ರಾಮಕೃಷ್ಣಮಠದಲ್ಲಿ ವಿಶೇಷ ಪುಸ್ತಕ ಮೇಳ

varthajala
0

 ಬೆಂಗಳೂರು: ನಗರದ ಬಸವನಗುಡಿಯ ರಾಮಕೃಷ್ಣಮಠದಲ್ಲಿ ವಿಶೇಷ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.


ಡಿಸೆಂಬರ್ 25ರಿಂದ ಆರಂಭವಾಗಿರುವ ಈ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ ಜನವರಿ12ರವರೆಗೂ ನಡೆಯಲಿದೆ. ಮೇಳದಲ್ಲಿ ಪ್ರತಿ ಪುಸ್ತಕಗಳಿಗೆ ಶೇ.10ರಿಂದ ಶೇ.50ರವರೆಗೆ ವಿಶೇಷ ರಿಯಾಯಿತಿ ದೊರೆಯಲಿದೆ.ಮಠದ ಆವರಣದಲ್ಲಿ ಅನಾವರಣಗೊಂಡಿರುವ ಈ ಪುಸ್ತಕ ಮೇಳವನ್ನು ಹಿರಿಯ ಸ್ವಾಮೀಜಿ ಸ್ವಾಮಿ ಆತ್ಮವಿದಾನಂದಜೀ ಮತ್ತು ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜೀ ಗುರುವಾರ ಉದ್ಘಾಟಿಸಿದರು. ಮೇಳದಲ್ಲಿ ರಾಮಕೃಷ್ಣ-ವಿವೇಕಾನಂದ ಹಾಗೂ ವೇದಾಂತ ಸಾಹಿತ್ಯ, ಧ್ಯಾನ-ಯೋಗದ ಕುರಿತ ಗ್ರಂಥಗಳು, ವ್ಯಕ್ತಿತ್ವವಿಕಾಸನ, ಚಾರಿತ್ರ್ಯ ನಿರ್ಮಾಣ ಕುರಿತ ಪುಸ್ತಕಗಳು, ಮಕ್ಕಳಿಗೆ ರಾಮಾಯಣ, ಮಹಾಭಾರತ, ಪುರಾಣ ಕಥೆಗಳ ಚಿತ್ರಕಥೆಗಳ ಪುಸ್ತಕಗಳು ಸೇರಿದಂತೆ ಹಲವಾರು ಪುಸ್ತಕಗಳು ಲಭ್ಯವಿವೆ. ಆಸಕ್ತರು ಈ ಪುಸ್ತಕ ಮೇಳದ ಪ್ರಯೋಜನ ಪಡೆಯಬಹುದಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ. 

ರಾಮಕೃಷ್ಣ ಮಠದ ವಾರ್ಷಿಕೋತ್ಸವ ಮತ್ತು ರಾಷ್ಟ್ರೀಯ ಯುವ ದಿನಾಚರಣೆ

ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ವತಿಯಿಂದ ಭಗವಾನ್ ಶ್ರೀರಾಮಕೃಷ್ಣಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ವಾರ್ಷಿಕ ಜನ್ಮದಿನೋತ್ಸವದ ಅಂಗವಾಗಿ ವಾರ್ಷಿಕೋತ್ಸವವನ್ನು ಇದೇ 2026 ಜನವರಿ 1ರಿಂದ ಜನವರಿ 11ರವರೆಗೆ ಮಠದ ಆವರಣದಲ್ಲಿ ಆಯೋಜಿಸಲಾಗಿದೆಇದರೊಂದಿಗೆ ಜನವರಿ 12ರಂದು ರಾಷ್ಟ್ರೀಯ ಯುವ ದಿನಾಚರಣೆಯು ನಡೆಯಲಿದೆ.ಹನ್ನೊಂದು ದಿನಗಳ ಕಾಲ ನಡೆಯುವ  ಉತ್ಸವದಲ್ಲಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಠದ ಆವರಣದಲ್ಲಿರುವ 'ಸ್ವಾಮಿ ವಿವೇಕಾನಂದ ಶತಾಬ್ದ ಸಭಾಂಗಣ'ದಲ್ಲಿ ಜರುಗಲಿವೆ.

ಕಾರ್ಯಕ್ರಮದ ಪ್ರಮುಖ ವಿವರಗಳು:·       ಜನವರಿ 6 (ಮಂಗಳವಾರ): ವಿದುಷಿ ಡಾಜಯಂತಿ ಕುಮರೇಶ್ ಅವರಿಂದ ಕರ್ನಾಟಕ ಸಂಗೀತ ವೀಣಾ ವಾದನ.

·        ಜನವರಿ 8 (ಗುರುವಾರ): ಪಂಡಿತ್ ಶ್ರೀ ಪ್ರವೀಣ್ ಗೋಡ್ಕಿಂಡಿ ಅವರಿಂದ ಹಿಂದೂಸ್ತಾನಿ ಬಾನ್ಸುರಿ ವಾದನ.

·       ಜನವರಿ 11 (ಭಾನುವಾರ): ವಿದ್ವಾನ್ ಶ್ರೀ ರಾಹುಲ್‌ ವೆಲ್ಲಾಳ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ.

Post a Comment

0Comments

Post a Comment (0)