ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಸದನದÀಲ್ಲಿ ಉತ್ತರ ನೀಡಿದರು. ಆಡಳಿತ ಪಕ್ಷದ 17 ಜನ 7 ಗಂಟೆ 13 ನಿಮಿಷಗಳ ಮಾತನಾಡಿದ್ದು, 15 ಜನ ಬಿಜೆಪಿಯವರು 6 ಗಂಟೆ 69 ನಿಮಿಷಗಳ ಕಾಲ ಮಾತನಾಡಿದ್ದಾರೆ.ಜೆಡಿಎಸ್ ನವರು 1ಗಂಟೆ 56 ನಿಮಿಷ, ಬಸನಗೌಡ ಪಾಟೀಲ್ ಯತ್ನಾಳ್ ಅವರು 1 ಗಂಟೆ 4 ನಿಮಿಷ ಮಾತನಾಡಿದ್ದಾರೆ. 39 ಸದಸ್ಯರು 17 ಗಂಟೆ 2 ನಿಮಿಷ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಎಂದು ತಿಳಿಸಿದರು.ಕೆಲವರು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಕೆಲವರು ಟೀಕೆಗಳನ್ನು ಮಾಡಿದ್ದಾರೆ. ಅಧಿವೇಶನ ಪ್ರಾರಂಭವಾದ ಎರಡನೇ ದಿನವೇ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿರುವುದು ಈ ಬಾರಿಯ ವಿಶೇಷ ಎಂದರು.
ರಾಜಕೀಯ ನಿಶ್ಯಕ್ತಿ ನನ್ನಲ್ಲಿಲ್ಲ: ರಾಜಕೀಯ ನಿಶ್ಯಕ್ತಿ ನನ್ನಲ್ಲಿ ಹಿಂದೆ ಇರಲಿಲ್ಲ, ಇಂದೂ ಇಲ್ಲ ಮುಂದೆಯೂ ಇರುವುದಿಲ್ಲ. ಹಾಗೇನಾದರೂ ವಿರೋಧಪಕ್ಷಗಳು ಭಾವಿಸಿದ್ದರೆ ಅದು ತಪ್ಪು ಮಾಹಿತಿ ಎಂದು ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಉತ್ತರಿಸಿದರು.
ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಕಾರಣಕ್ಕಾಗಿಯೇ 2001 ರಲ್ಲಿ ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಯಿತು. ಅವರು ಅಧ್ಯಯನ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಧ್ಯಯನ ಮಾಡಿ 2002 ರಲ್ಲಿ ವರದಿ ಕೊಡುತ್ತಾರೆ. 39 ತಾಲ್ಲೂಕುಗಳು ಅತ್ಯಂತ ಹಿಂದುಳಿದವು.40 ತಾಲ್ಲೂಕುಗಳು ಅತಿ ಹಿಂದುಳಿದವು. 35 ತಾಲ್ಲೂಕುಗಳು ಹಿಂದುಳಿದಿವೆ. ಒಟ್ಟು 114 ತಾಲ್ಲೂಕುಗಳು ಹಿಂದುಳಿದಿವೆ ಎಂದು ಗುರುತಿಸಿದ್ದಾರೆ. 8 ವರ್ಷಗಳಲ್ಲಿ 31000 ಕೋಟಿ ರೂಗಳನ್ನು ಸರ್ಕಾರ ವೆಚ್ಚ ಮಾಡಬೇಕು ಎಂಬ ಮುಖ್ಯ ಶಿಫಾರಸ್ಸು ಮಾಡಿದ್ದರು. ಈ ಪೈಕಿ 15,000 ಕೋಟಿ ಸಾಮಾನ್ಯವಾಗಿ ಬರುತ್ತದೆ. ಜೊತೆಗೆ 16000 ಕೋಟಿಗಳನ್ನು 8 ವರ್ಷಗಳಲ್ಲಿ ವೆಚ್ಚ ಮಾಡಬೇಕು ಎಂದು ಶಿಫಾರಸ್ಸು ಮಾಡಿದ್ದರು. ಪ್ರಸ್ತುತ 31000 ಕೋಟಿಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3000 ಕೋಟಿ ವಿಶೇಷ ಅಭಿವೃದ್ಧಿ ಯೋಜನೆಯಡಿ ವೆಚ್ಚ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅಸಮತೋಲನ ಎಷ್ಟರ ಮಟ್ಟಿಗೆ ನಿವಾರಣೆಯಾಗಿದೆ. ವರದಿಯ ಪರಿಣಾಮಗಳೇನು, ಇನ್ನೂ ಉತ್ತರ ಕರ್ನಾಟಕ ಹಿಂದುಳಿದಿವೆ. 39ರಲ್ಲಿ ಅತ್ಯಂತ ಹಿಂದುಳಿದ 27 ತಾಲ್ಲೂಕುಗಳು ಉತ್ತರ ಕರ್ನಾಟಕದ ಭಾಗದಲ್ಲಿದ್ದು, ಹೆಚ್ಚಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುತ್ತವೆ. 31000 ಕೋಟಿ ವೆಚ್ಚ ಮಾಡಿದರೂ ಪ್ರಾದೇಶಿಕ ಅಸಮತೋಲನ ಇನ್ನೂ ನಿವಾರಣೆಯಾಗಿಲ್ಲ ಎಂದು ಪ್ರಸ್ತಾಪಿಸಲಾಗಿದೆ.
ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ:ವಿರೋಧ ಪಕ್ಷದ ನಾಯಕರು ತಲಾ ಆದಾಯದ ಬಗ್ಗೆ ಮಾತನಾಡಿದ್ದು, ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಘೋಷಣೆ ಮಾಡಿದ ದಿನದಿಂದ ಇಂದಿನವರೆಗೆ ಮಾತನಾಡುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ 6.95 ಕೋಟಿ ಜನಸಂಖ್ಯೆ ಇದ್ದು, ಉತ್ತರ ಕರ್ನಾಟಕದಲ್ಲಿ 296767 ಜನಸಂಖ್ಯೆ ಇದೆ. ನಾಲ್ಕುಕೋಟಿ ಜನ ದಕ್ಷಿಣ ಕರ್ನಾಟಕದಲ್ಲಿದ್ದಾರೆ. 42% ಮಾತ್ರ ಉತ್ತರ ಕರ್ನಾಟಕದಲ್ಲಿ ಇದ್ದಾರೆ. 58% ದಕ್ಷಿಣ ಕರ್ನಾಟಕದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ 31ಜಿಲ್ಲೆಗಳಲ್ಲಿ 14 ಉತ್ತರ ಕರ್ನಾಟಕಕ್ಕೆ ಬರುತ್ತವೆ. 224 ವಿಧಾನ ಸಭಾ ಕ್ಷೇತ್ರಗಳಲ್ಲಿ 97 ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಬರುತ್ತವೆ ಎಂದರು. ಅಸಮಾನತೆ ಹೋಗಲಾಡಿಸಲು ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ.
ಏಳು ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು: ಸಿಎಂ ಭರವಸೆ:ಉತ್ತರ ಕರ್ನಾಟಕದಲ್ಲಿ ಡೈರಿ ಚಟುವಟಿಕೆಗಳು ಕಡಿಮೆ. ಬೆಂಗಳೂರು ಹಾಲು ಒಕ್ಕೂಟ ದಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್, ಗುಲ್ಬರ್ಗ ಕಲಬುರ್ಗಿ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಪ್ರತಿ ದಿನಕ್ಕೆ 17 ಸಾವಿರ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಳೆ ಮೈಸೂರಿನಲ್ಲಿ ಒಂದು ಕೋಟಿ ಲೀಟರ್ ಹಾಲು ದಿನಕ್ಕೆ ಉತ್ಪಾದನೆ ಆಗುತ್ತಿದೆ ಉತ್ತರ ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಒಮ್ಮೆ ಮೂರು ರೂ ಮತ್ತೊಮ್ಮೆ 4 ರೂ.ಗಳ ಸಹಾಯಧನವನ್ನು ಹೆಚ್ಚಳ ಮಾಡಿದೆ. ಈ ಮೊತ್ತ ಸಂಪೂರ್ಣವಾಗಿ ರೈತರಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 630 ಕೋಟಿ ಗಳನ್ನು ನಮ್ಮ ಸರ್ಕಾರ ತೀರಿಸಿದೆ. ದಿನಕ್ಕೆ 5 ಕೋಟಿಗಳ ಪೆÇ್ರೀತ್ಸಾಹ ಧನ ನೀಡುತ್ತಿದೆ. ಮೇವಿನ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 7 ರೂಗಳ ಪ್ರೋತ್ಸಾಹ ಧನವನ್ನು ಈ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
2013-2018ರ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ಕೊಟ್ಟಿದ್ದೆವು, 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದರೊಂದಿಗೆ 30 ಹೊಸ ಕಾರ್ಯಕ್ರಮಗಳನ್ನು ಸಹ ರೂಪಿಸಲಾಗಿತ್ತು. ಅಂದರೆ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಈ ಬಾರಿ 593 ಭರವಸೆಗಳನ್ನು ಕೊಟ್ಟಿದ್ದೆವು. 263 ಭರವಸೆಗಳನ್ನು ಈಡೇರಿಸಲಾಗಿದೆ.
2018 ರಲ್ಲಿ ಬಿಜೆಪಿ 600 ಭರವಸೆಗಳಲ್ಲಿ 60 ಭರವಸೆಗಳನ್ನು ಈಡೇರಿಸಿದೆ. ಇವರಿಗೆ ನಮ್ಮ ಭರವಸೆಗಳ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು.
ಪ್ರೊ.ಆರ್.ಗೋವಿಂದರಾವ್ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು: ನಂಜುಂಡಪ್ಪ ವರದಿ ಪರಿಣಾಮಗಳ ಬಗ್ಗೆ ಅರಿಯಲು ಬೆಳಗಾವಿ ಅಧಿವೇಶನದಲ್ಲಿಯೇ ಪ್ರೊ. ಆರ್.ಗೋವಿಂದರಾವ್ ಸಮಿತಿ ರಚನೆ ಮಾಡಲಾಯಿತು. ಅವರಿಗೆ ನವೆಂಬರ್ ಕೊನೆಯವರೆಗೂ ಅಧಿಕಾರವಿತ್ತು. ಅವರು ಇನ್ನೂ ಎರಡು ತಿಂಗಳು ಅಗತ್ಯವಿದೆ ಎಂದು ತಿಳಿಸಿದ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಬಹುತೇಕ ಜನವರಿಯಲ್ಲಿ ವರದಿಯನ್ನು ಕೊಡುತ್ತಾರೆ. ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ವರದಿಯನ್ನು ಜಾರಿ ಮಾಡುತ್ತೇವೆ. ಕಿತ್ತೂರು ಕರ್ನಾಟಕಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 500 ಕೋಟಿ ಒದಗಿಸಬೇಕೆಂದು ಆ ಭಾಗದ ಮನವಿ ಮಾಡಿದ್ದಾರೆ. ಪ್ರೊ.ಗೋವಿಂದರಾವ್ ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿಯೇ ಪೆÇ್ರ.ಗೋವಿಂದರಾವ್ ಸಮಿತಿ ರಚಿಸಲಾಗಿದೆ. ಅವರು ಉತ್ತರ ಕರ್ನಾಟಕದವರೇ ಆಗಿದ್ದು, ಪ್ರಖ್ಯಾತ ಆರ್ಥಿಕ ತಜ್ಞರು, ರಾಷ್ಟ್ರೀಯ 14 ನೇ ಹಣಕಾಸು ಸಮಿತಿಯ ಸದಸ್ಯರಾಗಿದ್ದರು. ಬಹುತೇಕ ಜನವರಿ 2026ನಲ್ಲಿ ವರದಿ ಬರಲಿದೆ ಎಂದರು. ವರದಿ ಪರಿಶೀಲಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು ಎಂದರು.
ಹೈದರಾಬಾದ್ ಕರ್ನಾಟಕವನ್ನು 371 ಜೆ ಗೆ ಸೇರಿಸಬೇಕೆಂದುಬಹಳ ಹಿಂದಿನಿಂದಲೂ ಕೂಗಿತ್ತು. 1991ರಲ್ಲಿ ಹೆಚ್. ಕೆ.ಡಿ. ಬಿ ಪ್ರಾರಂಭವಾಯಿತು. ನಂತರ 2011-13 ರಲ್ಲಿ, 6/11/2013 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಸೇರ್ಪಡೆಯಾಯಿತು. ಹೆಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಶೇ. 85% ರಷ್ಟು ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಬೇಕೆಂದು ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 8% ಮಾಡಬೇಕೆಂದು ಮಾಡಿದ್ದ ಶಿಫಾರಸ್ಸನ್ನು ಯಥಾವತ್ತು ಜಾರಿಗೆ ತರಲಾಯಿತು ಎಂದರು.
371 ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ. ಅದನ್ನು ತಿರಸ್ಕರಿಸಿದ್ದು ಬಿಜೆಪಿಯ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು.ಹಾಗಾಗಿ ವಿರೋಧ ಪಕ್ಷದವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ 2023 ರಲ್ಲಿ 3000 ಕೋಟಿ, 2024/25 ರಲ್ಲಿ 3000 ಕೋಟಿ, 2025/2026 ರಲ್ಲಿ 5000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.ಒಟ್ಟು ಅನುದಾನ ನೀಡಿರುವುದು 24778 ಕೋಟಿಯಾದರೆ, ಬಿಡುಗಡೆಯಾಗಿರುವುದು 16229 ರೂಪಾಯಿ, ವೆಚ್ಚವಾಗಿರುವುದು 14890 ರೂಪಾಯಿಗಳು ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ 300 ಕೆಪಿಎಸ್ ಶಾಲೆಗಳು: 1800 ಕೋಟಿ ಈ ವರ್ಷ ವೆಚ್ಚವಾಗಿದೆ ಈ ವರ್ಷ 5000 ಕೋಟಿ ವೆಚ್ಚವಾಗಲೇಬೇಕು ಎಂದು ಸೂಚಿಸಲಾಗಿದೆ. ಇμÉ್ಟಲ್ಲಾ ವೆಚ್ಚ ಮಾಡಿದರೂ ಶಿಕ್ಷಣ, ಪೌಷ್ಟಿಕತೆ, ಆರೋಗ್ಯದ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸೂಚಿಸಿದೆ. ಪ್ರೊ. ಛಾಯಾ ದೇವಡಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇವರು ಡಿಸೆಂಬರ್ 14 ರಂದು ವರದಿಯನ್ನು ಸಲ್ಲಿಸಿದ್ದು, ಸರ್ಕಾರ ಪರಿಶೀಲಿಸಿ ಜಾರಿಗೆ ತರಲಾಗುವುದು . ಐದಾರು ವರ್ಷಗಳಲ್ಲಿ
ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕ್ಷರತೆ ಸುಧಾರಣೆಯಾಗಲಿದೆ ಎಂದರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದ್ದು, ಹೆಚ್ಚು ಆಸ್ಪತ್ರೆಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. 371 ಜೆ ಜಾರಿಯಾದ ಮೇಲೆ 10,000 ವೈದ್ಯಕೀಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ 31000. ಇಂಜಿನಿಯರಿಂಗ್ 12000 ಹೋಮಿಯೋಪತಿ, ಡೆಂಟಲ್ ಮತ್ತಿತರ ಕೋರ್ಸುಗಳಿಗೆ ಸೇರಿದ್ದಾರೆ. 32000 ಉದ್ಯೋಗ ಭರ್ತಿಯಾಗಿದೆ. 80% ಭರ್ತಿ ಪ್ರಕ್ರಿಯೆ ಸ್ಥಳೀಯವಾಗಿಯೇ ಆಗಬೇಕೆಂದು ಸೂಚಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ 900 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಈ ಭಾಗದ ಅಭಿವೃದ್ಧಿಗೆ 300 ಕೆಪಿಎಸ್ ಶಾಲೆಗಳನ್ನು ತೆರೆಯಲು ಸೂಚಿಸಿದೆ ಎಂದರು.
ಎಲ್ಲಾ ಜಿಲ್ಲೆಗಳೂ ಸಮಾನವಾಗಿ ಅಭಿವೃದ್ಧಿಯಾದಾಗ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ. ಜಾತಿ ವ್ಯವಸ್ಥೆ ಇರುವುದರಿಂದ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿಲ್ಲ. 1949 ನವೆಂಬರ್ 25 ರಂದು ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಸಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗದೇ ಹೋದರೆ ರಾಜಕೀಯ ಸ್ವಾತಂತ್ರ್ಯದಿಂದ ಸಮಾನತೆ ಸಾಧ್ಯವಿಲ್ಲ ಎಂದಿದ್ದರು. ಸಂವಿಧಾನ ಜಾರಿಗೆ ಬಂದಾಗ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದು, ಅಸಮಾನತೆ ತೊಲಗಿಸದೆ ಹೋದರೆ ಆ ಜನರೇ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡ್ತಾರೆ ಎಂದಿದ್ದರು. ಆ ಕಾರಣಕ್ಕಾಗಿಯೇ ಅನೇಕ ಭಾಗ್ಯಗಳನ್ನು ಮತ್ತು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ಎಲ್ಲ ಧರ್ಮದ, ಪಕ್ಷದ ಬಡವರು ಗ್ಯಾರಂಟಿಗಳ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕ ಇದರಿಂದಾಗಿಯೇ ದೇಶದಲ್ಲಿ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಚಲನೆಯಿಲ್ಲದ ಜಾತಿ ವ್ಯವಸ್ಥೆಯಲ್ಲಿ ಆರ್ಥಿಕ, ಸಾಮಾಜಿಕ ಸಬಲೀಕರಣ ಅಗತ್ಯ. ಆಗ ಮಾತ್ರ ಜಡತ್ವ ಹೋಗಲಾಡಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತೆ 10 ರಿಂದ12% ಇತ್ತು.76% ಸಾಕ್ಷರತೆ ಈಗಿದ್ದರೂ ಜಾತಿ ವ್ಯವಸ್ಥೆ ಹೋಗಿಲ್ಲ. ವೈದ್ಯರೂ ಕೂಡ ಹಣೆಬರಹ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಡುತ್ತಾರೆ. ನಮ್ಮಲ್ಲಿ ಜಾತಿ ವ್ಯವಸ್ಥೆಯ ಕಾರಣದಿಂದ ಗುಲಾಮಗಿರಿಯ ಮನಸ್ಥಿತಿ ಮನೆ ಮಾಡಿಕೊಂಡಿದೆ. ಇದಕ್ಕಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.
1 ಲಕ್ಷ 6 ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದ್ದು, 46276 ಕೋಟಿ ಉತ್ತರ ಕರ್ನಾಟಕದಲ್ಲಿ ವೆಚ್ಚ ಮಾಡಲಾಗಿದೆ. ಜನಸಂಖ್ಯೆ 42%, ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಆರ್ಥಿಕ ಚಟುವಟಿಕೆಗಳಿಲ್ಲದೆ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ ನ್ಯಾಯಯುತ ಬೆಲೆ ನಿಗದಿ ಮಾಡಬೇಕು: ಕಬ್ಬು ಬೆಳೆ: ಕರ್ನಾಟದಲ್ಲಿ 82 ಸಕ್ಕರೆ ಕಾರ್ಖಾನೆಗಳಿದ್ದು ಒಂದೇ ಒಂದು ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಇದೆ. 11 ಸಹಕಾರಿ ಕಾರ್ಖಾನೆಗಳಿವೆ. ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
2025-26 ರಲ್ಲಿ 7.40 ಲಕ್ಷ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, 600 ಲಕ್ಷ ಟನ್ ಕಬ್ಬು ಉತ್ಪಾದನೆ ಆಗಬಹುದೆಂದು ಅಂದಾಜಿಸಲಾಗಿದೆ. 2009 2010ರಿಂದ ಎಫ್ ಆರ್ ಪಿ ನಿಗದಿ ಮಾಡಲಾಗಿದೆ. ಇದನ್ನು ಕೇಂದ್ರ ಸರ್ಕಾರ ನಿಗದಿಮಾಡುತ್ತದೆ. 9.50 ಯಿಂದ 10.28 ರೂ. ಎಫ್ ಆರ್ ಪಿ ನಿಗದಿ ಮಾಡಿದ್ದಾರೆ.
2022-23 ರಿಂದ 10.25 ಮಾಡಿದ್ದಾರೆ. ಈ ವರ್ಷ ಒಂದು ಟನ್ ಕಬ್ಬಿಗೆ 3550 ರೂಪಾಯಿ ಗಳಿದ್ದು, ಹೆಚ್ ಅಂಡ್ ಟಿ ಕಳೆದರೆ (800 ರಿಂದ 900 ರೂ ಗಳಿವೆ) 2700 ರೂಪಾಯಿ ನಿಗದಿಯಾಗುತ್ತದೆ. ಹೀಗಾಗಿ ರೈತರು ಹೋರಾಟ ಮಾಡಿದರು. ಸರ್ಕಾರ ರೈತರೊಂದಿಗೆ ಸುದೀರ್ಘ ಸಭೆ ನಡೆಸಿ 10.25 ಇಳುವರಿ ಇದ್ದವರಿಗೆ 3300 ರೂಪಾಯಿ ಕೊಡಲು ತೀರ್ಮಾನಿಸಲಾಯಿತು. ಚಳುವಳಿಯನ್ನು ಹಿಂಪಡೆಯಲಾಯಿತು ಎಂದರು.
ಕೇಂದ್ರ ಸರ್ಕಾರ 1 ಕೆಜಿ ಸಕ್ಕರೆಗೆ ಎಂ.ಎಸ್. ಪಿ ನಿಗದಿ 31 ರೂ 2019 ರಲ್ಲಿ ನಿಗದಿ ಮಾಡಿದೆ. ಆರು ವರ್ಷಗಳಲ್ಲಿ ಏನೂ ಬದಲಾವಣೆ ಮಾಡಿಲ್ಲ. 41 ರೂಗಳಿಗೆ ಹೆಚ್ಚಿಸಲು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಎಥನಾಲ್ ಹಂಚಿಕೆಯನ್ನು ಕೇಂದ್ರ ಸರ್ಕಾರವೇ ಮಾಡುವುದು. ರಫ್ತು ನಿಗದಿ ಮಾಡುವುದು ಕೂಡ ಕೇಂದ್ರ ಸರ್ಕಾರವೇ. ರೈತರಿಗೆ ಅನ್ಯಾಯ ಆಗಲು ಯಾರು ಕಾರಣ? ಎಫ್ ಆರ್ ಪಿ, ಎಂ ಎಸ್ ಪಿ, ಎಥನಾಲ್, ರಫ್ತು ಹೆಚ್ಚು ಮಾಡಲಿ. ಹೀಗಾದರೆ ಸ್ವಾಭಾವಿಕವಾಗಿ ಸಕ್ಕರೆ ಮತ್ತು ಕಬ್ಬಿನ ಬೆಲೆ ಹೆಚ್ಚಾಗುತ್ತದೆ ಎಂದರು.
ಪೆಟ್ರೋಲ್ ಬೆಲೆ 100ರ ಆಸು ಪಾಸಿನಲ್ಲಿದ್ದು, ಇದರಿಂದ ಅದಾನಿ, ಅಂಬಾನಿಗೆ ಲಾಭವಾಗುತ್ತಿದೆ. ಚಳುವಳಿ ಶಮನ ಮಾಡಬೇಕು. 50 ರೂ. ಕೊಡುವುದರಿಂದ 300 ಕೋಟಿ ರೂ ಹೆಚ್ಚು ಹೊರೆ ಸರ್ಕಾರದ ಮೇಲೆ ಬಿದ್ದಿದೆ ಎಂದರು.
10.28 ಇಳುವರಿ ಇರುವ ಕಬ್ಬಿಗೆ 3550 ರೂ. ಎಚ್ ಅಂಡ್ ಟಿ ಸೇರಿ ನೀಡಲಾಗುತ್ತದೆ. 54.ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ 17.25 ಹೆಕ್ಟೇರ್ ಪ್ರದೇಶದಲ್ಲಿ ಆಗಿದೆ. ರೈತರಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಚಳುವಳಿ ಮಾಡಿದರು. ಉತ್ತರ ಮತ್ತು ಕರ್ನಾಟಕ ಎಂದು ಪ್ರತ್ಯೇಕಿಸಬಾರದು. ಕಬ್ಬು, ಮೆಕ್ಕೆ ಹಾಗೂ ತೊಗರಿ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿದೆ ಎಂದರು.
ಎಥನಾಲ್ ಗುಜರಾತ್ 1.83 ಸಾವಿರ ಹೆಕ್ಟೇರ್ ನಲ್ಲಿ 27.30 ಲಕ್ಷ ಉತ್ಪಾದನೆಯಾಗಿದ್ದರೆ, ಹರಿಯಾಣದಲ್ಲಿ 0.5 ಹೆಕ್ಟೇರ್ ನಲ್ಲಿ ಬೆಳೆದರೆ, 0.15 ಉತ್ಪಾದನೆಗೆ 45.05 ಹಂಚಿಕೆಯಾಗಿದೆ. ಕರ್ನಾಟಕಕ್ಕೆ 17.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೆ 26.55 ನೀಡಲಾಗಿದೆ. ಕರ್ನಾಟಕ ದೇಶದಲ್ಲಿಯೇ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ತಾರತಮ್ಯ ಸರಿಪಡಿಸಿಕೊಳ್ಳಿ ಎಂದು ಅನೇಕ ಸಾರಿ ಪತ್ರ ಬರೆದಿದ್ದರೆ ಪತ್ರಕ್ಕೆ ಉತ್ತರವನ್ನು ನೀಡಿಲ್ಲ. ಉತ್ತರಿಸುವ ವ್ಯವಧಾನವೂ ಇಲ್ಲ. ಕಬ್ಬು ಹಾಗೂ ಮೆಕ್ಕೆಜೋಳದ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಏನೂ ಸಹಾಯವಾಗಲಿಲ್ಲ. ಮಂಗಳೂರಿನಲ್ಲಿ ದಿನೇಶ್ ಗುಂಡೂರಾವ್ ಅವರು ಕೂಡ ಮನವಿ ಕೊಟ್ಟಿದ್ದಾರೆ ಎಂದರು.ಕೇಂದ್ರ ಸರ್ಕಾರ ಅಸಹಕಾರವನ್ನು ಶುರುಮಾಡಿದೆ. ನಮಗೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಎಂದರು.
ಜಲಜೀವನ ಮಿಷನ್ ನಡಿ 13 ಸಾವಿರ ಕೋಟಿ ಬಾಕಿ: ಜಲಜೀವನ ಮಿಷನ್ ನಡಿ 13 ಸಾವಿರ ಕೋಟಿ ಬರಬೇಕು. ಎರಡು ವರ್ಷಗಳಿಂದ ಬಾಕಿ ಇದೆ. ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ದೂರುತ್ತಾರೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಉತ್ತರ ಹಾಗೂ ದಕ್ಷಿಣ ಕನ್ನಡ ವಿಭಾಗ ಮಾಡಬಾರದು. ಕರ್ನಾಟಕ ಒಂದೇ. ಎಲ್ಲಾ ಭಾಗದ ಜನರ ಅಭಿವೃದ್ಧಿ ನಮ್ಮ ಕರ್ತವ್ಯ ಎಂದರು.
56000 ಕೋಟಿ ರೂಪಾಯಿಗಳನ್ನು ನೀರಾವರಿಗೆ ವೆಚ್ಚ ಮಾಡಲಾಗಿದೆ:56000 ಕೋಟಿ ರೂಪಾಯಿಗಳನ್ನು ನೀರಾವರಿಗೆ ವೆಚ್ಚ ಮಾಡಲಾಗಿದೆ.ಪ್ರತಿ ವರ್ಷ ಕನಿಷ್ಠ 10 ಸಾವಿರ ಕೋಟಿ ವೆಚ್ಚ ಮಾಡುವುದಾಗಿ ಹೇಳಿದ್ದೇವೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಪರಿಸರ ತೀರುವಳಿ ಸಿಕ್ಕಿಲ್ಲ. ಒಮ್ಮೆ ನಿಯೋಗವನ್ನು ಕರೆದುಕೊಂಡು ಹೋಗಲಾಗಿತ್ತು. ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನೀವು ಅವರು ರಾಜಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಈಗ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗ ರಾಜಿ ಏಕೆ ಮಾಡಿಕೊಳ್ಳಬಾರದು ಎಂದರು.
ಮಹದಾಯಿ ಯೋಜನೆಗೆ ಡಿಪಿಆರ್ ಸಿದ್ದಮಾಡಿದೆ. ಕೇಂದ್ರ ಸರ್ಕಾರ ಇಂದಿನವರೆಗೂ ಇತ್ಯರ್ಥ ಮಾಡಿಲ್ಲ. ಕೃμÁ್ಣ ಮೇಲ್ದಂಡೆ ಮೂರನೇ ಹಂತದ ಪ್ರಕಾರ 173 ಟಿ ಎಂ ಸಿ ನೀರು ಹಂಚಿಕೆಯಾಗಿದೆ. 519 ಮೀ.ನಿಂದ 524 ಮೀ ಹೆಚ್ಚಳ ಮಾಡ ಲು ನ್ಯಾಯಾಲಯ ಅನುಮತಿ ನೀಡಿದೆ. 12 ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಮ್ಮ ಮೇಲೆ ಗೂಬೆ ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. 75 ಸಾವಿರ ಹೆಕ್ಟೇರ್ ಭೂಮಿಯನ್ನು ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಬಜೆಟ್ ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
30 ಲಕ್ಷ ಖುಷ್ಕಿ ಜಮೀನಿಗೆ, 40 ಲಕ್ಷ ನೀರಾವರಿ ಜಮೀನಿಗೆ ಪರಿಹಾರ ಕೊಡುವ ತೀರ್ಮಾನ ಮಾಡಲಾಗಿದೆ. ಒಪ್ಪಿಗೆ ಒಡಂಬಂಡಿಕೆ ನೀಡಲು ಕೂಡ ಸರ್ಕಾರ ಒಪ್ಪಿದೆ.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 2023-24 ರ ಬಜೆಟ್ ನಲ್ಲಿ 5300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇಂದಿನವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಜೆಜೆಎಂ ಯೋಜನೆಯಡಿ ಕಳೆದ ವರ್ಷ, ಹಾಗೂ ಈ ವರ್ಷ ಸೇರಿ 13 ಸಾವಿರ ಕೋಟಿ ಕೊಡಬೇಕು. 2023-24 ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು ಸಚಿವರು ಹೇಳಿದ್ದನ್ನೇ ಇಲ್ಲಿಯೂ ಹೇಳಿದರು. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿ ಹೇಳಿದರು.
ನರೇಗಾ ಹಣವನ್ನು ಕೊಡದೆ, ಹೆಸರನ್ನು ಕೂಡ ಬದಲಾಯಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಒಂದುವರೆ ಲಕ್ಷ ಕೋಟಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಷ್ಟವಾಗಿದೆ. ನಾಲ್ಕುವರೆ ಲಕ್ಷ ಕೋಟಿ ತೆರಿಗೆಯನ್ನು ಒಂದು ವರ್ಷಕ್ಕೆ ರಾಜ್ಯ ಸರ್ಕಾರ ನೀಡುತ್ತಿದೆ. ಒಂದು ರೂಪಾಯಿ ಕೊಟ್ಟರೆ ರಾಜ್ಯಕ್ಕೆ 14 ರಿಂದ 15 ಪೈಸೆ ವಾಪಸ್ ಬರುತ್ತದೆ. 85 ಪೈಸೆ ಅವರೇ ಇಟ್ಟುಕೊಳ್ಳುತ್ತಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು ನಮಗೆ ಒಂದೇ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ.
ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ: 2013-18 ರವರೆಗೆ 1 ವರ್ಷಕ್ಕೆ 3ಲಕ್ಷ ಮನೆ ಕಟ್ಟಿಸುತ್ತೇವೆ ಎಂದು ಹೇಳಿ 14,54,666 ಐದು ವರ್ಷಗಳಲ್ಲಿ ಕಟ್ಟಿಸಿದ್ದೇವೆ. 18 ರಿಂದ 19 ರಲ್ಲಿ 3 ಲಕ್ಷ ಮನೆಗಳನ್ನು ಕಟ್ಟಿಸಿದ್ದು, ಫಲಾನುಭವಿಗಳಿಂದ ಹಣ ಪಡೆದು ಕೊಳಗೇರಿಯವರಿಗೆ ಕಟ್ಟಬೇಕಿತ್ತು. ಅದನ್ನು ನಮ್ಮ ಸರ್ಕಾರ 4,90,000 ಮನೆಗಳನ್ನು ಕಟ್ಟಿದೆ. ನಮ್ಮ ಸರ್ಕಾರ ಪ್ರೊ. ಗೋವಿಂದ್ ರಾವ್ ಸವಿತಿ ರಚನೆ ಮಾಡಿದೆ. ಅವರು ಜನವರಿಯಲ್ಲಿ ವರದಿಯನ್ನು ಸಲ್ಲಿಸುತ್ತಿದ್ದು, ಯಾವ ಜಿಲ್ಲೆ ಹಿಂದುಳಿದಿದೆಯೋ ಆಕೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬ ಕೆಲಸ ಮಾಡಲಾಗುವುದು. ನೀರಾವರಿ, ಶಿಕ್ಷಣ ಆರೋಗ್ಯ ಮೂಲಭೂತ ಸೌಕರ್ಯ ಕೆಲಸಗಳನ್ನು ಮಾಡಲಾಗುವುದು. ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದ್ದು ಇನ್ನೂ ಮುಂದೆಯೂ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದರು.
ನಮ್ಮ ಸರ್ಕಾರ 1 ಲಕ್ಷ 6 ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದ್ದು, 46276 ಕೋಟಿ ಉತ್ತರ ಕರ್ನಾಟಕದಲ್ಲಿ ವೆಚ್ಚ ಮಾಡಲಾಗಿದೆ. ಈ ಭಾಗದಲ್ಲಿ ಜನಸಂಖ್ಯೆ 42% ಅಂದರೆ 2,96,28,767 ಇದ್ದು, ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಆರ್ಥಿಕ ಚಟುವಟಿಕೆಗಳಿಲ್ಲದೆ ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಧ್ಯವಿಲ್ಲ. ಆರ್ಥಿಕ ಚಟುವಟಿಕೆಗಳ ಪರಿಣಾಮವಾಗಿ ಜಾತಿ ವ್ಯವಸ್ಥೆ ಹೋಗಲಾಡಿಸುವ ದೂರದೃಷ್ಟಿ ಸರ್ಕಾರದ್ದು ಎಂದರು.
ಕೇಂದ್ರ ಸರ್ಕಾರ ಅಸಹಕಾರವನ್ನು ಶುರುಮಾಡಿದೆ. ನಮಗೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಜಲಜೀವನ ಮಿಷನ್ ನಡಿ 13 ಸಾವಿರ ಕೋಟಿ ಬರಬೇಕು. ಎರಡು ವರ್ಷಗಳಿಂದ ಬಾಕಿ ಇದೆ. ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ದೂರುತ್ತಾರೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಬದ್ಧರಾಗಿದ್ದೇವೆ. ಉತ್ತರ ಹಾಗೂ ದಕ್ಷಿಣ ಕನ್ನಡ ವಿಭಾಗ ಮಾಡಬಾರದು. ಕರ್ನಾಟಕ ಒಂದೇ, ಎಲ್ಲಾ ಭಾಗದ ಜನರ ಅಭಿವೃದ್ಧಿ ನಮ್ಮ ಕರ್ತವ್ಯ ಎಂದರು.
56000 ಕೋಟಿ ರೂಪಾಯಿಗಳನ್ನು ನೀರಾವರಿಗೆ ವೆಚ್ಚ ಮಾಡಲಾಗಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಪರಿಸರ ತೀರುವಳಿ ಸಿಕ್ಕಿಲ್ಲ. ಒಮ್ಮೆ ನಿಯೋಗವನ್ನು ಕರೆದುಕೊಂಡು ಹೋಗಲಾಗಿತ್ತು. ಗೋವಾದಲ್ಲಿ ನಿಮ್ಮ ಸರ್ಕಾರವಿದ್ದು, ಗೋವಾದಲ್ಲಿ ಹೇಳಿ ನೀವು ಅವರು ರಾಜಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರು. ಈಗ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗ ರಾಜಿ ಏಕೆ ಮಾಡಿಕೊಳ್ಳಬಾರದು ಎಂದರು.
ಮಹದಾಯಿ ಯೋಜನೆಗೆ ಡಿಪಿಆರ್ ಸಿದ್ದಮಾಡಿದೆ. ಕೇಂದ್ರ ಸರ್ಕಾರ ಇಂದಿನವರೆಗೂ ಇತ್ಯರ್ಥ ಮಾಡಿಲ್ಲ. ಕೃμÁ್ಣ ಮೇಲ್ದಂಡೆ ಮೂರನೇ ಹಂತದ ಪ್ರಕಾರ 173 ಟಿಎಂಸಿ ನೀರು ಹಂಚಿಕೆಯಾಗಿದೆ. 519 ಮೀ.ನಿಂದ 524 ಮೀ ಹೆಚ್ಚಳ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ. 12 ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ನಮ್ಮ ಮೇಲೆ ಗೂಬೆ ಕೊಡಿಸುವ ಪ್ರಯತ್ನ ಮಾಡಲಾಗುತ್ತಿದೆ. 75 ಸಾವಿರ ಎಕರೆ ಭೂಮಿಯನ್ನು ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಬಜೆಟ್‍ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
30 ಲಕ್ಷ ಖುಷ್ಕಿ ಜಮೀನಿಗೆ, 40 ಲಕ್ಷ ನೀರಾವರಿ ಜಮೀನಿಗೆ ಪರಿಹಾರ ಕೊಡುವ ತೀರ್ಮಾನ ಮಾಡಲಾಗಿದೆ. ತೀರ್ಮಾನ ಮಾಡಿದಂತೆ ನಡೆಸಿಕೊಳ್ಳುತ್ತೇವೆ. ಒಪ್ಪಿಗೆ ಒಡಂಬಡಿಕೆ ನೀಡಲು ಕೂಡ ಸರ್ಕಾರ ಒಪ್ಪಿದೆ ಎಂದರು.
ಮೇಕೆದಾಟು ಯೋಜನೆ 67 ಟಿಎಂಸಿ ಸಂಗ್ರಹ ಮಾಡುವ ಬ್ಯಾಲೆನ್ಸಿಂಗ್ ರಿಸರ್ವಾಯರ್ ಗೆ ತಮಿಳುನಾಡು ಹಾಕಿದ್ದ ಪ್ರಕರಣಗಳು ವಜಾ ಆಗಿವೆ. ಸಿಡಬ್ಲ್ಯೂಸಿ ಹಾಗೂ ಕಾವೇರಿ ಜಲ ನಿರ್ವಹಣೆ ಪ್ರಾಧಿಕಾರದ ಅಂಗಳದಲ್ಲಿ ಪ್ರಕರಣವಿದೆ. ಕೇಂದ್ರ ಸರ್ಕಾರ ಅನುಮತಿ ನೀಡಲು ಈಗ ಯಾವುದೇ ತೊಂದರೆಯಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ 2023-24 ರ ಬಜೆಟ್ ನಲ್ಲಿ 5300 ಕೋಟಿ ಕೊಡುವುದಾಗಿ ಘೋಷಣೆ ಮಾಡಿದ್ದರೂ ಇಂದಿನವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಅಸಹಕಾರ ಮನೋಭಾವವಿದು. ಜೆಜೆಎಂ ಯೋಜನೆಯಡಿ ಕಳೆದ ವರ್ಷ, ಹಾಗೂ ಈ ವರ್ಷ ಸೇರಿ 13 ಸಾವಿರ ಕೋಟಿ ಕೊಡಬೇಕು. 2023-24 ರ ಬಜೆಟ್ ನಲ್ಲಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು ಸಚಿವರು ಹೇಳಿದ್ದನ್ನೇ ಇಲ್ಲಿಯೂ ಹೇಳಿದರು. ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದಾಗಿಯೂ ಹೇಳಿದರು ಎಂದರು.
ನರೇಗಾ ಹಣವನ್ನು ಕೊಡದೆ, ಯೋಜನೆಯನ್ನು ಹೆಸರನ್ನು ಕೂಡ ಬದಲಾಯಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕುವರೆ ಲಕ್ಷ ಕೋಟಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಷ್ಟವಾಗಿದೆ. ನಾಲ್ಕುವರೆ ಲಕ್ಷ ಕೋಟಿ ತೆರಿಗೆಯನ್ನು ಒಂದು ವರ್ಷಕ್ಕೆ ರಾಜ್ಯ ಸರ್ಕಾರ ನೀಡುತ್ತಿದೆ. ಒಂದು ರೂಪಾಯಿ ಕೊಟ್ಟರೆ ರಾಜ್ಯಕ್ಕೆ 14 ರಿಂದ 15 ಪೈಸೆ ವಾಪಸ್ ಬರುತ್ತದೆ. 85 ಪೈಸೆ ಅವರೇ ಇಟ್ಟುಕೊಳ್ಳುತ್ತಾರೆ. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಉತ್ತರ ಮತ್ತು ದಕ್ಷಿಣ ಜಿಲ್ಲೆಗಳು ನಮಗೆ ಒಂದೇ. ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದರು. ಇದಕ್ಕಾಗಿಯೇ ಪೆÇ್ರ.ಗೋವಿಂದರಾವ್ ಸಮಿತಿ ರಚನೆಯಾಗಿದೆ.
ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ:2013 ರಿಂದ 18 ರವರೆಗೆ 1 ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಸುತ್ತೇವೆ ಎಂದು ಹೇಳಿದ್ದೆವು. 14,54,666 ಐದು ವರ್ಷಗಳಲ್ಲಿ ಕಟ್ಟಿಸಿದ್ದೇವೆ. ಪ್ರತಿ ವರ್ಷ ಐದು ಲಕ್ಷ ಮನೆಗಳ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ 18 ರಿಂದ 19 ರಲ್ಲಿ 3.74 ಲಕ್ಷ ಮನೆಗಳನ್ನು ಕಟ್ಟಿಸಿದ್ದು, 19ರಿಂದ 23 ರವರೆಗೆ 4 ವರ್ಷಗಳಲ್ಲಿ 575051ಮನೆಗಳು ನಿರ್ಮಾಣವಾಗಿವೆ. ಎರಡೂವರೆ ವರ್ಷಗಳಲ್ಲಿ 49643 ಮನೆಗಳ ನಿರ್ಮಾಣವಾಗಿದೆ ಎಂದರು.
ಬೆಂಗಳೂರಿನಲ್ಲಿ ಒಂದು ಲಕ್ಷ ಮನೆ ಕಟ್ಟದೆ ಬಿಟ್ಟವರು ಹಿಂದಿನ ಸರ್ಕಾರದವರು. ಫಲಾನುಭವಿಗಳಿಂದ ಹಣ ಪಡೆದು ಕೊಳಗೇರಿಯವರಿಗೆ ಮನೆ ಕಟ್ಟಬೇಕಿತ್ತು. ನಮ್ಮ ಸರ್ಕಾರ 4,09643 ಮನೆಗಳನ್ನು ಕಟ್ಟಿದೆ. ಉತ್ತರ ಕರ್ನಾಟಕದಲ್ಲಿ 209836 ಮನೆಗಳನ್ನು ಕಟ್ಟಲಾಗಿದೆ ಎಂದರು.
ಎಸ್.ಎಮ್. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತುನಮ್ಮ ಸರ್ಕಾರ ಪೆÇ್ರ. ಗೋವಿಂದ್ ರಾವ್ ಸವಿತಿ ರಚನೆ ಮಾಡಿದೆ. ಅವರು ಜನವರಿಯಲ್ಲಿ ವರದಿಯನ್ನು ಸಲ್ಲಿಸುತ್ತಿದ್ದು, ಯಾವ ಜಿಲ್ಲೆ ಹಿಂದುಳಿದಿದೆಯೋ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬ ಕೆಲಸ ಮಾಡಲಾಗುವುದು. ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಮಾನವ ಅಭಿವೃದ್ಧಿ, ಮೂಲಭೂತ ಸೌಕರ್ಯ ಕೆಲಸಗಳನ್ನು ಮಾಡಲಾಗುವುದು. ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದ್ದು ಇನ್ನೂ ಮುಂದೆಯೂ ಹೆಚ್ಚು ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದರು. ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರವನ್ನು ಕಡಿಮೆ ಮಾಡಲಾಗುವುದು ಎಂದರು.