ಬೆಂಗಳೂರು ಜಲಮಂಡಳಿ ಹಾಗೂ ಜಲಮಂಡಳಿಯ ನೌಕರರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ

varthajala
0

 ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು  ಒಳಚರಂಡಿ ಮಂಡಳಿ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು  ಒಳಚರಂಡಿ ಮಂಡಳಿಯ ನೌಕರರ ಸಂಘದ ವತಿಯಿಂದ  2025 ನೇ ಡಿಸೆಂಬರ್ 23 ರಂದು, ಮಧ್ಯಾಹ್ನ  2.30  ಗಂಟೆಗೆ ಮಲ್ಲೇಶ್ವರಂ 8ನೇ ಮುಖ್ಯ ರಸ್ತೆ ಬಿ.ಹೆಚ್.ಇ.ಎಲ್ ಹತ್ತಿರ ಇರುವ ಬೆಂಗಳೂರು ಜಲಮಂಡಳಿ ರಜತ ಭವನದಲ್ಲಿ 2025 ರ ಕನ್ನಡ ರಾಜ್ಯೋತ್ಸವವನ್ನು ಕಾರ್ಯಕ್ರಮ ಆಯೋಜಿಸಲಾಗಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.

ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ವಿ. ಅವರು  ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಲಿದ್ದು, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ಡಾ. ವಿಜಯ್ ಪ್ರಕಾಶ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಂಡಳಿಯ ಎಲ್ಲಾ ಹಿರಿಯ ಕಿರಿಯ ಆಧಿಕಾರಿಗಳು ನೌಕರರ ಸಿಬ್ಬಂದಿ ವರ್ಗ ಹಾಗೂ ಮಂಡಳಿಯ ಎಲ್ಲಾ ನೌಕರರ ಸಂಘದವರು ಭಾಗವಹಿಸಿಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)