ಹಾಸನದ ಅನ್ನಪೂರ್ಣೇಶ್ವರಿ ಕಲಾಸಂಘ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಲ್ಕು ದಿನ ಪೌರಾಣಿಕ ನಾಟಕೋತ್ಸವದಲ್ಲಿ ಮೂರು ಕುರುಕ್ಷೇತ್ರ. ಶನಿವಾರ ಒಂದೇ ದಿನ ಎರಡು. ಹಾಸನ ಗೊರೂರು ರಸ್ತೆಯಲ್ಲಿ ಹಾಸನದಿಂದ 5 ಕಿ.ಮೀ. ದೂರದಲ್ಲಿದೆ ಹನುಮಂತಪುರ. ಇಲ್ಲಿ ಕೆಲವು ವರ್ಷಗಳ ಹಿಂದೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ.
ಬಹು ಎತ್ತರದ ನಿಂತ ಭಂಗಿಯ ಆಂಜನೇಯ ಮತ್ತು ಕುಳಿತ ಭಂಗಿಯಲ್ಲಿ ಈಶ್ವರನ ವರ್ಣಮಯ ಪ್ರತಿಮೆ ಹನುಮಂತಪುರ ಎಂಬ ಊರ ಹೆಸರಿಗೆ ಮೆರಗು ತಂದಿದೆ. ಶನಿವಾರ ಹಗಲು ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಲಕ್ಷಿö್ಮÃದೇವಿ ಕೃಪಾಪೋಷಿತ ನಾಟಕ ಮಂಡಳಿ ಎಲ್.ಐ.ಸಿ.ಪ್ರತಿನಿಧಿಗಳ ಬಳಗ ಹೆಚ್.ಎಲ್.ಪಾಲಾಕ್ಷಾಚಾರ್ ನಿರ್ದೇಶನದಲ್ಲಿ ಮತ್ತು ರಾತ್ರಿ ಹನುಮಂತಪುರ ಇಲ್ಲಿ ದೊಡ್ಡಘಟ್ಟ ಬೆಳ್ಳೂರು ಕ್ರಾಸ್ ಮಂಜುನಾಥ್ ನಿರ್ದೇಶನದಲ್ಲಿ ನಾಟಕ ಪ್ರದರ್ಶನವಿತ್ತು.
ಕಲಾಭವನದ ಕುರುಕ್ಷೇತ್ರದಲ್ಲಿ ಕೆ.ಬಿ.ಸತೀಶ್ ಶಿಕ್ಷಕರು ದುರ್ಯೋಧನ ಪಾತ್ರದಲ್ಲಿ ವೀರಾವೇಶದ ಮಾತು ಅಭಿನಯದಿಂದ ಪಾತ್ರಕ್ಕೆ ಗತ್ತುಗಮ್ಮತ್ತು ತುಂಬಿದರು. ಅಶೋಕ್ ತೇಜೂರು ವಿಧುರ ಮತ್ತು ಅರ್ಜುನ ಎರಡು ಪಾತ್ರಗಳಲ್ಲಿ ಉತ್ತಮ ಹಾಡುಗಾರಿಕೆಯಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ವಿಧುರನ ಹಾಡು ಕೇಳುತ್ತಿರಲು ಉದಯರವಿ ನಾಟಕ ವಿಡಿಯೋ ಕಳಿಸಲು ಮೆಸೇಜ್ ಹಾಕಿದರು. ಆ ಕೂಡಲೇ ಕೇಳಿಬಂದ ಹಾಡನ್ನು ವಿಡಿಯೋ ಮಾಡಿ ಕಳಿಸಿದೆ. ಅವರು ಆಗಲೇ ತಮ್ಮ ಚಾನಲ್‌ಗೆ ಹಾಕಿ ಹಿಂದಿರುಗಿಸಿದರು. ತಂತ್ರಜ್ಞಾನ ಎಷ್ಟು ಬೆಳೆದಿದೆ ಎಂದುಕೊAಡೆ. ಇತ್ತ ಶಕುನಿ ಪಾತ್ರಕ್ಕೆ ನಿಂಬೆಹಣ್ಣು ತಿರುವಿ ನಕ್ಕವರು ಹಂಗರಹಳ್ಳಿ ಮಂಜು. ಹಂಗರಹಳ್ಳಿಯ ಗೋವಿಂದರಾಜು ಹೆಚ್.ಕೆ. ಮತ್ತು ವಾಸು ಶ್ರೀಕೃಷ್ಣನ ಪಾತ್ರ ನಿರ್ವಹಿಸಿದರು. ಸಾತ್ಯಕಿ ಪಾತ್ರದ ಒಂದು ಹಾಡು (ಸೋಮನಹಳ್ಳಿ ಎಮ್ ರಂಗಸ್ವಾಮಿ) ಸೂತ್ರದಾರಿಯ ಎರಡು ಹಾಡು (ಸತೀಶ್ ದಿಡಗ) ಮಧುರವಾಗಿತ್ತು. ಅರ್ಧಕ್ಕೂ ಹೆಚ್ಚು ಪಾತ್ರಗಳು ಬರುವುದು ದರ್ಬಾರ್ ದೃಶ್ಯದಲ್ಲಿ. ಆಸ್ಥಾನದಲ್ಲಿ ಉಪಸ್ಥಿತರಿದ್ದವರು ಚಂದ್ರಶೇಖರ್ ಅಂಕನಹಳ್ಳಿ (ಕರ್ಣ) ಕಬ್ಬತ್ತಿಯ ಸಂತೋಷ್ (ದುಶ್ಯಾಸನ) ಶಂಕರಣ್ಣ (ದೃತರಾಷ್ಟç) ಯೋಗರಾಜ್ ಬಸವಘಟ್ಟ (ಭೀಷ್ಮ) ವೆಂಕಟೇಶ್ ಕೆ. (ಸೈಂಧವ). ಭೀಮನ ಕೈಕಟ್ಟಿ ಹಾಕುವ ದೃಶ್ಯದಲ್ಲಿ ಭೀಮನಾಗಿ ಎ.ಆರ್.ರವಿ ಅಂಕನಹಳ್ಳಿ ಪದೇ ಪದೇ ಪಾಂಚಾಲಿ ಎಂದು ಕಿರುಚುತ್ತಿರಲು ವೈಭವ ವೆಂಕಟೇಶ್ ಸಾರ್, ಇವರು ರಾತ್ರಿಯೆಲ್ಲಾ ಹೀಗೆ ಕನವರಿಸುವರು ಎಂದು ತಮಾಷೆಗೆ ಹೇಳಿ ಗಿಲ್ಲಿನಟನಂತೆ ಕಚಗುಳಿ ಕೊಟ್ಟರು.
ಗುಬ್ಬಿಯ ಸುರೇಶ್‌ಗೌಡರು ಗುಬ್ಬಿಯಲ್ಲಿ ಪ್ರಥಮ ಬಾರಿಗೆ ಜನವರಿ 17 ರಿಂದ 7 ದಿನ ನಾಟಕರತ್ನ ಡಾ. ಗುಬ್ಬಿ ವೀರಣ್ಣ ಕಲಾವೇದಿಕೆಯಲ್ಲಿ ಹಗಲು ನಾಟಕೋತ್ಸವ ಹಮ್ಮಿಕೊಂಡ ಕರಪತ್ರ ಕಳಿಸಿ ಕಲಾತಂಡಕ್ಕೆ ತಿಳಿಸಲು ವಿಶೇಷವಾಗಿ ದಕ್ಷಯಜ್ಞ ನಾಟಕ ಪ್ರದರ್ಶನ ವರದಿ ಓದಿ ಕೋರಿದ್ದರು. ಡಿ.ಬಿ.ನಾಗಮೋಹನ್ ನಂಬರ್ ಕಳಿಸಿ ಸಂಪರ್ಕಿಸಲು ತಿಳಿಸಿದೆ. ಸಂಜೆ ಆದಂತೆ ಅಂಕಪುರ ಎ.ಹೆಚ್.ಗಣೇಶ್ ಹನುಮಂತಪುರಕ್ಕೆ ಹೋಗೋಣವೇ ಎಂದರು. ಬೈಕ್‌ನಲ್ಲಿ ಹೊರಟೆವು. ಇಲ್ಲಿಯ ಮಂಜುನಾಥಚಾರ್ ತಮ್ಮ ಡ್ರಾಮ ಸೀನರಿ ಹೊಸದಾಗಿ ರೂಪಿಸಿದ್ದಾರೆ. ಮೇಕಪ್ ವಾಹನದಲ್ಲಿ ಜೋಡಿಸಿದ್ದ ನಾಟಕದ ಒಡವೆಗಳನ್ನು ತಾವೇ ಸ್ವತ: ರೂಪಿಸಿದ್ದು ಎಂದರು. ಕುಶಲಕರ್ಮಿ ಮಂಜುನಾಥ್ ಈ ಹಿಂದೆ ಗೊರೂರು ಹೇಮಾವತಿ ನದಿಯ ಮದ್ಯೆ ಸೀನರಿ ಹಾಕಿ ಅಲ್ಲಿ ಸಲೀಂ ತಂಡ ನಾಟಕ ಪ್ರದರ್ಶಿಸಿತ್ತು. ಶ್ರೀಕೃಷ್ಣ (ಗುರುಪ್ರಸಾದ್) ದುರ್ಯೋಧನ (ರವಿ ಬಿದರೆ) ಅರ್ಜುನ (ಚೈತನ್ಯ ರಂಗ ಹೆಚ್.ವಿ) ಮತ್ತು ಸೂತ್ರದಾರಿ (ವೆಂಕಟೇಶ್‌ಚಾರ್) ಪ್ರವೇಶಿಕೆಯನ್ನು ನೋಡಿ ಹಾಸನಕ್ಕೆ ವಾಪಸ್ಸಾದೆವು.