ನಮಸ್ತೆ, ಡಾ. ಜಿ.ಬಿ. ಹರೀಶ ಅವರು ಕನ್ನಡ ಸಾಹಿತ್ಯ, ಸಂಶೋಧನೆ, ಕೃತಿ ಸಂಪಾದನೆ, ವಿಮರ್ಶೆ, ಉಪನ್ಯಾಸ, ಪತ್ರಿಕೋದ್ಯಮ.... ಹೀಗೆ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಚಿರಪರಿಚಿತರು. ಡಾ. ಜಿ.ಬಿ. ಹರೀಶ ಅವರಿಗೆ 50 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿಸೆಂಬರ್ 25ರ ಗುರುವಾರ ಸಂಜೆ 4.00 ಗಂಟೆಯಿಂದ ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರ ಸಿನಿಮಾ & ಕಲ್ಚರಲ್ ಸೊಸೈಟಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಹಿರಿಯರೂ ಆದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷೆ, ಸಾಹಿತ್ಯದ ಸಂಚಾಲಕರಾದ ಡಾ. ಬಸವರಾಜ ಕಲ್ಗುಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಕುರಿತು ನಮ್ಮೂರಲ್ಲಿ ಇಂದು/ನಗರದಲ್ಲಿ ಇಂದು ವಿಭಾಗದಲ್ಲಿ ಪ್ರಕಟಿಸಬೇಕೆಂದು ಹಾಗೂ ಕಾರ್ಯಕ್ರಮದ ದಿನದಂದು ತಮ್ಮ ವರದಿಗಾರರನ್ನು ನಿಯೋಜಿಸಿ ಯಥೋಚಿತ ಪ್ರಚಾರ ನೀಡಬೇಕು ಎಂದು ಮನವಿ ಮಾಡುತ್ತೇವೆ. ಈ ಸಂದೇಶದೊಂದಿಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹರೀಶ ಅವರ ಹಾಗೂ ಭಾವಚಿತ್ರವನ್ನು ಲಗತ್ತಿಸಲಾಗಿದೆ.