ವೈಕುಂಠ ಏಕಾದಶಿ ನಿಮಿತ್ತ ಪದ್ಮನಾಭ ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ

varthajala
0

 ಬೆಂಗಳೂರು -ಬೆಂಗಳೂರಿನ ಬನಶಂಕರಿ ಪದ್ಮನಾಭ ನಗರದ ಉತ್ತರ ಹಳ್ಳಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಇಂದು ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು.

 ಬೆಳಗಿನಿಂದ ರಾತ್ರಿಯವರೆಗೆ ಸುಮಾರು ಐವತ್ತು ಸಾವಿರ ಭಕ್ತರು ದರ್ಶನ ಪಡೆದರು. ಐವತ್ತು ಸಾವಿರ ಲಡ್ಡು ಪ್ರಸಾದವನ್ನು ಉಚಿತವಾಗಿ ಭಕ್ತರಿಗೆ ವಿತರಿಸಲಾಯಿತು. 

ಬೆಳಗಿನ ಸುಪ್ರಭಾತ, ಸಂಜೆ ವಿವಿಧ ತಂಡಗಳಿಂದ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು


Post a Comment

0Comments

Post a Comment (0)