ವಿಧೇಯಕಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಿ: ಸಭಾಧ್ಯಕ್ಷ ಯು.ಟಿ. ಖಾದರ್

varthajala
0

 ಬೆಳಗಾವಿ / ಬೆಂಗಳೂರು: ವಿಧೇಯಕಗಳ ಅಂಗೀಕಾರಕ್ಕೆ ವಿಧೇಯಕಗಳು ಮಂಡನೆ ಆದ ಸಂದರ್ಭದಲ್ಲಿ ವಿಧೇಯಕಗಳ ಪರಿಭಾμÉಯು ಕ್ಲಿಷ್ಟಕರವಾಗಿದ್ದು, ವಿಧೇಯಕಗಳಲ್ಲಿ ಬಳಸಿರುವ ಕನ್ನಡ ಭಾಷೆಯನ್ನು ಸರಳೀಕರಣಗೊಳಿಸಬೇಕು ಎಂದು ಹಲವು ಶಾಸಕರು ಅಭಿಪ್ರಾಯ ಪಟ್ಟರು. ಶಾಸಕರ ಅಭಿಪ್ರಾಯ ಆಲಿಸಿದ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ವಿಧೇಯಕಗಳ ಕುರಿತು ಚರ್ಚೆ ಮಾಡಲಿಕ್ಕೆ ಶಾಸಕರುಗಳಿಗೆ ಆಸಕ್ತಿ ಬೇಕು ಎಂದು ಹೇಳಿದರು.


ವಿಧಾನಸಭೆಯಲ್ಲಿ ಮಂಡಿಸುವ ವಿಧೇಯಕಗಳ ಬಗ್ಗೆ ಚರ್ಚಿಸಲು ಶಾಸಕರುಗಳು ಆಸಕ್ತಿ ತೋರಿಸಬೇಕು. ವಿಧೇಕಯಗಳನ್ನು ಮಂಡಿಸಿದ ಸಂದರ್ಭದಲ್ಲಿ ವಿಧೇಯಕಗಳ ಕುರಿತು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಂದ ವಿಧೇಯಕಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು.
ವಿಧೇಯಕವನ್ನು ಮಂಡಿಸಿದಾಗ ಸಂಬಂಧಪಟ್ಟ ಕಚೇರಿಯಿಂದ ಬಿಲ್‍ಗಳ ಕುರಿತು ಪರ್ಯಾಲೋಚಿಸಿ ಚಿಂತಿಸಿ, ಚರ್ಚೆ ಮಾಡಬೇಕು ಎಂದು ಶಾಸಕರಿಗೆ ತಿಳಿಸಿದರು.

Post a Comment

0Comments

Post a Comment (0)