ಚಾಮರಾಜನಗರ: ಸಾಧಕರ ಮಹಾನ್ ಶಕ್ತಿ ಧ್ಯಾನ. ಪ್ರಪಂಚದ ವಿವಿಧ ಸಾಧಕರು ತಮ್ಮ ಶಕ್ತಿ, ವಿವೇಕ, ಪ್ರಭಾವ, ಶಾಂತಿ, ಹಾಗೂ ಪ್ರಭಾವಪೂರ್ಣ ವಿದ್ವತ್ ಪಡೆಯಲು ಅನುಸರಿಸಿದ ಮಾರ್ಗವೇ ಧ್ಯಾನ. ಭಾರತದ ಆಧ್ಯಾತ್ಮದ ದಿವ್ಯ ಶಕ್ತಿಯು ಧ್ಯಾನವಾಗಿದೆ. ಭಾರತೀಯರ ಬುದ್ಧಿವಂತಿಕೆ ತಾಳ್ಮೆ, ನಂಬಿಕೆ, ಸತ್ಯ, ಪ್ರಾಮಾಣಿಕತೆ ಸೇವಾ ಗುಣಗಳಿಗೆ ಪ್ರೇರಣೆ ಧ್ಯಾನ . ಕೋಟಿ ಕೋಟಿ ಜನರ ಅಂತರ್ಶಕ್ತಿ ಧ್ಯಾನಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಶ್ವ ಧ್ಯಾನ ದಿನದ ಅಂಗವಾಗಿ ಧ್ಯಾನದ ಮಹತ್ವ ಕುರಿತು. ಮಾತನಾಡಿ ಭಾರತ ವಿಶ್ವಕ್ಕೆ ನೀಡಿದ ಮಹತ್ವದ ಕೊಡುಗೆ ಧ್ಯಾನ. ಭಾರತದ ಜಗದ್ಗುರುಗಳು, ಮಹರ್ಷಿಗಳು, ಋಷಿಗಳು, ಚಿಂತಕರು, ಸಾಧಕರ ಮಹಾನ್ ಶಕ್ತಿಯೇ ಧ್ಯಾನ. ಪ್ರತಿದಿನ ಬೆಳಿಗ್ಗೆ ಸಂಜೆ ಹಾಗೂ ಪ್ರತಿ ಸಮಯದಲ್ಲೂ. ಅಂತರ್ಮುಖಿಯಾದ ಧ್ಯಾನ ಮಾಡುವ ಮೂಲಕ ಎಲ್ಲ ನರಗಳು ಕಾರ್ಯ ಪ್ರವೃತ್ತಿಯಾಗಿ ದೇಹ ಮನಸ್ಸು, ಬುದ್ಧಿಶಕ್ತಿ ವಿಕಾಸವಾಗಿ ಮನುಷ್ಯ ಅರಿವಿಲ್ಲದೆಯೇ ಮಹಾನ್ ವ್ಯಕ್ತಿ ಯಾಗಲಿ ಸಾಧ್ಯವೆಂದು, ಇಡೀ. ಜಗತ್ತು ಇಂದು ಧ್ಯಾನಕ್ಕೆ ಮೊರೆಹೋಗಿದೆ. ಮಾನವನ ನಡತೆ, ವ್ಯಕ್ತಿತ್ವ ರೂಪುಗೊಳ್ಳಲು ಧ್ಯಾನದ ಪ್ರಭಾವ ಅಪಾರ. ಭಾರತದ ಮೂಲೆ ಮೂಲೆಗಳಲ್ಲೂ ಕೋಟ್ಯಂತರ ಸಜ್ಜನರು ಧ್ಯಾನ, ಯೋಗ, ಪೂಜೆ. ಗಳ ಮೂಲಕ ತಮ್ಮನ್ನು ಅರಿಯಲು ಸಾಧ್ಯವಾಗಿದೆ. ಧ್ಯಾನವು ನಮ್ಮನ್ನು ಅರಿಯಲು ತಿಳಿಯಲು ಸಾಧ್ಯ. ತನ್ನ ಅರಿವು ಪಡೆಯದ ವ್ಯಕ್ತಿ. ಸುಖವಾಗಿ ಇರಲು ಸಾಧ್ಯವಿಲ್ಲ. ಅಹಂಕಾರ, .ಅಸೂಯೆ, ಹೊಟ್ಟೆಕಿಚ್ಚು, ದ್ವೇಷ, ಅಸಹನೆ, ಎಲ್ಲವೂ ನನಗೆ ಬೇಕು ಎಂಬ ಭಾವನೆ ಹೋಗಲು ಧ್ಯಾನಕ್ಕೆ ಮೊರೆ ಹೋಗಬೇಕು. ವಿಧ್ಯಾರ್ಥಿಗಳು, ತಮ್ಮ ವಿದ್ಯಾಭ್ಯಾಸಕ್ಕೆ ಧ್ಯಾನ ಅಗತ್ಯ. ಪ್ರತಿ ಕ್ಷೇತ್ರದ ಕಾರ್ಯ ಸಾಧಿಸಲು ಧ್ಯಾನವೇ ಮೂಲ ಮಾರ್ಗ. ವಿಶ್ವಸಂಸ್ಥೆ ಧ್ಯಾನದ ಮಹತ್ವ ಸಾರಲು ಡಿಸೆಂಬರ್ 21 ವಿಶ್ವ ಧ್ಯಾನ ದಿನ ಎಂದು ಆಚರಿಸುತ್ತಿದೆ. ಪ್ರತಿಯೊಬ್ಬರು ಧ್ಯಾನ ಮಾಡುವ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿ . ಭಾರತದ.ಹಾಗೂ ವಿಶ್ವದ ದೇಶಗಳು ಧ್ಯಾನದ ಮಹತ್ವ ಸಾರಲು ವಿಶೇಷ ಕಾರ್ಯ ಯೋಜನೆ ರೂಪಿಸಬೇಕುಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸುರೇಶ್ ದೊಡ್ಡಮೋಳೆ ಮಾತನಾಡಿ ಧ್ಯಾನ ಎಲ್ಲಾ ಧರ್ಮಗಳಲ್ಲಿ ಇದೆ. ಧ್ಯಾನ ಇಂದು ಮಹತ್ವದ ದಿಕ್ಕಿನಲ್ಲಿ ಸಾಗುತ್ತಿದೆ. ವೈಜ್ಞಾನಿಕ ಚಿಂತನೆಯ ಕಾರ್ಯದಲ್ಲೂ. ಹೆಚ್ಚು ಧ್ಯಾನದ ಸ್ಥಿತಿ ಅಗತ್ಯ. ಋಗ್ವೇದಿ ಯೂತ್ ಕ್ಲಬ್ , ಜೈಹಿಂದ್ ಪ್ರತಿಷ್ಠಾನ ಸದಾ ಕಾಲ ಉನ್ನತ ಕಾರ್ಯಗಳನ್ನು ಯೋಜಿಸಿ ಸರ್ವರಿಗೂ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆಯಾಗಿದೆ ಎಂದರು.
ಉದ್ಘಾಟನೆಯನ್ನು ಹಿರಿಯರಾದ ವೆಂಕಟೇಶ್ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ. ಮಹೇಂದ್ರ, ಜೈಹಿಂದ್ ಪ್ರತಿಷ್ಠಾನ ದ ಕುಸುಮ, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಋಗ್ವೇದಿ, ಪೂಜಾ, ಲಕ್ಷ್ಮೀ, ದಿವ್ಯ ಮುರುಗೇಶ್, ರವಿ, ಮಂಜು ಇತರರು ಇದ್ದರು.