳೂರು : ನಗರದ ಪೊಲೀಸ್ ಆಯುಕ್ತರಾದ (Police Commissioner) ಸೀಮಂತ್ ಕುಮಾರ್ ಸಿಂಗ್ (Seemanth Kumar Singh) ಅವರು, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ (New Year Celebration)ಆಚರಣೆಗಳಿಗಾಗಿ ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳು ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸುವ ಸಲುವಾಗಿ, ಇಂದು ಸಂಜೆ ಬೆಂಗಳೂರು ನಗರದ ಪ್ರಮುಖ ಆಚರಣಾ ವಲಯಗಳಾದ ಎಂ.ಜಿ.ರೋಡ್–ಬ್ರಿಗೇಡ್ ರೋಡ್ ಮಾರ್ಗದಲ್ಲಿ ವ್ಯಾಪಕ ಕ್ಷೇತ್ರ ಪರಿಶೀಲನೆ ನಡೆಸಿದರು. ನೆನ್ನೆ ದಿನ ಇಂದಿರಾನಗರದಲ್ಲಿ ಪರಿಶೀಲನೆ ನಡೆಸಿದ್ದು, ನಾಳೆಯೂ ಕೋರಮಂಗಲ ಹಾಗೂ ಇತರ ಕ್ಷೇತ್ರಗಳಲ್ಲಿ ಪರಿಶೀಲನೆಯನ್ನು ಹಮ್ಮಿಕೊಂಡಿರುತ್ತಾರೆ. 


ಬೃಹತ್ ಸಂಖ್ಯೆಯ ಜನಸಂದಣಿ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್‌ರಿಂದ ರೂಪಿಸಲಾದ ಸಮಗ್ರ ಬಂದೋಬಸ್ತ್ ಹಾಗೂ ಜನಸಂದಣಿ ನಿರ್ವಹಣಾ ಯೋಜನೆಯಡಿ ನೆಲಮಟ್ಟದ ಸಿದ್ಧತೆಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಈ ಪರಿಶೀಲನೆ ಕೈಗೊಳ್ಳಲಾಯಿತು. ಸಮಾಜವಿರೋಧಿ ಚಟುವಟಿಕೆಗಳನ್ನು ತಡೆಯುವುದು, ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಹಾಗೂ ತುರ್ತು ಸೇವೆಗಳ ನಿರಂತರ ಪ್ರವೇಶವನ್ನು ಖಚಿತಪಡಿಸುವುದರ ಮೇಲೆ ವಿಶೇಷ ಗಮನ ನೀಡಲಾಯಿತು.

ಹಾಜರಿದ್ದ ಹಿರಿಯ ಅಧಿಕಾರಿಗಳು

ಕ್ಷೇತ್ರ ಪರಿಶೀಲನೆ ವೇಳೆ ಪೊಲೀಸ್ ಆಯುಕ್ತರೊಂದಿಗೆ ಬೆಂಗಳೂರು ನಗರ ಪೊಲೀಸ್‌ನ ಹಿರಿಯ ಅಧಿಕಾರಿಗಳು ಹಾಜರಿದ್ದರು. ಅವರಲ್ಲಿ: ಶ್ರೀ ಸಿ. ವಂಶಿ ಕೃಷ್ಣ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು (ಪಶ್ಚಿಮ) ಶ್ರೀ ಕಾರ್ತಿಕ್ ರೆಡ್ಡಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಶ್ರೀ. ಸಾಹಿಲ್ ಬಾಗ್ಲಾ, ಐಪಿಎಸ್ ಉಪ ಪೊಲೀಸ್ ಆಯುಕ್ತರು (ಸಂಚಾರ ಪೂರ್ವ), ಶ್ರೀ ಅನೂಪ್ ಶೆಟ್ಟಿ, ಐಪಿಎಸ್, ಉಪ ಪೊಲೀಸ್ ಆಯುಕ್ತರು (ಸಂಚಾರ ಪಶ್ಚಿಮ), ಶ್ರೀ ಅಕ್ಷಯ್ ಹಾಕೇ, ಐಪಿಎಸ್ – ಉಪ ಪೊಲೀಸ್ ಆಯುಕ್ತರು (ಕೇಂದ್ರ) ಇವರೊಂದಿಗೆ ಪೊಲೀಸ್ ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (ಉಃಂ) ಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ಸ್ಥಳದಲ್ಲಿನ ಸಿದ್ಧತೆಗಳು

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆಗಳಿಗಾಗಿ ಸಿದ್ಧತೆಗಳು ಸುಮಾರು ಒಂದು ತಿಂಗಳ ಹಿಂದೆಯೇ ಆರಂಭಗೊAಡಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಂಬAಧಿತ 

ಹಿತಾಸಕ್ತಿದಾರ ಇಲಾಖೆಗಳೊಂದಿಗೆ ಹಲವು ಸುತ್ತಿನ ಸಮನ್ವಯ ಸಭೆಗಳು ನಡೆಸಲಾಗಿದೆ. ಪ್ರಸ್ತುತ ಹಂತದಲ್ಲಿ, ಕಾರ್ಯಾಚರಣಾತ್ಮಕ ಯಾವುದೇ ಕೊರತೆಗಳಿದ್ದರೆ ಅವನ್ನು ಗುರುತಿಸಿ ಪರಿಹರಿಸುವ ಸಲುವಾಗಿ ತೀವ್ರ ಸ್ಥಳೀಯ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ.

ಜನಸಂದಣಿಯ ವರ್ತನೆಯನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಲು, ಕ್ರಿಸ್‌ಮಸ್ ಈವ್ ಹಾಗೂ ಕ್ರಿಸ್‌ಮಸ್ ದಿನದಂದು ಕ್ಷೇತ್ರ ಭೇಟಿ ಯೋಜಿಸಲಾಗಿದ್ದು, ಈ ದಿನಗಳ ಜನಸಂದಣಿ ಹೊಸ ವರ್ಷದ ಈವ್‌ನಲ್ಲಿ ನಿರೀಕ್ಷಿಸಲಾದ ಪ್ರಮಾಣ ಮತ್ತು ಸ್ವರೂಪಕ್ಕೆ ಸಮಾನವಾಗಿರುತ್ತದೆ.

ಜನಸಂದಣಿ ನಿರ್ವಹಣೆ ಮತ್ತು ಪ್ರವೇಶ ನಿಯಂತ್ರಣ ಕ್ರಮಗಳು

ಹಿಂದಿನ ವರ್ಷಗಳಂತೆ ಎಂ.ಜಿ.ರೋಡ್ ಹಾಗೂ ಬ್ರಿಗೇಡ್ ರೋಡ್‌ಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಅತಿಯಾದ ಜನಸಂದಣಿಯನ್ನು ತಪ್ಪಿಸಲು ಹಾಗೂ ಪಾದಚಾರಿಗಳು, ತುರ್ತು ವಾಹನಗಳು ಮತ್ತು ಪೊಲೀಸ್ ಘಟಕಗಳ ಸುರಕ್ಷಿತ ಸಂಚಾರಕ್ಕಾಗಿ ನಿಯಂತ್ರಿತ ಹಾಗೂ ನಿಯಮಿತ ಪ್ರವೇಶ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಜನಸಂದಣಿಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ನಿಗದಿತ ಹೋಲ್ಡಿಂಗ್ ಪ್ರದೇಶಗಳನ್ನು ಗುರುತಿಸಲಾಗಿದೆ.

ಹಿಂದಿನ ವರ್ಷಗಳಂತೆ ಬ್ರಿಗೇಡ್ ರೋಡ್‌ಗೆ ಮುಕ್ತ ಪ್ರವೇಶ ಸಾಧ್ಯವಿರುವುದಿಲ್ಲ ಎಂಬುದನ್ನು ಮನಗಂಡು ನಾಗರಿಕರು ತಮ್ಮ ಸಂಚಾರವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಹಾಗೂ ಈ ಕ್ರಮಗಳಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.

ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗಳು


ಎಂ.ಜಿ.ರೋಡ್ ಹಾಗೂ ಬ್ರಿಗೇಡ್ ರೋಡ್ ವಲಯಗಳಲ್ಲಿ ಯಾವುದೇ ಪಾರ್ಕಿಂಗ್‌ಗೆ ಅನುಮತಿ ಇರುವುದಿಲ್ಲ. ಸಾರ್ವಜನಿಕರು ಮುಖ್ಯ ಆಚರಣಾ ಪ್ರದೇಶಗಳ ಹೊರಭಾಗದಲ್ಲಿರುವ ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಬಳಸಿಕೊಂಡು, ಅಲ್ಲಿಂದ ನಡೆದುಕೊಂಡು ಅಥವಾ ಸಾರ್ವಜನಿಕ ಸಾರಿಗೆ ಮೂಲಕ ಸಮೀಪದ ಸ್ಥಳಗಳಿಗೆ ಆಗಮಿಸುವಂತೆ ಸಲಹೆ ನೀಡಲಾಗಿದೆ. ಸಂಚಾರ ದಟ್ಟಣೆ ಕಡಿಮೆಗೊಳಿಸಿ, ತುರ್ತು ಪ್ರತಿಕ್ರಿಯೆಗೆ ಅಡಚಣೆ ಆಗದಂತೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

ತಂತ್ರಜ್ಞಾನ, ನಿಗಾವ್ಯವಸ್ಥೆ ಮತ್ತು ಮೂಲಸೌಕರ್ಯ ಸಿದ್ಧತೆ

ಪರಿಶೀಲನೆ ವೇಳೆ ಪೊಲೀಸ್ ಆಯುಕ್ತರು ಕೆಳಕಂಡ ಅಂಶಗಳನ್ನು ಪರಿಶೀಲಿಸಿದರು:

• ಸಿಸಿಟಿವಿ ವ್ಯಾಪ್ತಿ ಮತ್ತು ನೇರ ನಿಗಾವ್ಯವಸ್ಥೆ

• ಎಐ ಆಧಾರಿತ ಜನಸಂದಣಿ ಚಲನವಲನ ವಿಶ್ಲೇಷಣಾ ವ್ಯವಸ್ಥೆಗಳ ನಿಯೋಜನೆ

• ಬ್ಯಾರಿಕೇಡಿಂಗ್ ಹಾಗೂ ಪ್ರವೇಶ ನಿಯಂತ್ರಣ ವಿನ್ಯಾಸಗಳು

• ತುರ್ತು ಪ್ರತಿಕ್ರಿಯೆ ಮತ್ತು ತೆರವು ಪ್ರೋಟೋಕಾಲ್‌ಗಳು

ಈ ಕ್ರಮಗಳು ನೈಜ ಸಮಯದಲ್ಲಿ ಮೇಲ್ವಿಚಾರಣೆ, ಜನಸಂದಣಿ ಒತ್ತಡದ ಬಿಂದುಗಳನ್ನು ಮುಂಚಿತವಾಗಿ ಗುರುತಿಸುವುದು ಹಾಗೂ ಅಗತ್ಯವಿದ್ದಲ್ಲಿ ತ್ವರಿತ ಹಸ್ತಕ್ಷೇಪಕ್ಕೆ ನೆರವಾಗಲಿವೆ.

#CelebrateResponsibly – ನಾಗರಿಕರಿಗೆ ಮನವಿ

ಬೆಂಗಳೂರು ನಗರ ಪೊಲೀಸ್‌ನ #CelebrateResponsibly  ಸಾಮಾಜಿಕ ಮಾಧ್ಯಮ ಅಭಿಯಾನದ ಬಗ್ಗೆ ಪೊಲೀಸ್ ಆಯುಕ್ತರು ವಿವರಿಸಿದರು. ಈ ಅಭಿಯಾನವು ನಾಗರಿಕರು ಸೌಜನ್ಯ, ಸಂಯಮ ಹಾಗೂ ಕಾನೂನು ರಕ್ಷಕರೊಂದಿಗೆ ಸಹಕಾರದಿಂದ ಆಚರಣೆ ನಡೆಸುವಂತೆ ಪ್ರೋತ್ಸಾಹಿಸುತ್ತದೆ. ನಿಯಮಿತ ಸಲಹೆಗಳು, ಸಂಚಾರ ಮಾಹಿತಿ ಮತ್ತು ಸುರಕ್ಷತಾ ಸೂಚನೆಗಳನ್ನು ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.

ನಾಗರಿಕರು (ಮೇಲಿನ ಚಿತ್ರದಲ್ಲಿರುವಂತೆ) ಬೆಂಗಳೂರು ನಗರ ಪೊಲೀಸ್ ವಿತರಿಸುವ ಕ್ಯೂಆರ್ ಕೋಡ್ ಅನ್ನು ಸ್ಕಾö್ಯನ್ ಮಾಡಬಹುದು ಅಥವಾ ಹೊಸ ವರ್ಷದ ಅಧಿಕೃತ ಮಾಹಿತಿ ಪುಟವನ್ನು ಭೇಟಿ ಮಾಡಬಹುದು:

https://bcp.karnataka.gov.in/86/new-year-2026/en

ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ತಕ್ಷಣವೇ 112 ಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

ಬೆಂಗಳೂರು ನಗರ ಪೊಲೀಸ್ ಇಲಾಖೆ ಸುರಕ್ಷಿತ, ಭದ್ರ ಮತ್ತು ಶಾಂತಿಯುತ ಹಬ್ಬದ ವಾತಾವರಣವನ್ನು ಖಚಿತಪಡಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪೊಲೀಸ್ ಆಯುಕ್ತರು ಪುನರುಚ್ಚರಿಸಿದರು. ಆದರೆ, ಭಾರಿ ಪ್ರಮಾಣದ ಸಾರ್ವಜನಿಕ ಆಚರಣೆಗಳಲ್ಲಿ ಸುರಕ್ಷತೆ ಎಂಬುದು ಎಲ್ಲರ ಸಂಯುಕ್ತ ಜವಾಬ್ದಾರಿಯಾಗಿದೆ. ಆದ್ದರಿಂದ ನಾಗರಿಕರು ಪೊಲೀಸ್ ಸಲಹೆಗಳನ್ನು ಪಾಲಿಸಿ, ಸಹಕರಿಸಿ, ಜವಾಬ್ದಾರಿಯುತವಾಗಿ ಆಚರಿಸುವ ಮೂಲಕ ಎಲ್ಲರೂ ಸಂತೋಷದಿAದ ಹಾಗೂ ಯಾವುದೇ ಅಹಿತಕರ ಘಟನೆಗಳಿಲ್ಲದೆ ಹೊಸ ವರ್ಷವನ್ನು ಸ್ವಾಗತಿಸುವಂತೆ ಮನವಿ ಮಾಡಲಾಗಿದೆ.

Post a Comment

0Comments

Post a Comment (0)