ನೃತ್ಯ ನೀರಾಜನ"-12 (ಕಿರಿಯರ ನೃತ್ಯೋತ್ಸವ) ಭಕ್ತಿ ಪಾದಾರ್ಪಣೆ

varthajala
0

 ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಜನವರಿ 30, ಶುಕ್ರವಾರ ಸಂಜೆ 5-30ಕ್ಕೆ ನಗರದ ಜೆ. ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಗುರು. ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಎಸ್.ಹಚ್. ಭೂಮಿಕಾ, ಕು|| ಎ. ಹನ್ಸಿಕಾ, ಕು|| ಪಿ. ಪ್ರಿಯದರ್ಶಿನಿ ಹಾಗೂ ಕು|| ಆರ್. ಶ್ರದ್ಧಾ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಈ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಗಳಾಗಿ ವಿದುಷಿ ಶ್ರೀಮತಿ ಗಾಯತ್ರಿ ಮಯ್ಯ (ಸಂಸ್ಥಾಪಕ ನಿರ್ದೇಶಕಿ, ತಮೋಹ ಆರ್ಟ್ಸ್ ಫೌಂಡೇಶನ್) ಮತ್ತು ಶ್ರೀಮತಿ ವಾಣಿ ಸತೀಶ್ ಬಾಬು ಹಾಗೂ ಕಲಾಯೋಗಿ ಗುರು ಸತೀಶ್ ಬಾಬು (ನಾಟ್ಯೇಶ್ವರ ನೃತ್ಯ ಶಾಲೆ) ಭಾಗವಹಿಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀ ಮಂಜುನಾಥ್ ತಿಳಿಸಿದ್ದಾರೆ.

Post a Comment

0Comments

Post a Comment (0)