ರೋಗಬಾಧಿತರಿಗೆ ಭರವಸೆಯಕಿರಣ: ನೆಮ್ಮದಿ ಉಪಶಾಮಕ ಆರೈಕೆಕೇಂದ್ರ

varthajala
0

ಬದುಕುಎಂಬುದು ಅನಿಶ್ಚಿತತೆಯ ಪಯಣ. ಎಷ್ಟೋ ವೇಳೆ ಈ ಪಯಣದಲ್ಲಿಎದುರಾಗುವ ಸವಾಲು, ಸಂಕಷ್ಟ, ನೋವು, ನಲಿವು, ಯಾತನೆಯಾರೂ ಊಹಿಸಲಾಗದು. ಅದರಲ್ಲೂಅನಿರೀಕ್ಷಿತವಾಗಿಅನೂಹ್ಯವಾಗಿಆರೋಗ್ಯ ಸಮಸ್ಯೆಗಳು ಬಂದರAತೂಯಾರಿಗೇ ಆಗಲಿ ಆಕಾಶವೇ ತಲೆಯಮೇಲೆ ಬಿದ್ದಂತಹಅನುಭವವಾಗುವುದು ಸರ್ವವೇದ್ಯ. ಸ್ವಾಸ್ಥö್ಯಎಂಬುದು ಶ್ರೀಮಂತ-ಬಡವಎAದು ನೋಡಿಕೊಂಡು ಬರುವುದಿಲ್ಲ. ಆದರೆ ಬಂದೆರಗುವ ಸ್ವಾಸ್ಥö್ಯ ಸಂಬAಧಿ ಸವಾಲುಗಳನ್ನು ದಿಟ್ಟವಾಗಿಎದುರಿಸಲುಆರ್ಥಿಕವಾಗಿ ಸದೃಢರಾಗಿರುವವರಿಗೆ ಸಾಧ್ಯವಾಗಬಹುದೇನೋ! ಆದರೆಆರ್ಥಿಕವಾಗಿ ಶಕ್ತರಲ್ಲದವರಿಗೆ ಬರಸಿಡಿಲಿನಂತೆಎರಗುವ ಮಾರಣಾಂತಿಕ ಕಾಯಿಲೆಗಳು ಅವರ ಬದುಕಿಗೊಂದುತಡೆಯಾಗಿಕಾಡಬಹುದು.

ಕಾನ್ಸರ್‌ನAತಹ ಕಾಯಿಲೆಗಳನ್ನು ಎದುರಿಸುವಾಗಆರ್ಥಿಕ ಸಂಕಷ್ಟದಲ್ಲಿರುವವರ ಕುಟುಂಬಗಳ ಗೋಳು, ನರಳಾಟ ಹೇಳತೀರದು. ಒಂದೆಡೆ ಆಳ-ಅಳತೆಗೆ ಸಿಗದ ವೈದ್ಯಕೀಯಖರ್ಚು; ಇನ್ನೊಂದೆಡೆ ಶತಾಯಗತಾಯ ಹೇಗಾದರೂ ಮಾಡಿರೋಗಪೀಡಿತಜೀವವನ್ನು ಉಳಿಸಿಕೊಳ್ಳುವ ಧಾವಂತ. ಕಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಆರಂಭಿಕ ಹಂತದಲ್ಲಿಯೇ ಗಮನಕ್ಕೆ ಬಂದು, ಆ ಹಂತದಲ್ಲೇ ಸಕಾಲಿಕ ವೈದ್ಯಕೀಯ ನೆರವಿನಿಂದಉಪಶಮನವಾದರೆ ಬಹಳ ಒಳ್ಳೆಯದು. ಆದರೆ, ಅಂತಿಮ ಹಂತತಲುಪಿ, ಕಾಯಿಲೆ ಉಲ್ಬಣಿಸಿ, ಇನ್ನು ನೋಡಿಕೊಳ್ಳಲಾಗದು; ಕಾಯಿಲೆ ನಿವಾರಣೆಯಾಗದುಎನ್ನುವಂತಹಅತAತ್ರ ಸ್ಥಿತಿಯಲ್ಲಿ ಆರೈಕೆ ಮಾಡಲಾಗದೆಖರ್ಚು-ವೆಚ್ಚ ಭರಿಸಲಾಗದೆ ಎಷ್ಟೋ ಕುಟುಂಬಗಳು ಪರಿತಪಿಸುವುದನ್ನು ನಾವು ನಿತ್ಯ ನೋಡುತ್ತೇವೆ. ಇಂತಹಕೈಬಿಟ್ಟತ್ರಿಶAಕು ಪರಿಸ್ಥಿತಿಯಲ್ಲಿ ಅಂತಹರೋಗಸAತ್ರಸ್ತರಆರೈಕೆಯನ್ನು ಮಾಡಲೇಬೇಕಾಗುತ್ತದೆ. ಇದಕ್ಕೆ ಸಮರ್ಪಕವಾದಆರ್ಥಿಕ ಸದೃಢತೆ ಹೊಂದಿರದ ಕುಟುಂಬಗಳು ತನ್ನ ಸದಸ್ಯರನ್ನುಅಸಹಾಯಕವಾಗಿ ಅಕಾಲಿಕವಾಗಿ ಕಣ್ಣೆದುರೇ ಕಳೆದುಕೊಳ್ಳಬೇಕಾದ ವಿಷಮಸ್ಥಿತಿ ಎದುರಿಸಬೇಕಾಗುತ್ತದೆ. ಇಂತಹದಾರುಣ ಸ್ಥಿತಿಯನ್ನು ಮನಗಂಡ ಸುಕೃತಿಚಾರಿಟಬಲ್ ಟ್ರಸ್ಟ್ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು; ಬಾಧಿತರಿಗೆಉಚಿತವಾಗಿ ವೈದ್ಯಕೀಯ ನೆರವು-ಶುಶ್ರೂಷೆ-ಆರೈಕೆದೊರಕಬೇಕು; ಅವರಿಗೆಉತ್ತಮಜೀವನ, ವಾತಾವರಣ ನೀಡಬೇಕು ಎಂಬ ದೀಕ್ಷೆತೊಟ್ಟು ಹೊರಟ ಹಾದಿಯೇ `ನೆಮ್ಮದಿ ಉಪಶಾಮಕ ಆರೈಕೆಕೇಂದ್ರ (ಪಾಲಿಯೇಟೀವ್‌ಕೇರ್ ಸೆಂಟರ್).


ನೆಮ್ಮದಿ ಉಪಶಾಮಕ ಕೇಂದ್ರ-ಇದು ಸುಕೃತಿಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ರೊಟೇರಿಯನ್‌ಬಿ.ಎಸ್. ನಾಗರಾಜನ್‌ಅವರ ಪರಿಕಲ್ಪನೆ; ಕಲ್ಪನೆಯ ಕೂಸು. ಈ ಬೃಹತ್ ಆಲೋಚನೆಗೆ ನಾಗರಾಜ್‌ಅವರ ಪತ್ನಿಕವಿತಾ ಹಾಗೂ ಅವರ ಮಕ್ಕಳು ಹೃತ್ಪೂರ್ವಕವಾಗಿ, ಸರಿಸಾಟಿಯಾಗಿ ಭೇಷರತ್ ಬೆಂಬಲ-ಸಹಕಾರ ನೀಡುತ್ತಿದ್ದಾರೆ. ಕೇವಲ 5 ವರ್ಷಗಳ ಅಲ್ಪಾವಧಿಯಲ್ಲಿಯೇ ಸುಕೃತಿಚಾರಿಟಬಲ್ ಟ್ರಸ್ಟ್ಇಂತಹದೊAದು ಬೃಹದಾಕಾರದಯೋಜನೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂಅಚ್ಚರಿಯೇ ಸರಿ.ಒಟ್ಟಾರೆ ನಾಗರಾಜ್‌ಅವರಇಡೀಕುಟುಂಬವೇ ಈ ಸೇವಾಕೈಂಕರ್ಯದಲ್ಲಿ ನಿಸ್ಪೃಹರಾಗಿ, ಯಾವುದೇ ಪ್ರತಿಫಲಾಪೇಕ್ಷೆಇಲ್ಲದೆಕಾರ್ಯತತ್ಪರರಾಗಿರುವುದು ನಿಜಕ್ಕೂ ಪ್ರಶಂಸಾರ್ಹ.ಇದರೊAದಿಗೆ ನಾಗರಾಜನ್‌ಅವರ ಸುದೀರ್ಘ 37 ವರ್ಷಗಳ ಸ್ನೇಹದ ಹಿನ್ನೆಲೆಯಸಹಪಾಠಿಗಳಬಳಗದ ಅಪಾರ-ಅಗಣಿತಸಹಕಾರವೇ ಈ ಸುಕೃತಿಯ ಸಮಾಜಸೇವೆಯ ಶಕ್ತಿಕೇಂದ್ರವಾಗಿದೆ.ಇAತಹ ಬಾಧಿತ ಸಂತ್ರಸ್ತರುರೋಗವಿಮುಕ್ತರಾಗಲು ಸಾಧ್ಯವಿಲ್ಲ ಅನ್ನುವ ಹಂತದಲ್ಲಿ ಕನಿಷ್ಟಪಕ್ಷ ಅವರ ವೈದ್ಯಕೀಯ ಆರೈಕೆಯಾದರೂ ಉಚಿತವಾಗಿ ಮುಂದುವರೆದು ಅವಶ್ಯಕತೆ ಇರುವ ತನಕ ನಿರಂತರವಾಗಿ ದೊರಕಬೇಕೆAಬ ಮಹತ್ವಾಕಾಂಕ್ಷೆಯ ಫಲಶೃತಿಯಾಗಿ ನೆಮ್ಮದಿ ಆರೈಕೆಕೇಂದ್ರ ಅಸ್ತಿತ್ವ ಪಡೆದಿರುವುದು ಸುಕೃತಿಯೇ ಸರಿ.


ಪ್ರತಿ ವರ್ಷದೇಶದಲ್ಲಿ 60 ಲಕ್ಷದಿಂದ 80 ಲಕ್ಷ ಸಂತ್ರಸ್ತರುಕ್ಯಾನ್ಸರ್‌ನAತಹ ಮಾರಕರೋಗಕ್ಕೆತುತ್ತಾಗಿಆರ್ಥಿಕಕೊರತೆ, ಆರೈಕೆಯಕೊರತೆಯಿಂದ ನರಳುತ್ತಿದ್ದಾರೆ. ಅಂದರೆ, ಒಂದುಅAದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 6-8 ಮಿಲಿಯನ್ ಸಂತ್ರಸ್ತರಿಗೆ ಉಪಶಾಮಕ ಆರೈಕೆಯಅಗತ್ಯವಿದೆ. ಶೇ.2ರಷ್ಟು ಸಂತಸ್ತರು ಮಾತ್ರ ಉಪಶಾಮಕ ಆರೈಕೆ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಅಂತರಕಡಿಮೆ ಮಾಡುವುದು ನೆಮ್ಮದಿ ಉಪಶಾಮಕ ಆರೈಕೆಕೇಂದ್ರದ ಪ್ರಯತ್ನಎಂಬುದು ಟ್ರಸ್ಟಿ ರೊಟೇರಿಯನ್ ಬಿ.ಎಸ್. ನಾಗರಾಜನ್‌ಅವರಧ್ಯೇಯೋದ್ದೇಶ.


ಕಳೆದೆರಡು ವರ್ಷಗಳಿಂದ ನಾಗರಾಜನ್‌ಅವರನ್ನುಕೊರೆಯುತ್ತಿದ್ದ ಈ ಸವಾಲು ಅನುಷ್ಠಾನಗೊಳ್ಳುವ ಹಂತಕ್ಕೆತಲುಪಿದಕಾರಣವೇಯೋಜನೆಯೊಳಗೆ ಇ. ಕೃಷ್ಣಪ್ಪಅವರ ಪ್ರವೇಶದಿಂದ. ಯೋಜನೆಯ ಮೂಲಾಧಾರಮಾಜಿಎಂಎಲ್‌ಸಿ ಇ.ಕೃಷ್ಣಪ್ಪ. ನೆಮ್ಮದಿ ಕೇಂದ್ರದಮಹೋನ್ನತಉದ್ದೇಶವನ್ನುಅರಿತ ಚಲನಚಿತ್ರ ನಿರ್ಮಾಪಕ, ಉದ್ಯಮಿ ಇ. ಕೃಷ್ಣಪ್ಪತಡಮಾಡಲಿಲ್ಲ. ಈ ಮಹತ್ವದ ಸಮಾಜಮುಖಿಯೋಜನೆಗೆ ನೆಲಮಂಗಲ ಸಮೀಪದ ರಾವುತನಹಳ್ಳಿ ರಸ್ತೆಯ ಶಿವನಪುರದ ಇ.ಕೆ. ಎಸ್ಟೇಟ್‌ನಲ್ಲಿ 1 ಎಕರೆ ಭೂಮಿಯನ್ನುಉದಾರವಾಗಿದಾನವಾಗಿನೀಡಿದರು. ಅವರಉದಾತ್ತಕೊಡುಗೆಯಿಂದ ನೆಮ್ಮದಿ ಕೇಂದ್ರದ ಸ್ಥಾಪನೆಯ ಕನಸು ನನಸಾಯಿತು. ಯೋಜನೆಯ ಬಹುಮುಖ್ಯತಿರುವುಇದು. ಜೊತೆಗೆ ಇ.ಕೆ. ಅವರು ಇಷ್ಟಕ್ಕೇ ಸುಮ್ಮನಾಗಿಲ್ಲ. `ವೃದ್ಧಾಶ್ರಮ, ಅನಾಥಾಶ್ರಮ, ಅಬಲಾಶ್ರಮಗಳನ್ನು ಸ್ಥಾಪಿಸಿ ಫಲಾನುಭವಿಗಳಿಗೆ ಸಹಾಯ ಮಾಡುವುದಾದರೆ ಎಷ್ಟು ಬೇಕಾದರೂ ಭೂಮಿಯನ್ನು ಈ ಉದ್ದೇಶಕ್ಕೆ ನಾನು ನೀಡುವೆ'' ಎಂದು ಘೋಷಿಸಿರುವುದು ಇ. ಕೃಷ್ಣಪ್ಪಅವರ ಸಾಮಾಜಿಕ ಕಳಕಳಿಯ ಬದ್ಧತೆಗೆದ್ಯೋತಕವಾಗಿದೆ.ಮುಂದೆ ನಾಗರಾಜ್‌ಅವರಿಗೆರೋಟರಿ ಬೆಂಗಳೂರು ಮಿಡ್‌ಟೌನ್ ಸಮಗ್ರವಾಗಿ ನೆರವು ನೀಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿತು. ಸ್ವತಃರೊಟೇರಿಯನ್‌ಆಗಿದ್ದುದರಿಂದ ನಾಗರಾಜನ್‌ಅವರಿಗೆಇದು ಸಾಧ್ಯವಾಯಿತು. ರೊಟೇರಿಯನ್ ಫ್ಲೆöÊಟ್ ಲೆಫ್ಟಿನೆಂಟ್ ನಾಗೇಶ್, ಮಿಡ್‌ಟೌನ್‌ಅಧ್ಯಕ್ಷರಾಜೇಶ್ ಶಾ ಹಾಗೂ ಅವರಇಡೀತಂಡ ನೆಮ್ಮದಿ ಆರೈಕೆಕೇಂದ್ರದ ಬುನಾದಿಗೆ ಕೈಜೋಡಿಸಿದರು. ಯೋಜನೆಯ ಅನುಷ್ಠಾನಕ್ಕೆ ಟೊಂಕಕಟ್ಟಿನಿAತರು. ಪ್ರೆಸ್ಟೀಜ್ ಫೌಂಡೇಷನ್, ಸನ್ಸೆರಾ ಫೌಂಡೇಷನ್, ಫೆದರ್‌ಲೈಟ್ ಸಮೂಹ, ವೆಸ್ಮಾರ್ಕ್ಡರ‍್ಸ್, ಮಲ್ಲೇಶ್ವರಂನಶ್ರೀ ಸಾಯಿ ಮಂಡಳಿಟ್ರಸ್ಟ್, ಕುಮಾರ್‌ಎಲೆಕ್ಟಿçಕಲ್ಸ್ ಹಾಗೂ ಅನೇಕ ಸಂಘ-ಸAಸ್ಥೆಗಳ, ಸೇವಾಕಾಂಕ್ಷಿಗಳ, ಮಹಾದಾನಿಗಳ ಉದಾರ ನೆರವುಒದಗಿಬಂದಿರುವುದುಉಲ್ಲೇಖನೀಯ.


ಇವೆಲ್ಲದರ ಪರಿಣಾಮವೇ 55 ಹಾಸಿಗೆ ಸಾಮರ್ಥ್ಯದ ನೆಮ್ಮದಿ ಉಪಶಾಮಕ ಆರೈಕೆಕೇಂದ್ರದಅನಾವರಣ. ಸುಮಾರು 20 ಕೋಟಿರೂಪಾಯಿ ವೆಚ್ಚದಲ್ಲಿಅತ್ಯಾಧುನಿಕ ಪರಿಕರ, ಸೌಲಭ್ಯಗಳೊಂದಿಗೆ ಕ್ಯಾನ್ಸರ್‌ಪೀಡಿತರಿಗೆಆಶಾಕಿರಣವಾಗಿ ನೆಮ್ಮದಿಯ ನೆಲೆಯಾಗಿಆರೈಕೆ ನೀಡಲುಕೇಂದ್ರ ಸಜ್ಜಾಗಿದೆ.ಜಾಗತಿಕ ಮಾನವೀಯ ಮಿಷನ್ ಸಂಸ್ಥಾಪಕರಾದ ಮುದ್ದೇನಹಳ್ಳಿಯ ಶ್ರೀ ಶ್ರೀ ಮಧುಸೂಧನ ಸಾಯಿ ಅವರಅಮೃತಹಸ್ತದಿಂದ ನೆಮ್ಮದಿ ಪಾಲಿಯೇಟೀವ್‌ಕೇರ್ ಸೆಂಟರ್ (ಡಿ.21, 2025) ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿತು. ಜೊತೆಗೆ ಮಾನವೀಯತೆಯ ಪ್ರತಿರೂಪವಾದ ಮಧುಸೂಧನ್ ಸಾಯಿ ಸಾರಥ್ಯದ ವೈದ್ಯಕೀಯಕಾಲೇಜು, ವೈದ್ಯಕೀಯತರಬೇತಿ ಸಂಸ್ಥೆಗಳ ಮೂಲಕ ಅಗತ್ಯವಿರುವ ವೈದ್ಯರು, ನುರಿತ ಶುಶ್ರೂಶಕರು ನೆಮ್ಮದಿ ಉಪಶಾಮಕ ಆರೈಕೆಕೇಂದ್ರದಲ್ಲಿಕಾರ್ಯೋನ್ಮುಖರಾಗುತ್ತಿರುವುದು ನಿಜಕ್ಕೂ ಸತ್ಕಾರ್ಯ. ಜಯದೇವ ಹೃದ್ರೋಗ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಹಾಗೂ ಹಾಲಿ ಸಂಸದರಾದಡಾ. ಸಿ.ಎನ್. ಮಂಜುನಾಥ್‌ಅವರು ಸ್ವಭಾವಜನ್ಯ ಸರಳತೆಯನ್ನು ಮೈಗೂಡಿಸಿಕೊಂಡು, ನೆಮ್ಮದಿ ಕೇಂದ್ರದ ಮುಖ್ಯ ಸಲಹೆಗಾರರಾಗಿ ಬೆಂಬಲವಾಗಿ, ಯುದ್ಧೋಪಾದಿಯಲ್ಲಿ ಈ ಉಪಕ್ರಮದಲ್ಲಿತೊಡಗಿಕೊಂಡಿರುವುದು ಸ್ತುತ್ಯಾರ್ಹ. ಬೆಂಗಳೂರು ರೋಟರಿ ಮಿಡ್‌ಟೌನ್ ಈ ಯೋಜನೆಯ ಪ್ರೇರಕ ಶಕ್ತಿಯಾಗಿದ್ದು, ನಿರ್ಣಾಯಕ ಹಂತದಲ್ಲಿ ಈ ಉಪಕ್ರಮವನ್ನು ದಿಟ್ಟತನದಿಂದಸ್ವೀಕರಿಸಿದೆ. ನಿಧಿಸಂಗ್ರಹಣೆ, ಆಡಳಿತ ನಿರ್ವಹಣೆ ಹಾಗೂ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಹಾಗೂ ಮಹತ್ವದ ಪಾತ್ರ ವಹಿಸಿದೆ. ಹಲವಾರುರೋಟರಿ ಬೆಂಗಳೂರು ಮಿಡ್‌ಟೌನ್ ಸದಸ್ಯರುಆರ್ಥಿಕ ನೆರವು ನೀಡಿರುವುದೇಅಲ್ಲದೆ, ನಿರ್ವಹಣಾ ಪರಿಣತಿ ಮತ್ತು ಪ್ರಾಯೋಗಿಕವಾಗಿ ಒಳಗೊಳ್ಳುವಿಕೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಸುಕೃತಿಚಾರಿಟಬಲ್ ಟ್ರಸ್ಟ್ನ ಈ ಯೋಜನೆಯಲ್ಲಿ ಸಂಪೂರ್ಣತೊಡಗಿಕೊAಡು, ಸ್ಪಂದಿಸಿ ಊಹೆಗೂ ಮೀರಿ ಸಹಾಯಹಸ್ತವನ್ನುಚಾಚಿರುವರೋಟರಿ ಬೆಂಗಳೂರು ಮಿಡ್‌ಟೌನ್‌ಕೈಂಕರ್ಯ ಶ್ಲಾಘನೀಯ.``ನೆಮ್ಮದಿ-ಕೇವಲ ಒಂದುಕಟ್ಟಡವಲ್ಲ; ಇದು ನಿಸ್ವಾರ್ಥವಾಗಿ ಸೇವೆ ಮಾಡುವರೋಟರಿಯ ಬದ್ಧತೆಯ ಪ್ರತೀಕ. ನಮ್ಮ ಸದಸ್ಯರು ಸುಕೃತಿಚಾರಿಟಬಲ್ ಟ್ರಸ್ಟ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದಾರೆ. ವಿಶಾಲ ದೃಷ್ಟಿಕೋನರೂಪಿಸುವಲ್ಲಿ, ಸಂಪನ್ಮೂಲ ಕ್ರೋಢೀಕರಣದಲ್ಲಿ ಬೆನ್ನೆಲುಬಾಗಿದೆ'' ಎಂದಿರುವರೋಟರಿ ಬೆಂಗಳೂರು ಮಿಡ್‌ಟೌನ್‌ಅಧ್ಯಕ್ಷರಾದರೊಟೇರಿಯನ್‌ರಾಜೇಶ್ ಶಾ ಅವರು ನುಡಿದಂತೆ ನಡೆದಿದ್ದಾರೆ.


ಮಹತ್ವಪೂರ್ಣಉಪಕ್ರಮವಾಗಿರುವ ನೆಮ್ಮದಿ ಉಪಶಾಮಕ ಆರೈಕೆಕೇಂದ್ರದಲ್ಲಿಎಲ್ಲಾ ಸೇವೆಗಳನ್ನೂ ಆಮೂಲಾಗ್ರವಾಗಿಉಚಿತವಾಗಿಒದಗಿಸಲಾಗುತ್ತಿದೆ. ಯಾವುದೇ ಬಿಲ್ಲಿಂಗ್‌ಕೌAಟರ್‌ಇಲ್ಲದೆ ಸಂಪೂರ್ಣ ಸೇವಾಧಾರಿತ ಮೌಲ್ಯಗಳ ಮೇಲೆ ಸಮಗ್ರ ವೈದ್ಯಕೀಯ, ಭಾವನಾತ್ಮಕ, ಮಾನಸಿಕ ಹಾಗೂ ಆಧ್ಯಾತ್ಮಿಕಆರೈಕೆ ಸುಲಭಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಮಾಲೋಚನೆ ಮತ್ತುಆರೈಕೆಯ ಮೂಲಕ ನೆಮ್ಮದಿ ಕೇಂದ್ರವು ಸಂತ್ರಸ್ತರು ಮತ್ತುಅವರ ಕುಟುಂಬಗಳಿಗೆ ಸಾಮೂಹಿಕ ಭರವಸೆಯಾಗಿ ನಿಂತಿದೆ. `ನೀವು ಏಕಾಂಗಿಯಲ್ಲ; ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಅಭಯವನ್ನು ಆ ಕುಟುಂಬಗಳಿಗೆ ನೀಡಿದೆ.ಸುಕೃತಿಚಾರಿಟಬಲ್ ಟ್ರಸ್ಟ್ ಮತ್ತುರೋಟರಿ ಬೆಂಗಳೂರು ಮಿಡ್‌ಟೌನ್ ಸಹಯೋಗದ ಆ ಶಕ್ತಿಗೆ-ಆಸಕ್ತಿಗೆ `ನೆಮ್ಮದಿ' ಜ್ವಲಂತ ನಿದರ್ಶನ. ಇದು ಸಮಾಜದಅತ್ಯಂತದುರ್ಬಲರಿಗೆ ಸಮಗ್ರ, ಮಾನವೀಯಆರೋಗ್ಯ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

Post a Comment

0Comments

Post a Comment (0)