ಬೆಂಗಳೂರು: 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ವಿದ್ಯಾನಿಕೇತನ ಶಾಲೆಯ ವ್ಯೊಮ್ ನಾಯ್ಡು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ವಿದ್ಯಾನಿಕೇತನ ಶಾಲೆಯು ಕಾರ್ಮೆಲ್ ಶಾಲೆ (B-70) ವಿರುದ್ಧ 410 ರನ್‌ಗಳ ಬೃಹತ್ ಜಯ ದಾಖಲಿಸಿದೆ.ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೋಮ್ ಆಟವು ಇನ್ನಿಂಗ್ಸ್ ಟೂರ್ನಿಯ ಅತ್ಯಂತ ಏಕಪಕ್ಷೀಯ ಪಂದ್ಯಗಳಲ್ಲಿ ಒಂದಾಗಿ ಸಾಕ್ಷಿಯಾಯಿತು.
ವಿದ್ಯಾನಿಕೇತನ ಶಾಲೆ ಮೊದಲು ಬ್ಯಾಟಿಂಗ್ ಮಾಡಿದ್ದು, ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 504 ರನ್‌ಗಳನ್ನು ಪಡೆಯಿತು. ಈ ಪೈಕಿ ವ್ಯೊಮ್ ನಾಯ್ಡು ಅವರ ಪಾಲು ಹೆಚ್ಚಿದ್ದು, 150 ಎಸೆತಗಳಲ್ಲಿ 283 ರನ್‌ಗಳನ್ನು ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಒಟ್ಟು 47 ಬೌಂಡರಿಗಳಿದ್ದವು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಕಾರ್ಮೆಲ್ ಶಾಲೆ ಕೇವಲ 20.5 ಓವರ್‌ಗಳಲ್ಲಿ 94 ರನ್‌ಗಳಿಗೆ ಸರ್ವಪತನಗೊಂಡಿತು.