ಮಸೂದೆಗೆ ಅನುಮೋದನೆ ನೀಡಬಾರದೆಂದು ರಾಜ್ಯಪಾಲರಿಗೆ ಮನವಿ
,ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕ, 2025” (LA Bill No. 79 of 2025)ಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ, ವಿವಿಧ ಹಿಂದೂ ಸಂಘಟನೆಗಳು ಹಾಗೂ ಹಿರಿಯ ವಕೀಲರೊಂದಿಗೆ ಇಂದು ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ. ಈ ಸಂಧರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ, ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ಕೋಷದ್ಯಾಕ್ಷರಾದ ಶ್ರೀ. ದೀಪಕ್ ರಾಜಗೋಪಾಲ, ಶ್ರೀರಾಮ ಸೇನೆಯ ಶ್ರೀ. ಸುಂದ್ರೇಶ್ ನರ್ಗಲ್,, ಅಯ್ಯಪ್ಪ ಸೇವಾ ಸಮಾಜಮ್ ಅಧ್ಯಕ್ಷರಾದ ಶ್ರೀ. ಎನ್ ಜಯರಾಮ್, ರಾಷ್ಟ್ರ ರಕ್ಷಣಾ ಪಡೆಯ ಶ್ರೀ. ಪುನೀತ್ ಕೆರೆಹಳ್ಳಿ , ಹಿಂದೂ ಮುಖಂಡರಾದ ಶ್ರೀ. ಎಮ್. ಎಲ್. ಶಿವ ಕುಮಾರ, ಕರ್ನಾಟಕ ಉಚ್ಚ ನ್ಯಾಯಾಲಯ ವಕೀಲರಾದ ಶ್ರೀ. ಉಮಾಶಂಕರ ಮೇಗುಂಡಿ, ಶ್ರೀ. ಗಣಪತಿ ಪ್ರಸನ್ನ ಮುಂತಾದ ಹಿಂದೂ ಮುಖಂಡರಗಳು, ವಕೀಲರು ಉಪಸ್ಥಿತರಿದ್ದರು.
ಈ ವಿಧೇಯಕವು ಅಸ್ಪಷ್ಟ, ಅತಿವಿಸ್ತೃತ ಹಾಗೂ ಸಂವಿಧಾನ ವಿರೋಧಿ ಆಗಿದ್ದು, ವಾಕ್ ಸ್ವಾತಂತ್ರ್ಯ (ಸಂವಿಧಾನದ ವಿಧಿ 19(1)(a)) ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯಲ್ಲಿ ಉಲ್ಲೇಖಿಸಿದ ಪ್ರಮುಖ ಆಕ್ಷೇಪಣೆಗಳು
ಅಸ್ಪಷ್ಟ ಮತ್ತು ಸಂವಿಧಾನ ವಿರೋಧಿ ವ್ಯಾಖ್ಯಾನಗಳು:
“ದ್ವೇಷ ಭಾಷಣ”, “ದ್ವೇಷ ಅಪರಾಧ” ಮತ್ತು “ಪೂರ್ವಾಗ್ರಹಪೂರಿತ ಹಿತಾಸಕ್ತಿ”ಗಳ ವ್ಯಾಖ್ಯಾನಗಳು ಅತಿಯಾದ ಅಸ್ಪಷ್ಟತೆಯಿಂದ ಕೂಡಿದ್ದು, ಯಾವುದೇ ಉದ್ದೇಶ ಅಥವಾ ತಕ್ಷಣದ ಹಿಂಸೆಯಿಲ್ಲದೆ ಕೂಡ ಮಾತುಗಳನ್ನು ಅಪರಾಧೀಕರಿಸಲು ಅವಕಾಶ ನೀಡುತ್ತವೆ. ಇದು ಅಧಿಕಾರಿಗಳಿಂದ ಏಕಪಕ್ಷೀಯ ಮತ್ತು ಆಯ್ಕೆಮೂಲಕ ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ.
ಹಿಂದೂ ಧಾರ್ಮಿಕ ಆಚರಣೆಗಳಿಗೆ ಭಾರಿ ಅಪಾಯ:
ಈ ವಿಧೇಯಕದಲ್ಲಿ ಆರೋಪಿಗಳೇ “ಸಾರ್ವಜನಿಕ ಹಿತ” ಅಥವಾ “ಬೋನಾಫೈಡ್ ಧಾರ್ಮಿಕ ಉದ್ದೇಶ”ವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಹಾಕಲಾಗಿದೆ. ಇದು ಕ್ರಿಮಿನಲ್ ನ್ಯಾಯತತ್ತ್ವಕ್ಕೆ ವಿರುದ್ಧವಾಗಿದೆ.
ವೇದ-ಶಾಸ್ತ್ರ ಉಲ್ಲೇಖ, ಧರ್ಮ ಪ್ರಚಾರ, ಶಾಸ್ತ್ರಾರ್ಥ, ಮತಾಂತರ ಅಥವಾ ಮತೀಯವಾದದ ಟೀಕೆ ಮುಂತಾದ ಮೂಲ ಹಿಂದೂ ಚಟುವಟಿಕೆಗಳು ಅಪರಾಧವಾಗುವ ಸಾಧ್ಯತೆ ಇದೆ.
ಸಂಜ್ಞೇಯ ಹಾಗೂ ಜಾಮೀನು ರಹಿತ ಅಪರಾಧಗಳು:
ಮಾತು ಮತ್ತು ಅಭಿವ್ಯಕ್ತಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಂಜ್ಞೇಯ ಮತ್ತು ಜಾಮೀನು ರಹಿತವಾಗಿಸುವುದು ಅತಿಯಾದ ಶಿಕ್ಷೆಯಾಗಿದ್ದು, ತಕ್ಷಣದ ಬಂಧನ, ಸಾಧು-ಸಂತರ, ಸಾಮಾಜಿಕ ಕಾರ್ಯಕರ್ತರ, ಪತ್ರಕರ್ತರ ಕಿರುಕುಳ, ಭಿನ್ನಾಭಿಪ್ರಾಯದ ದಮನ ಇವೆಲ್ಲಕ್ಕೂ ಕಾರಣವಾಗಬಹುದು.
ಅತಿಯಾದ ಕಾರ್ಯನಿರ್ವಾಹಕ ಅಧಿಕಾರ:
ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಂಗ ಮೇಲ್ವಿಚಾರಣೆಯಿಲ್ಲದೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಜೊತೆಗೆ, ಯಾವುದೇ ಸಮರ್ಪಕ ವಿಚಾರಣೆ ಅಥವಾ ಅಪೀಲಿನ ವ್ಯವಸ್ಥೆಯಿಲ್ಲದೆ ವಿಷಯಗಳನ್ನು ತೆಗೆದುಹಾಕುವ ಅಧಿಕಾರವು ನೈಸರ್ಗಿಕ ನ್ಯಾಯತತ್ತ್ವಗಳಿಗೆ ವಿರುದ್ಧವಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಇತ್ಯಾದಿಗಳಲ್ಲಿ ಈ ವಿಷಯಗಳು ಈಗಾಗಲೇ ಒಳಗೊಂಡಿವೆ. ರಾಜ್ಯ ವಿಧೇಯಕವು ಕೇಂದ್ರ ಕಾನೂನುಗಳೊಂದಿಗೆ ಸಂಘರ್ಷ ಉಂಟುಮಾಡುವ ಸಾಧ್ಯತೆ ಇದ್ದು, ಇದು ಸಂವಿಧಾನದ ವಿಧಿ 254 ಅಡಿಯಲ್ಲಿ ಪ್ರಶ್ನಾರ್ಹವಾಗಿದೆ.
ಏಕಪಕ್ಷೀಯ ಜಾರಿಗೆ ಆತಂಕ:
ಇದಕ್ಕೂ ಮುಂಚೆ ಇಂತಹ ಕಾನೂನುಗಳು ಹೆಚ್ಚಿನವಾಗಿ ಹಿಂದೂಗಳ ಮೇಲೆಯೇ ಬಳಸಲ್ಪಟ್ಟಿರುವ ಉದಾಹರಣೆಗಳಿವೆ. ಈ ವಿಧೇಯಕವು ಹಿಂದೂ ಸಮಾಜದ ಧ್ವನಿಯನ್ನು ಮೌನಗೊಳಿಸಿ, ಪ್ರಜಾಪ್ರಭುತ್ವ ಚರ್ಚೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ.
ರಾಜ್ಯಪಾಲರಿಗೆ ಮನವಿ :

