ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ / ಮಂಜೂರಾಗದೇ ಬಾಕಿ ಇರುವ ಸನ್ನದುಗಳನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂ.ಎಸ್.ಟಿ.ಸಿ. ಲಿಮಿಟೆಡ್‍ನ ಇ-ಪೋರ್ಟಲ್ ನಲ್ಲಿ ಇ-ಹರಾಜು ಮಾಡಲು ಜಾಲತಾಣ https://www.msteecommerce.com ಮೂಲಕ ಅರ್ಹ ಬಿಡ್ಡರ್ ಗಳಿಂದ ಬಿಡ್ಡುಗಳನ್ನು ಆಹ್ವಾನಿಸಲಾಗಿದೆ. ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (ಎಲ್‍ಒಎ) ನೀಡುವ ವರ್ಷವನ್ನು ಒಳಗೊಂಡಂತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.
ಕರ್ನಾಟಕ ರಾಜ್ಯಾದ್ಯಂತ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿದ್ದು ಬೆಂಗಳೂರು ನಗರ ಜಿಲ್ಲೆಗೆ 19 ಸಿಎಲ್ -2ಎ ಮತ್ತು 7 ಸಿಎಲ್-9ಎ ಸನ್ನದುಗಳನ್ನು ಹಂಚಿಕೆ ಮಾಡಿರುತ್ತಾರೆ. 2025 ನೇ ಡಿಸೆಂಬರ್ 22 ರಿಂದ ಬಿಡ್ಡುದಾರರ ನೋಂದಣಿ ಪ್ರಕ್ರಿಯೆ ಆನ್‍ಲೈನ್ ನಲ್ಲಿ ಪ್ರಾರಂಭವಾಗಿರುತ್ತದೆ. ಅರ್ಜಿದಾರರು ನೋಂದಣಿ ಶುಲ್ಕ ರೂ. 1000/- ಹಾಗೂ ಜಿಎಸ್‍ಟಿ 180 ರೂ.ಗಳನ್ನು ಪಾವತಿಸಬೇಕು ಹಾಗೂ ಪ್ರತಿ ಸನ್ನದಿಗೆ ಪ್ರತ್ಯೇಕವಾಗಿ ಅರ್ಜಿ ಶುಲ್ಕ ರೂ. 50000/- ಹಾಗೂ ಇಎಂಡಿ ಗಳನ್ನು ಆನ್‍ಲೈನ್ ನಲ್ಲಿ ಪಾವತಿಸಬೇಕು.
ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ವಲಯ 32 ಕ್ಕೆ 3 ಸಿಎಲ್ – 2ಎ, 1 ಸಿಎಲ್-9ಎ, ಚಾಮರಾಜಪೇಟೆ ವಲಯ 33 ಕ್ಕೆ 3 ಸಿಎಲ್ – 2ಎ, 1 ಸಿಎಲ್-9ಎ, ಬಸವನಗುಡಿ ವಲಯ 34 ಕ್ಕೆ 2 ಸಿಎಲ್ – 2ಎ, 1 ಸಿಎಲ್-9ಎ, ಹನುಮಂತ ನಗರ ವಲಯ 35 ಕ್ಕೆ 3 ಸಿಎಲ್ – 2ಎ, 1 ಸಿಎಲ್-9ಎ, ಪದ್ಮನಾಭನಗರ ವಲಯ 36 ಕ್ಕೆ 3 ಸಿಎಲ್ – 2ಎ, 1 ಸಿಎಲ್-9ಎ, ಬನಶಂಕರಿ ವಲಯ 37 ಕ್ಕೆ 3 ಸಿಎಲ್ – 2ಎ, 1 ಸಿಎಲ್-9ಎ ಮತ್ತು ಜೆ.ಪಿ. ನಗರ ವಲಯ 38 ಕ್ಕೆ 2 ಸಿಎಲ್ – 2ಎ, 1 ಸಿಎಲ್-9ಎ ಹಂಚಿಕೆಯಾಗಿದ್ದು, ಪ್ರತಿ ಸನ್ನದಿಗೆ ಮೂಲ ಬೆಲೆ 1,50,00,000/- ಹಾಗೂ ಇಎಂಡಿ ಮೊತ್ತ ಪ್ರತಿ ಸನ್ನದಿಗೆ ರೂ.3,00,000/- ಪಾವತಿಸಬೇಕು.
ಬೆಂಗಳೂರು ನಗರ ಜಿಲ್ಲೆಯ (ಬಿಯುಡಿ-6) ಸಂಭಾವ್ಯ ಬಿಡ್ಡುದಾರರಿಗೆ 2025 ನೇ ಡಿಸೆಂಬರ್ 24 ರಂದು ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋಟ್ರ್ಸ್ ಕ್ಲಬ್, ನಂ.17 /18, 11 ನೇ ಮುಖ್ಯರಸ್ತೆ, ಹೆಚ್ ಬಿಸಿಎಸ್ ಲೇಔಟ್, ಬೆಂಗಳೂರು ಇಲ್ಲಿ ಈಗಾಗಲೇ ತರಬೇತಿಯನ್ನು ಆಯೋಜಿಸಲಾಗಿರುತ್ತದೆ.
2026ನೇ ಜನವರಿ 14 ರಂದು ಮಧ್ಯಾಹ್ನ 3.00 ಗಂಟೆಯಿಂದ 5 ರವರೆಗೆ ನೇರ ಹರಾಜು ಆಯೋಜಿಸಲಾಗಿರುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್‍ಲೈನ್ ಮೂಲಕ ವ್ಯಾಲೆಟ್ ಗೆ ಹಣ ಪಾವತಿಸಿದ ನಂತರವೇ ಬಿಡ್ಡರ್ ಗಳು ಆನ್‍ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಆದ್ದರಿಂದ ಬಿಡ್ಡರ್‍ಗಳು ಭಾಗವಹಿಸಲು ಇಚ್ಚಿಸುವ ನಿರ್ದಿಷ್ಟ ಸ್ಲಾಟ್‍ನ ಹರಾಜು ಪ್ರಾರಂಭವಾಗುವ 48 ಗಂಟೆಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ ಪ್ರಕ್ರಿಯೆ ಸುಗಮವಾಗಿರುತ್ತದೆ.
ಮಾನ್ಯ ಅಬಕಾರಿ ಆಯುಕ್ತರು ಹೊರಡಿಸಿರುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆ ವೆಬ್‍ಸೈಟ್ https://stateexcise.karnataka. gov.in ಮತ್ತು ಎಂಎಸ್‍ಟಿಸಿ ಇ-ಹರಾಜು ಪೋರ್ಟಲ್ https://www.msteecommerce.com ನಲ್ಲಿ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗಾಂಧಿನಗರ ವಲಯ -32 ಅಬಕಾರಿ ನಿರೀಕ್ಷಕರಾದ ಮೀನಾಕ್ಷಿ ಕೆ.ವಿ, ಮೊಬೈಲ್ ಸಂಖ್ಯೆ 9606245806, ಚಾಮರಾಜಪೇಟೆ ವಲಯ -33 ಅಬಕಾರಿ ನಿರೀಕ್ಷಕರಾದ ರೂಪಾಬಾಯಿ ಮೊಬೈಲ್ ಸಂಖ್ಯೆ: 8861068294, ಬಸವನಗುಡಿ ವಲಯ -34 ಅಬಕಾರಿ ನಿರೀಕ್ಷರಾದ ಕಾಮಾಕ್ಷಿ ಉತ್ತಯ್ಯ ಮೊಬೈಲ್ ಸಂಖ್ಯೆ 9886857988 ಮತ್ತು ಉಪವಿಭಾಗ-11ರ ಅಬಕಾರಿ ಉಪ ಅಧೀಕ್ಷಕರಾದ ಹಿದಾಯತ್ ಖಲೀಲ್ ಮೊಬೈಲ್ ಸಂಖ್ಯೆ:9632178633, ಹನುಮಂತನಗರ ವಲಯ -35 ಅಬಕಾರಿ ನಿರೀಕ್ಷಕರಾದ ರಾಮು ಕೆ.ಸಿ. ಮೊಬೈಲ್ ಸಂಖ್ಯೆ 9535533598, ಪದ್ಮನಾಭನಗರ ವಲಯ -36 ಅಬಕಾರಿ ನಿರೀಕ್ಷಕರಾದ ಮಮತಾ ಎಂ.ಆರ್. ಮೊಬೈಲ್ ಸಂಖ್ಯೆ: 9900556621, ಬನಶಂಕರಿ ವಲಯ 37 ರ ಅಬಕಾರಿ ನಿರೀಕ್ಷಕರಾದ ಜಾನ್ ಪಿ.ಜಿ. ಮೊಬೈಲ್ ಸಂಖ್ಯೆ 9480915333, ಜೆ.ಪಿ.ನಗರ ವಲಯ 38 ಅಬಕಾರಿ ನಿರೀಕ್ಷಕರಾದ ಈರಪ್ಪ ಎಂ ಗೆಣ್ಣೂರು ಮೊಬೈಲ್ ಸಂಖ್ಯೆ 9902372428 ಮತ್ತು ಉಪವಿಭಾಗ -12ರ ಅಬಕಾರಿ ಉಪ ಅಧೀಕ್ಷಕರಾದ ರವಿಕುಮಾರ್ ಎಸ್ ಮೊಬೈಲ್ ಸಂಖ್ಯೆ: 6364685464 ಇವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ (ಬಿಯುಡಿ-6) ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.