ಚಾಮರಾಜನಗರ: ದೀಪವು ಮಾನವನ ಪರಿಶುದ್ಧತೆ ಹೆಚ್ಚಿಸಿ, ಅರಿವಿನ ಬೆಳಕನ್ನು ಅರ್ಪಿಸುವ ಗುಣವನ್ನು ಬೆಳೆಸುತ್ತದೆ ಶ್ರೀ ರಾಮಶೇಷ ಪಾಠಶಾಲೆಯ ಪ್ರಾಚಾರ್ಯ ಪ್ರದೀಪ್ ದೀಕ್ಷಿತ್ ತಿಳಿಸಿದರು.
ಅವರು ಶ್ರೀ ಪರಿಮಳ ರಾಮ ವಿದ್ಯಾ ಮಂದಿರದ ಆವರಣದಲ್ಲಿ ಜರುಗಿದ ದೀಪೋತ್ಸವ ಕಾರ್ಯಕ್ರಮ ಪೂಜೆ ಕಾರ್ಯಕ್ರಮ ಹಾಗೂ ದೀಪ ಪ್ರಜ್ವಲನೆ ಯಲ್ಲಿ ಮಾತನಾಡಿ ಕಾರ್ತಿಕ ಮಾಸದಲ್ಲಿ ಎಲ್ಲಾ ಕಡೆ ದೀಪ ಹಚ್ಚಿ ತಾಯಿ ಲಕ್ಷ್ಮಿಯನ್ನು ಆರಾಧಿಸುವ ಮೂಲಕ ಸಮಾಜದ ಸರ್ವರ ಹಿತವನ್ನು ಬಯಸುತ್ತೇವೆ. ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಜೀವನವನ್ನು ಸಂತೋಷದಿಂದ ಸಾಗುವ ಕಾರ್ಯ ಮಾಡೋಣ ಎಂದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕಾರ್ತಿಕ ಮಾಸ ದೀಪದ ಮಾಸವಾಗಿದೆ. ದೀಪವು ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುತ್ತದೆ. ಹಾಗೆಯ ಆರೋಗ್ಯದ ಪ್ರತೀಕವಾಗಿದೆ. ಪರಿಸರ ಶುದ್ಧಿ ಹಾಗೂ ಮನಸ್ಸು ಶಾಂತವಾಗಲು ಬೆಳಕು ಬಹಳ ಮುಖ್ಯ. ದೀಪ ಅಹಂಕಾರವನ್ನು ಹೋಗಲಾಡಿಸುತ್ತದೆ. ಸಮಾಜಕ್ಕೆ ಸೇವೆ ಸಲ್ಲಿಸುವ ಗುಣ ಬೆಳೆಸುತ್ತದೆ ಎಂದರು.
ರೋಟರಿ ಸಂಸ್ಥೆಯ ಚೈತನ್ಯ ಹೆಗಡೆ ದೀಪೋತ್ಸವ ಕಾರ್ಯಕ್ರಮಕ್ಕೆ ಶುಭ ಕೋರಿ ಚಾಮರಾಜನಗರದ ಬಹುತೇಕ ಎಲ್ಲ ಕಡೆ ದೀಪೋತ್ಸವ ಆಚರಿಸುವ ಮೂಲಕ ಭಕ್ತಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ಜನರು ಭಾರತೀಯ ಹಬ್ಬಗಳನ್ನು ಸಂತೋಷ ದಿಂದ ಆಚರಿಸಬೇಕು ಎಂದರು.
ವಿಶೇಷ ಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಚೇತನ್, ಮಾಣಿಕ್ ಚಂದ್, ಸಿ ರವಿ,ಹಸಿರು ಪಡೆ ಸತೀಶ್, ಸುಮಕ್ , ಶಮನ್ ,ಅಶ್ವಿನ್ ಇದ್ದರು.


