ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ “ತೇಜಸ್ವಿ -ವಿಸ್ಮಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು-ಬರಹ ವಿಷಯಾಧಾರಿತ”À 219ನೇ ಫಲಪುಷ್ಪ ಪ್ರದರ್ಶನವನ್ನು ಜನವರಿ 14 ರಿಂದ 26ರ ವರೆಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಈ ನಿಟ್ಟಿನಲ್ಲಿ ಸಾವಯವ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಅನೇಕ ವಿಷೇಷತೆಗಳನ್ನು ಒಳಗೊಂಡಿರುವ ಈ ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಪಿ ಪಾಯಿಂಟ್‍ಗಳನ್ನು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎರಡು ಫ್ಲವರ್ ಟ್ಯಾಬ್ಲೋಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು, ಇದು ಲಾಲ್‍ಬಾಗ್ ನ ಸುತ್ತಮುತ್ತ ಸಂಚರಿಸಲಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆರ್.ಗಿರೀಶ್ ತಿಳಿಸಿದರು. ಇಂದು ಲಾಲ್‍ಬಾಗ್‍ನ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 219ನೇ ಫಲಪುಪ್ಪ ಪ್ರದರ್ಶನ ಕುರಿತು ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ತೇಜಸ್ವಿ ಅವರ ಬರಹಗಳು, ಸಾಮಾಜಿಕ ಕಳಕಳಿ, ರೈತ ಚಳುವಳಿ, ಪರಿಸರದ ಆಸಕ್ತಿ ಕುರಿತು ಅವರಿಗಿದ್ದ ಕಾಳಜಿಯನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಬಿಂಬಿಸಲಿದೆ. ಜನವರಿ 14 ರಂದು ಸಂಜೆ 4 ಗಂಟೆಗೆ ಲಾಲ್‍ಬಾಗ್ ಗಾಜಿನ ಮನೆಯಲ್ಲಿ 219ನೇ ಫಲಪುಷ್ಪ ಪ್ರದರ್ಶನದ ಉದ್ಘಾಟನೆಯನ್ನು ಮಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದರು.
ಜನವರಿ 14 ರಿಂದ 26ರ ವರೆಗೆ ಲಾಲ್‍ಬಾಗ್‍ನಲ್ಲಿ 219ನೇ ಫಲಪುಷ್ಪ ಪ್ರದರ್ಶನ “ತೇಜಸ್ವಿ -ವಿಸ್ಮಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು-ಬರಹ ವಿಷಯಾಧಾರಿತ” ಫಲಪುಷ್ಪ ಪ್ರದರ್ಶನ ಇದೇ ಮೊದಲ ಬಾರಿಗೆ ಎರಡು ಪ್ಲವರ್ ಟ್ಯಾಬ್ಲೋಗಳ ಪ್ರದರ್ಶನ
January 13, 2026
0
ಗೌರವಾನ್ವಿತ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಭಾಗವಹಿಸುವರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ್ ಬಿ.ಗರುಡಾಚಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜನವರಿ 17 ರಂದು ಮಧ್ಯಾಹ್ನ 1 ಗಂಟೆಗೆ ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಮತ್ತು ಬೋನ್ಸಾಯ್ ಗಿಡಗಳ ಪ್ರದರ್ಶನದ ಉದ್ಘಾಟನೆಯನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯರ ಪುತ್ರಿಯರಾದ ಶ್ರೀಮತಿ ಕೆ.ಪಿ.ಸುಸ್ಮಿತಾ ಮತ್ತು ಶ್ರೀಮತಿ ಕೆ.ಪಿ.ಈಶಾನ್ಯೆ ಅವರು ನೆರವೇರಿಸುವರು ಎಂದು ತಿಳಿಸಿದರು.
ಜನವರಿ 23 ರಂದು ಮಧ್ಯಾಹ್ನ 2.30 ಗಂಟೆಗೆ ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಫರ್ಧೆಗಳು, ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಮತ್ತು ಬೋನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.
ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು: ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ತೇಜಸ್ವಿ ಸಾಹಿತ್ಯದ ಕಥಾ ವಸ್ತುಗಳಾದ ಹಾರುವ ಓತಿ ಮತ್ತು ಆನೆಯ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಗಾಜಿನ ಮನೆಯ ಕೇಂದ್ರಭಾಗದ ಮುಂಭಾಗದಲ್ಲಿ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಹೂ ಜೋಡಣೆ. ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಹೂಕುಂಡಗಳ ಆಕರ್ಷಕ ಜೋಡಣೆಯ ನಡುವೆ ಫಲಪುಷ್ಪ ಪ್ರದರ್ಶನವಿರುತ್ತದೆ.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ತೇಜಸ್ವಿ ಆಸಕ್ತಿಯ ಪರಿಸರ ಪ್ರದರ್ಶನ. ಕುವೆಂಪು-ಹೇಮಾವತಿ, ಶಿವರಾಮ ಕಾರಂತ, ರಾಮಮನೋಹರ ಲೋಹಿಯಾ ಮತ್ತು ರಾಜೇಶ್ವರಿ ತೇಜಸ್ವಿಯವರ ಪ್ರತಿಮೆಗಳು. ಕನ್ನಡ ಸಾಹಿತ್ಯದ ಬಹುಮಹತ್ವದ ಕೃತಿಗಳಲ್ಲಿ ಒಂದಾಗಿರುವ “ಕರ್ವಾಲೋ” ಕಾದಂಬರಿಯ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಗಾಜಿನ ಮನೆಯ ಕೇಂದ್ರ ಭಾಗದ ಹಿಂಬದಿಯಲ್ಲಿ ಆಕರ್ಷಕ ಹೂ ಜೋಡಣೆಯ ನಡುವೆ “ಕರ್ವಾಲೋ” ಕಾದಂಬರಿಯ ಸನ್ನಿವೇಶವೊಂದನ್ನು ಎತ್ತಿನಭುಜ ಶಿಖರದ ಮಾದರಿಯ ಹಿನ್ನೆಲೆಯಲ್ಲಿ ನಡೆಯುವಂತೆ ಹೂ, ಗಿಡ ಮತ್ತು ಚಿತ್ರಗಳ ಮೂಲಕ ರೂಪಿಸಿ ಪ್ರದರ್ಶಿಸಲಾಗುತ್ತದೆ.
ಗಾಜಿನ ಮನೆಯ ಕೇಂದ್ರಭಾಗದ ಬಲಬದಿಯ ಅಂಕಣದಲ್ಲಿ ಬಹುಮುಖ ಪ್ರತಿಭೆಯ ತೇಜಸ್ವಿಯವರ ವ್ಯಂಗ್ಯಚಿತ್ರ-ಪ್ರತಿಮೆಯೊಂದಿಗೆ ಅವರ ಪುಸ್ತಕ-ಪಾತ್ರಲೋಕ. ಪ್ರಕೃತಿಯ ಫಲಗಳ ಬೃಹತ್ ಪ್ರದರ್ಶನ. ಗಾಜಿನ ಮನೆಯ ಕೇಂದ್ರಭಾಗದ ಎಡಬದಿಯಲ್ಲಿ ಮಂತ್ರಮಾಂಗಲ್ಯ ಪರಿಕಲ್ಪನೆಯ ವರ್ಟಿಕಲ್ ಗಾರ್ಡನ್. ಗಾಜಿನ ಮನೆಯ ಕೇಂದ್ರಭಾಗದ ಹಿಂದಿನ ಅಂಕಣದಲ್ಲಿ ತೇಜಸ್ವಿಯವರ ಆಸಕ್ತಿಯನ್ನಾಧರಿಸಿದ ವ್ಯಂಗ್ಯಚಿತ್ರ ಪ್ರತಿಮೆಗಳ ಅನಾವರಣ. ದಾರದ ಕಲೆಯ ಮೂಲಕ ಅರಳಲಿರುವ ತೇಜಸ್ವಿಯವರ ಮುಖಭಾವ. ಸಿರಿಧಾನ್ಯದ ಸಿರಿಯಾಗಿ ತೇಜಸ್ವಿಯವರ ಮುಖಭಾವ. ಹತ್ತು ಆಕರ್ಷಕ ಪುಷ್ಪ ಪಿರಮಿಡ್ಡುಗಳು ಹಾಗೂ ಅವುಗಳಿಗೆ ಸಂಯೋಜಿಸಿದೆ ತೇಜಸ್ವಿ ಮತ್ತು ಪಕ್ಷಿ-ಕೀಟಗಳ ಚಿತ್ರಗಳು. ತೇಜಸ್ವಿ ಬದುಕು-ಬರಹ-ಸಾಧನೆ ಕುರಿತ ಸಚಿತ್ರ ಮಾಹಿತಿ ಪ್ರದರ್ಶನ ಇರಲಿದೆ. ಕಂಬಗಳಲ್ಲಿ ಅರಳುವ ಪುಷ್ಪ ಡೂಮ್ಸ್‍ಗಳು, ಪ್ಯಾಲುಡೇರಿಯಂ ಪರಿಕಲ್ಪನೆಯ ಅನಾವರಣ, ಡಾರ್ಜಿಲಿಂಗ್‍ನ ಸಿಂಬಿಡಿಯಂ ಹೂಗಳ ಪ್ರದರ್ಶನ, ಕಾಡಿನೊಳಗಿನ ತೇಜಸ್ವಿಯವರ 3ಡಿ ಕಲಾಕೃತಿ, ನಿಸರ್ಗದ ಅಪರೂಪದ ಫಲ-ಪುಷ್ಪಗಳ ಪ್ರದರ್ಶನ, ಪ್ರದರ್ಶನದ ಉದ್ಘಾಟನೆಗೆ ಬ್ಯಾಂಡ್‍ಗಳ ಹಿಮ್ಮೇಳ, ವಿವಿಧ ವಿನ್ಯಾಸಗಳ ಜೋಡಣೆಗೆ ಹಲವಾರು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ, ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 95 ಕ್ಕೂ ಹೆಚ್ಚು ವಿವಿಧ ವಾರ್ಷಿಕ ಹೂವುಗಳು, 8 ಬಗೆಯ ಸೇವಂತಿಗೆ, ಗುಲಾಬಿ, ಆರ್ಕಿಡ್ಸ್ ವಿವಿಧ ವರ್ಣದ ಪಾಯಿನ್ಸಿಟಿಯಾ, ಪೆಂಟಾಸ್‍ಕಾರ್ನಿಯಾ, ಬ್ರೋಮಿಲಿಯಾಯ್ಢ್, ಟ್ಯೂಬಿರೋಸ್‍ರೋಟೆಡ್ ಬಿಗೋನಿಯಾ, ಸಿಲೋಷಿಯಾ, ಸ್ಟಾಟಿಸ್, ಪ್ಲಾಕ್ಸ್, ಸಾಲ್ವಿಯಾ, ಹೈಡ್ರಾಂಜಿಯ, ಮೆರಿಗೋಲ್ಡ್, ಡೇಲಿಯಾ, ಜಿನ್ನಿಯಾ, ಪೆಟೂನಿಯಾ. ಕಾಸ್ಮಾಸ್, ಕ್ಲಾರ್ಕಿಯಾ, ಸೆಂಚೂರಿಯಾ, ಸ್ನಾಪ್‍ಡ್ರಾಗನ್, ಜೆರ್ಬೆರಾ, ಹೈಬಿಸ್ಕಸ್ ಡ್ವಾರ್ಫ್, ಪ್ಯಾನ್ಸಿ, ವರ್ಬಿನಾ. ಕೆಲೆಂಜೊ, ಆಂಥೂರಿಯ, ರೂಸ್ಟೇಕಿಯಾ, ಲನೇರಿಯಾ, ಟೊರೇನಿಯಾ, ಅರೈಸಂ, ಮೆಲಪೆÇೀಡಿಯಂ. ಕೋÀಲಿಯಸ್, ಕ್ಯಾಲಿಬ್ರೋಚಿ, ಅಡೇನಿಯಂ, ಯೂಪರ್ಬಿಯಾ ಮಿಲಿ, ಕೂಫಿಯಾ, ಲ್ಯಾಂಟೆನಾ, ಫಿಲ್ಲಾಂಥಸ್, ಕ್ಯಾಲಾಲಿಲ್ಲಿ, ಬೋಗನ್‍ವಿಲ್ಲಾ ಮಾಂಡೊವಿಲ್ಲಾ, ನಷ್ಪ್ರೂಷಿಯಂ, ಬಾಲ್ಸಂ, ಇಂಪೇಷನ್ಸ್, ಗಲಾಕ್ಸೀನಿಯಾ, ಹಿಲ್ಬಾಲ್ಸಮ್, ಜಿರೇನಿಯಂ, ಹಿಲಿಯೋಟ್ರೋಪ್, ವಿಂಕಾ, ಪೆಂಟಾಸ್‍ಕಾರ್ನಿಯಾ, ಅಕಿಮಿನಾಸ್, ಟ್ಯೂಬಿ ರೋಸ್, ಸೈಡರ್‍ಲಿಲ್ಲಿ, ಆಂಟಿರೈನಮ್, ಆಸ್ಪರ್, ಸಿಲೋಷಿಯಾ, ವಾರ್ಷಿಕ ಸೇವಂತಿಗೆ, ಹಾಲಿಹಾಕ್, ಅಜಿರೇಟಂ ಇತ್ಯಾದಿಗಳು ಸೇರಿವೆ. ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಹೂ ಗಿಡನ್ ತರಕಾರಿ ಮತ್ತು ಔಷÀಧಿ ಸಸ್ಯಗಳು ಪ್ರದರ್ಶನಗೊಳ್ಳಲಿವೆ ಎಂದರು.
ಗಾಜಿನ ಮನೆಯ ಹೊರಾಂಗಣದ ವಿಶೇಷಗಳು: ಎಲ್.ಇ.ಡಿ ಸ್ಕ್ರೀನ್‍ಗಳನ್ನು ಬಳಸಿ ಲಾಲ್‍ಬಾಗ್‍ನ ಆಯ್ದ 6 ಸ್ಥಳಗಳಲ್ಲಿ ತೇಜಸ್ವಿಯವರ ಬದುಕು-ಬರಹ ಸಾಧನೆಗಳನ್ನು ಬಿಂಬಿಸುವ ಫೋಟೋಗಳು, ವಿಡಿಯೋಗಳು, ಎಐ ವಿಡಿಯೋ ತುಣುಕುಗಳು ಫಲಪುಷ್ಪ ಪ್ರದರ್ಶನದ ಅವಧಿಯುದ್ದಕ್ಕೂ ಪ್ರದರ್ಶನಗೊಳ್ಳಲಿದೆ. ಗಾಜಿನ ಮನೆಯ ಹೊರಾವರಣದ ಹುಲ್ಲುಹಸಿನ ನಾಲ್ಕೂ ಮೂಲೆಗಳಲ್ಲಿ ತೇಜಸಸ್ವಿಯವರ ಏಕಾಂತ-ಲೋಕಾಂತ ಮತ್ತು ಪರಿಸರ ಕಲಝಿಯನ್ನು ಗುರುತಿಸುವ ಕಲಾಕೃತಿಗಳು ಹಾಗೂ ಗಾಜಿನ ಮನೆಯ ಮುಖ್ಯದ್ವಾರದ ಇಕ್ಕೆಲಗಳಲ್ಲಿ ಬಂಡೀಪುರ ಅರಣ್ಯ ಪ್ರದೇಶದಿಂದ ಬಂದಿರುವ ಲಂಟಾನದಲ್ಲಿ ಮಾಡಿರುವ ಬೃಹತ್ ಆನೆಗಳು, ಚಿಂಪಾಂಜಿ, ವಿವಿಧ ತರಕಾರಿಗಳಲ್ಲಿ ಮಾಡಿರುವ ಪ್ರಾಣಿ ಪಕ್ಷಿಗಳ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಇವುಗಳಲ್ಲದೆ ಬಣ್ಣದ ಚೆಂಡುಗಳನ್ನು ಬಳಸಿಕೊಂಡು ತೇಜಸ್ವಿಯವರ ಮುಖವನ್ನು ಬಿಂಬಿಸುವ ಅಮೂರ್ತ ಕಲಾಕೃತಿ, ಪುಷ್ಪಗಳಿಂದ ನರ್ತಿಸುವ ರಾಷ್ಟ್ರಪಕ್ಷಿ-ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ಮೆಗಾ ಫ್ಲೋರಲ್ ಫ್ಲೊ, ತೂಗುವ ಹೂಗಳ ಬಾಗುವ ಚೆಲುವು, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಅರಳುವ ಸ್ವಾಗತ ಕಮಾನುಗಳು, ತೇಜಸ್ವಿ ವೇಧಿಕೆ, ತೇಜಸ್ವಿ ಫೊಟೋ ಗ್ಯಾಲರಿ, ಹಕ್ಕಿಚಿತ್ರ, ಕೀಟಲೋಕ ಪ್ರದರ್ಶನಗೊಳ್ಳಲಿವೆ.
ಫಲ-ಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ರಕ್ಷಣಾ ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 15 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸಾ ಘಟಕಗಳು, ಆಂಬುಲೆನ್ಸ್ ವ್ಯವಸ್ಥೆ, ಸೇರಿದಂತೆ ಸಾರ್ವಜನಿಕರ ಸುರಕ್ಷತೆಗೆ ಕ್ರಮವಹಿಸಲಾಗಿದೆ. ಅಲ್ಲದೇ ಅಲ್ಲಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯಗಳ ವ್ಯವಸ್ಥೆಯನ್ನು ಸಹ ಮಾಡÀಲಾಗಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಹಾಗೂ ವಾಹನ ದಟ್ಟಣೆ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗಾಗಿ ಮೆಟ್ರೋ ಸಂಚಾರ ವ್ಯವಸ್ಥೆಯ ವಿಸ್ತರಣೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ : ಈ ಬಾರಿ ಸಾರ್ವಜನಿಕರಿಗೆ ಅನುಕೂಕಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರವೇಶ ಟಿಕೆಟ್‍ಗಳನ್ನು ಗಾಜಿನ ಮನೆಯ ಬಳಿ ಮುಂಜಾನೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಲಾಲ್ ಬಾಗ್‍ನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಟಿಕೆಟ್ ಗಳನ್ನು ನೀಡಲಾಗುವುದು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿದ್ದು ಟಿಕೆಟ್ ಬುಕ್ ಮಾಡಲು ಜಾಲತಾಣ https://hasiru.karnataka.gov. in/floweshow/login.aspx ಗೆ ಭೇಟಿ ನೀಡಿ ಅಥವಾ ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ದರ ವಯಸ್ಕರರಿಗೆ 80 ರೂ., ರಜಾ ದಿನಗಳಲ್ಲಿ 100 ರೂ., 12 ವರ್ಷದೊಳಗಿನ ಮಕ್ಕಳಿಗೆ 30 ರೂ.ಗಳನ್ನು ನಿಗಧಿಪಡಿಸಲಾಗಿದೆ. 6 ವರ್ಷದೊಳಗಿನ ಹಾಗೂ ಶಾಲಾ ಸಮವಸ್ತ್ರಧರಿಸಿ ಬರುವ 10ನೇ ತರಗÀತಿಯವರೆಗಿನ ಎಲ್ಲಾ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆÀ. ಜನವರಿ 16 ರಿಂದ 26 ರವರೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ನಾಟಕಗಳ ಪ್ರದರ್ಶನ: ಜನವರಿ 16 ರಂದು ನನ್ನ ತೇಜಸ್ವಿ, ಜನವರಿ 18 ರಂದು ಕರ್ವಾಲೋ, ಜನವರಿ 20 ರಂದು ಕೃಷ್ಣೇಗೌಡನ ಆನೆ, ಜನವರಿ 22 ರಂದು ಜುಗಾರಿ ಕ್ರಾಸ್, ಜನವರಿ 24 ರಂದು ಯಮಳ ಸೋಲು, ಜನವರಿ 26 ರಂದು ಅಣ್ಣನ ನೆನಪು ನಾಟಕಗಳನ್ನು ಆಯೋಜಿಸಲಾಗಿದೆ. ಈ ನಾಟಕಗಳು ಕನ್ನಡ ಸಾಹಿತ್ಯ, ಸಂಸ್ಕøತಿ ಹಾಗೂ ತೇಜಸ್ವಿಯವರ ಪರಿಸರ ಚಿಂತನೆಗಳನ್ನುಜನಸಾಮಾನ್ಯರ ನಡುವೆ ಪರಿಣಾಕಾರಿಯಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ.
ಪಾರ್ಕಿಂಗ್ ವ್ಯವಸ್ಥೆ: ವಾಹನದಲ್ಲಿ ಆಗಮಿಸುವ ವೀಕ್ಷಕರು ಜೋಡಿ ರಸ್ತೆಯ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಜೋಡಿ ರಸ್ತೆ ಬಳಿಯ ಹಾಪ್‍ಕಾಮ್ಸ್ ಆವರಣ ಹಾಗೂ ಜೆಸಿ ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ ಮಾಡಬಹುದಾಗಿದೆ. ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್ ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜ್ ಆವರಣದ ನಿಲ್ದಾಣ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಅವರು ಮನವಿ ಮಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ತೋಟಗಾರಿಕೆ ನಿರ್ದೇಶಕರಾದ ಪರಶಿವಮೂರ್ತಿ, ಅಪರ ನಿರ್ದೇಶಕರುಗಳಾದ ಡಾ.ಎಂ.ಜಗದೀಶ್, ಕೃಷ್ಣ ಮೂರ್ತಿ, ಪ್ರಕಾಶ್ ಸಬರದ್, ದುಂಡಿ ಉಪಸ್ಥಿತರಿದ್ದರು.