ಬೆಂಗಳೂರು : “ಸ್ತ್ರೀ ಎಂದರೆ ಅಷ್ಟೇ ಸಾಕೆ” ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವಪ್ರಸಿದ್ಧ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಜನವರಿ 29 ರಿಂದ ಫೆಬ್ರವರಿ 06 ರ ವರೆಗೆ ಒಟ್ಟು 9 ದಿನಗಳ ಕಾಲ ನಗರದ ಲುಲು ಮಾಲ್‍ನಲ್ಲಿ ಮ್ಮಿಕೊಳ್ಳಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಬಿ.ಬಿ.ಕಾವೇರಿ ಅವರು ತಿಳಿಸಿದರು.ಈ ಕುರಿತಂತೆ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರಿನ ಸಿನಿಮಾ ಪ್ರೇಮಿಗಳು ನಿರೀಕ್ಷಿಸುತ್ತಿದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗ (ಪೂರ್ವದ್ವಾರ ಮೆಟ್ಟಿಲು) ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿರುತ್ತಾರೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಮತ್ತು ಜನಪ್ರಿಯ ನಟಿ ಕು.ರುಕ್ಮಿಣಿ ವಸಂತ್ ಹಾಗೂ ಕನ್ನಡ ಚಿತ್ರರಂಗದ ಗಣ್ಯರು ದೇಶ -ವಿದೇಶದ ಅತಿಥಿಗಳು ಸಹ ಭಾಗವಹಿಸಲಿದ್ದಾರೆ.ಬೆಂಗಳೂರಿನ ರಾಜಾಜಿನಗರದ ಲುಲುಮಾಲ್‍ನಲ್ಲಿರುವ, ಸಿನೆಪೆÇಲಿಸ್‍ನ 11 ಸ್ಕ್ರೀನ್‍ಗಳಲ್ಲಿ ಜನವರಿ 30 ರಿಂದ ಫೆಬ್ರವರಿ 6 ರವರೆಗೆ ಚಲನಚಿತ್ರಗಳ ಪ್ರದರ್ಶನಗಳು ನಡೆಯಲಿವೆ. ಸಿನೆಪೆÇಲಿಸ್, ಲುಲುಮಾಲ್ ಜೊತೆಗೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಹ ಚಲನಚಿತ್ರ ಪ್ರದರ್ಶನಗಳು ನಡೆಯಲಿವೆ.
70 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳ ಪ್ರದರ್ಶನ:ಈ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸ್ಥಿತಿ-ಗತಿ, ಜನ-ಜೀವನ ಮತ್ತು ಸಂಸ್ಕøತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ.
ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಆಸ್ಟ್ರೀಯಾ, ಬೆಲ್ಜಿಯಂ, ನೆದರ್ಲೆಂಡ್, ಫಿನ್‍ಲೆಂಡ್, ಇರಾನ್, ಅಜೆರ್ಂಟೈನಾ, ಕೆನಡಾ, ಡೆನ್‍ಮಾರ್ಕ್, ಗ್ರೀಸ್, ರμÁ್ಯ, ಫಿಲಿಫೈನ್ಸ್, ಪೆÇೀಲೆಂಡ್, ರೊಮಾನಿಯಾ, ಜಪಾನ್, ಸ್ಪೇನ್, ಇಂಡೋನೇಷಿಯಾ, ಇಟಲಿ, ಆಸ್ಟ್ರೇಲಿಯಾ, ಚೀನಾ, ಕಿರ್ಗಿಸ್ತಾನ್ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಸಮಕಾಲೀನ ವಿಶ್ವಸಿನಿಮಾ ವಿಭಾಗದ ಮೂಲಕ "ಬೆಂಗಳೂರಿನಲ್ಲಿ ಜಗತ್ತು" ಎನ್ನುವ ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
“ಸ್ತ್ರೀ ಎಂದರೆ ಅμÉ್ಟೀ ಸಾಕೆ”:ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸುವುದು ವೈಶಿಷ್ಟ್ಯವೇ ಆಗಿದೆ. ಈ ಬಾರಿಯ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿಗಳ ಆಶಯದಂತೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ "ಸ್ತ್ರೀ ಎಂದರೆ ಅμÉ್ಟೀ ಸಾಕೆ" ಎಂಬ ಸಾಲಿನೊಂದಿಗೆ ‘ಸ್ತ್ರೀ ಸಂವೇದನೆ, ಸಮಾನತೆಯ ದನಿʼ ಎಂಬ ಟ್ಯಾಗ್‍ಲೈನ್ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.ಈ ಬಾರಿಯ ಚಿತ್ರೋತ್ಸವದಲ್ಲಿ ಮಹಿಳಾ ನಿರ್ದೇಶಕರು ನಿರ್ದೇಶಿಸಿರುವ ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳಿಗೆ ಮತ್ತು ಜನಮನ್ನಣೆಗೆ ಪಾತ್ರವಾಗಿರುವ 60ಕ್ಕೂ ಹೆಚ್ಚು ಚಲನಚಿತ್ರಗಳು ಸಮಕಾಲೀನ ವಿಶ್ವ ಸಿನಿಮಾ ಸಂಬಂಧಿತ ವಿಭಾಗಗಳಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ.ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತೀದಿನ ಚಲನಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಅಕಾಡೆಮಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮತಿ ಬಿ.ಬಿ.ಕಾವೇರಿ ಅವರು ತಿಳಿಸಿದರು.
50 ವರ್ಷದ ಸಿನಿಮಾ ಪಯಣದ ಸುವರ್ಣ ಸಂಭ್ರಮ:ಖ್ಯಾತ ನಿರ್ಮಾಪಕರಾದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್, ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಎಸ್.ವಿ ರಾಜೇಂದ್ರಸಿಂಗ್ ಬಾಬು, ಚಲನಚಿತ್ರ ಛಾಯಾಗ್ರಾಹಕರಾದ ಎಸ್. ರಾಮಚಂದ್ರ, ಜನಪ್ರಿಯ ಕಲಾವಿದರಾದ ಡಾ.ಜಯಮಾಲ ಅವರು ಕನ್ನಡ ಚಲನಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ಅವರ ಮಹತ್ವದ ಚಲನಚಿತ್ರಗಳ ಪ್ರದರ್ಶನವಿರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದರು.
ಪ್ರಸಿದ್ಧ ಗಾಯಕರು, ಸಂಗೀತ ನಿರ್ದೇಶಕರಾದ ಭಾರತ ರತ್ನ ಭುಪೆನ್ ಹಜಾರಿಕಾ ಮತ್ತು ಈಜಿಪ್ಟ್ನ ಖ್ಯಾತ ನಿರ್ದೇಶಕ ಯೂಸುಫ್ ಷಹೀನ್ ಅವರ ಶತಮಾನೋತ್ಸವ ಸಂಸ್ಕರಣೆ ಹಾಗೂ ಅವರ ಮಹತ್ವದ ಚಲನಚಿತ್ರಗಳ ಪ್ರದರ್ಶನಗಳನ್ನು ಸಹ ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ನಿಧನರಾದ ʼಅಭಿನಯ ಸರಸ್ವತಿ, ಪದ್ಮಭೂಷಣ, ಡಾ ಬಿ. ಸರೋಜಾ ದೇವಿʼ (ರೀಸ್ಟೋರ್ ಮಾಡಲಾದ ʼಅಮರಶಿಲ್ಪಿ ಜಕಣಾಚಾರಿʼ ಚಲನಚಿತ್ರ ಪ್ರದರ್ಶನ) ಮತ್ತು ಹಿರಿಯ ಕಲಾವಿದರಾದ ಎಂ. ಎಸ್. ಉಮೇಶ್ ಅವರ ನೆನಪಿನಲ್ಲಿ ʼಗೋಲ್ಮಾಲ್ ರಾಧಾಕೃಷ್ಣʼಚಲನಚಿತ್ರ ಪ್ರದರ್ಶನ ನಡೆಯಲಿದೆ. ಡಿಸಿಪಿ ಫಾರ್ಮಾಟ್ ನಲ್ಲಿ ಡಿಜಿಟಲೈಜ್ ಆಗಿರುವ ಕನ್ನಡದ ‘ಆಕ್ಸಿಡೆಂಟ್ʼ ಚಲನಚಿತ್ರದ ಪ್ರದರ್ಶನ ಮತ್ತು ಜನಪ್ರಿಯ ನಟ, ನಿರ್ದೇಶಕರಾದ ಶಂಕರನಾಗ್ ಅವರ ಕಲಾತ್ಮಕತೆಯ ಸಂಭ್ರಮ ಹಾಗೂ ನೆನಪುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಚಿತ್ರೋತ್ಸವದ ವಿವಿಧ ವಿಭಾಗಗಳು ಮತ್ತು ಕಾರ್ಯಕ್ರಮಗಳು:
1. ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ
2. ಚಿತ್ರ ಭಾರತಿ-ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ
3. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ
4. ಸಮಕಾಲೀನ ವಿಶ್ವ ಸಿನಿಮಾ
5. ಕನ್ನಡ ಜನಪ್ರಿಯ ಸಿನಿಮಾ
6. ಫಿಪ್ರೆಸ್ಕಿ - ವಿಮರ್ಶಕರ ವಾರ
7. ಜೀವನ ಕಥನ ಆಧಾರಿತ ಚಿತ್ರಗಳು
8. ದೇಶ ಕೇಂದ್ರಿತ ವಿಶೇಷ: ಪೆÇೀಲೆಂಡ್
9. ಭಾರತೀಯ ಉಪಭಾμÁ ಚಲನಚಿತ್ರಗಳು
10. ಪುನರಾವಲೋಕನ: ಕನ್ನಡದ ಮೇರುನಟ ಪದ್ಮಭೂಷಣ ಡಾ.ರಾಜ್‍ಕುಮಾರ್‍ಅವರು ನಟಿಸಿರುವ ಇತ್ತೀಚೆಗೆ 4 ಕೆ ರೆಸಲ್ಯೂಷನ್ ನಲ್ಲಿ ಎನ್.ಎಫ್.ಡಿ.ಸಿ - ಎನ್.ಎಫ್.ಎ.ಐ, ಪುಣೆ ಸಂಸ್ಥೆ ರೀಸ್ಟೋರ್ ಮಾಡಿರುವ 5 ಮಹತ್ವದ ಕನ್ನಡ ಚಲನಚಿತ್ರಗಳಾದ ಭಕ್ತ ಕನಕದಾಸ {1960}, ಉಯ್ಯಾಲೆ {1964}, ಸಂಧ್ಯಾರಾಗ {1966} ಶಂಕರ್‍ಗುರು {1978}, ಜೀವನಚೈತ್ರ {1992}] ಪ್ರದರ್ಶನ ನಡೆಯಲಿದೆ.
ಆಸ್ಕರ್ ಪ್ರಶಸ್ತಿ ಪುರಸ್ಕøತ ಪೆÇೀಲೆಂಡಿನ ಪ್ರಖ್ಯಾತ ನಿರ್ದೇಶಕ ಆಂದ್ರೆ ವಾಯ್ದಾ ಅವರ ನಿರ್ದೇಶನದ 7 ಪೋಲಿμï ಚಲನಚಿತ್ರಗಳ ಪ್ರದರ್ಶನ, ಪೋಲಿμï ಇನ್ಸ್‍ಟ್ಯುಟ್, ನವದೆಹಲಿಯ ಸಹಯೋಗದಲ್ಲಿ.ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್ ಅವರ ಹೆಸರಾಂತ ಚಲನಚಿತ್ರಗಳಾದÀ ಭೂಮಿಕಾ {1971}, ಗಮನ್ {1978}, ಭಾವ್ನಿ ಭವಾಯ್ {1980}, ಚಿದಂಬರಂ {1985}, ಮಿರ್ಚ್ ಮಸಾಲ {1987}] ಪ್ರದರ್ಶನ ನಡೆಯಲಿದೆ.ಸಮಕಾಲೀನ ಚಲನಚಿತ್ರ ನಿರ್ದೇಶಕರ ವಿಶೇಷ: ಥಾಯ್ಲೆಂಡಿನ ಖ್ಯಾತ ನಿರ್ದೇಶಕ ಅಚಿತಪಾಂಗ್ ವೀರಸೆಥಕುಲ್ ಅವರ 4 ಪ್ರಮುಖ ಚಲನಚಿತ್ರಗಳ ಪ್ರದರ್ಶನ.
ಫೆಸ್ಟಿವಲ್ ಕೆಲೈಡೋಸ್ಕೋಪ್: ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಜನಮನ್ನಣೆ ಪಡೆದ ಸಮಕಾಲೀನ ಭಾರತೀಯ ಚಲನಚಿತ್ರಗಳ ಪ್ರದರ್ಶನ.
ಸಂರಕ್ಷಿಸಲ್ಪಟ್ಟ ಮಹತ್ವದ ಚಲನಚಿತ್ರಗಳು: ಹೇಮಾವತಿ {1977, ನಿರ್ದೇಶನ: ಎಸ್.ಸಿದ್ದಲಿಂಗಯ್ಯ}, ಪಡುವಾರಹಳ್ಳಿ ಪಾಂಡವರು {1978, ನಿರ್ದೇಶನ: ಪುಟ್ಟಣ್ಣ ಕಣಗಾಲ್}, ದೋ ಬಿಘಾ ಜಮೀನ್ {1953, ನಿರ್ದೇಶನ: ಬಿಮಲ್ ರಾಯ್},ವಸ್ತುಹಾರ {1991, ನಿರ್ದೇಶನ: ಜಿ. ಅರವಿಂದನ್}, ಕ್ಲಿಯೋ ಫ್ರಮ್ 5 ಟು 7 {1962, ನಿರ್ದೇಶನ: ಆಗ್ನೆಸ್ ವಾರ್ದಾ} ಮತ್ತು ಇತರೆ ಭಾರತೀಯ ಭಾμÉಗಳ ಚಲನಚಿತ್ರಗಳ ಪ್ರದರ್ಶನವಿರಲಿದೆ.
ಶತಮಾನೋತ್ಸವ ಸ್ಮರಣೆ:
ಶ್ರದ್ಧಾಂಜಲಿ ಮತ್ತು ನೆನಪು, ಚಿತ್ರೋತ್ಸವದ ಧ್ಯೇಯವಾಕ್ಯ ವಸ್ತು ಕೇಂದ್ರಿತ ಸಿನಿಮಾಗಳು: ಸ್ತ್ರೀ ಎಂದರೆ ಅμÉ್ಟೀ ಸಾಕೆ.....ʼ ಸ್ತ್ರೀ ಸಂವೇದನೆ ಮತ್ತು ಸಮಾನತೆಯ ದನಿ.
ಕ್ರಾನಿಕಲಿಂಗ್ ಆಫ್ರಿಕಾ: ಅಲಯನ್ಸ್ ಫ್ರಾಂಸೆ ಮತ್ತು ಐ.ಎಫ್ ಸಿನೆಮಾದ ಸಹಯೋಗದಲ್ಲಿ ಆಯ್ದ ಸ್ಮರಣೀಯ ಆಫ್ರಿಕನ್ ಚಲನಚಿತ್ರಗಳ ಪ್ರದರ್ಶನ ಸಹ ಇರಲಿದೆ.91 ವರ್ಷಗಳ ಕನ್ನಡ ಚಲನಚಿತ್ರರಂಗದ ಮಹತ್ವದ ಮೈಲಿಗಲ್ಲುಗಳನ್ನು ಬಿಂಬಿಸುವ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭ:ಫೆಬ್ರವರಿ 6 ರಂದು ಸಂಜೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಚಿತ್ರಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸನ್ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್‍ಗೆಹ್ಲೋಟ್‍ಅವರು ಅಧ್ಯಕ್ಷತೆ ವಹಿಸುತ್ತಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ತಿಳಿಸಿದರು.
ಪ್ರತಿನಿಧಿ ನೋಂದಣಿ:ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಪ್ರಕ್ರಿಯೆಜನವರಿ 16 ರಿಂದ ಪ್ರಾರಂಭವಾಗಿದೆ. ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ ಭೇಟಿ ನೀಡಿ ತಿತಿತಿ.biಜಿಜಿes.oಡಿg ಚಿತೋತ್ಸವದ ನೀತಿ ನಿಯಮಾವಳಿಗಳನ್ನು ಅನುಸರಿಸಿ, ಪ್ರತಿನಿಧಿ ನೊಂದಣಿ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಸಿನಿಮಾಸಕ್ತರು ಪ್ರತಿನಿಧಿಗಳಾಗಿ ನೊಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ.
ಚಿತ್ರೋತ್ಸವದ ಪ್ರತಿನಿಧಿ ನೊಂದಣಿ ಶುಲ್ಕ:ಸಾರ್ವಜನಿಕರಿಗೆ ರೂ. 800/-, ಚಲನಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ (ಫಿಲಂ ಸೊಸೈಟಿ) ಸದಸ್ಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ರೂ.400/- ನಿಗದಿಪಡಿಸಲಾಗಿದೆ.
ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡ ಪ್ರತಿನಿಧಿಗಳು ನೊಂದಣಿಯಾದ 3 ದಿನಗಳ ಬಳಿಕ ಕರ್ನಾಟಕ ಚಲನಚಿತ್ರ ಅಕಾಡೆಮಿ, ನಂದಿನಿ ಲೇಔಟ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಶಿವಾನಂದ ಸರ್ಕಲ್, ಸಿನೆಪೊಲಿಸ್, ಲುಲುಮಾಲ್, ರಾಜಾಜಿನಗರ, ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೇ ಹಂತ ಈ ಸ್ಥಳಗಳಲ್ಲಿ ಚಲನಚಿತ್ರೋತ್ಸವದ ಪ್ರತಿನಿಧಿ ಕಾರ್ಡ್‍ಗಳನ್ನು ಪಡೆಯಬಹುದು ಎಂದು ತಿಳಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಹೆಚ್ಚಿನ ಸ್ಥಳವಕಾಶ ಇರುವುದರಿಂದ ಈ ಬಾರಿ ಚಲನ ಚಿತ್ರೋತ್ಸವಕ್ಕೆ ಲುಲು ಮಾಲ್ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಚಿತ್ರೋತ್ಸವದಲ್ಲಿ ಈ ಬಾರಿ ವಾಲ್ ಆಫ್ ಆನರ್, ಡಿಜಿಟಲ್ ಬೋರ್ಡ್, ಸೆಲ್ಫಿ ಪಾಯಿಂಟ್, ಛಾಯಾಚಿತ್ರ ಪ್ರದರ್ಶನಕ್ಕೆ ವಿಫುಲ ಸ್ಥಳವಕಾಶ ಒದಗಿಸಲಾಗಿದ್ದು ಹಾಗೂ ಸಾರಿಗೆ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಲುಲು ಮಾಲ್ ಆಯ್ಕೆ ಮಾಡಲಾಗಿದೆ.ಯಾವುದೇ ಒತ್ತಡಕ್ಕೆ ಮಣಿಯದೇ ಅತ್ಯಂತ ಪಾರದರ್ಶಕವಾಗಿ ಹಾಗೂ ಅರ್ಹತೆ ಆಧರಿಸಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಚಲನ ಚಿತ್ರೋತ್ಸವದಲ್ಲಿ ಶೈಕ್ಷಣಿಕ ಚಟುವಟಿಕೆಗಳು:ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ (ನಾವು, ಮತ್ತು ನಮ್ಮ ಸಿನಿಮಾ) ಕುರಿತ ಮಾಸ್ಟಕ್ರ್ಲಾಸ್.ಖ್ಯಾತ ಸಂಕಲನಕಾರರಾದ ಶ್ರೀಕರ್ ಪ್ರಸಾದ್ ಅವರಿಂದ ಚಲನಚಿತ್ರದ ಸಂಕಲನದ ಮಹತ್ವ ಕುರಿತ ಮಾಸ್ಟಕ್ರ್ಲಾಸ್.
ನಿರ್ದೇಶಕ – ಸಂಕಲನಕಾರ ಮಹೇಶ್ ನಾರಾಯಣನ್ ಅವರಿಂದ ‘ಸಮಕಾಲೀನ ಚಲನಚಿತ್ರ ಕಥನ ನಿರೂಪಣೆ ಮತ್ತು ಶೈಲಿ ಕುರಿತು ಮಾಸ್ಟರ್ ಕ್ಲಾಸ್.
ಹೆಸರಾಂತ ಧ್ವನಿ ವಿನ್ಯಾಸಕರಾದ ಬಿಶ್ವದೀಪ್ ಚಟರ್ಜಿ ಅವರಿಂದ ದೃಶ್ಯಾತೀತ ಧ್ವನಿ – ಆಡಿಯೋಗ್ರಫಿಯ ಕಲೆಯ ಬಗ್ಗೆ ಮಾಸ್ಟರ್ ಕ್ಲಾಸ್.
ಅನುರಾಗ್ ಕಶ್ಯಪ್‍ರವರಿಂದ ಸಾಂಪ್ರದಾಯಿಕ ಕಲ್ಪನೆಗಳಾಚೆಗಿನ –ಚಲನಚಿತ್ರ ಕಥನಗಾರಿಕೆ ಕುರಿತ ಮಾಸ್ಟರ್ ಕ್ಲಾಸ್.
ಹೆಸರಾಂತ ಸಿನಿಮಾಟೋಗ್ರ್ರಾಫರ್ ವಿ.ಕೆ. ಮೂರ್ತಿ ವಾರ್ಷಿಕ ಸ್ಮಾರಕ ಉಪನ್ಯಾಸ – ಶ್ರೀ ಗಿರೀಶ್ ಕಾಸರವಳ್ಳಿ ಅವರಿಂದ. ಹಿರಿಯ ಛಾಯಾಗ್ರಾಹಕರಾದ ಜಿ.ಎಸ್ ಭಾಸ್ಕರ್ ಅವರಿಂದ ಕಾರ್ಯಕ್ರಮ ನಿರ್ವಹಣೆ.ಜಯಂತ್ ಕಾಯ್ಕಿಣಿ ಅವರೊಂದಿಗೆ ಚಲನಚಿತ್ರ ರಸಗ್ರಹಣದ ಪ್ರಾಮುಖ್ಯತೆ ಮತ್ತು ಬರಹಗಾರರಾಗಿ ಅವರ ಅನುಭವಗಳ ಕುರಿತು ಮಾತುಕತೆ.ಕನ್ನಡ ಚಿತ್ರರಂಗದ ಗಣ್ಯರ ಜೊತೆ, ಕಳೆದ ಐದು ದಶಕಗಳ ಕನ್ನಡ ಸಿನಿಮಾ ಬಗ್ಗೆ ಸಂವಾದ.
ಚಿತ್ರೋತ್ಸವದ ಧ್ಯೇಯವಾಕ್ಯ ಕೇಂದ್ರಿತ ಸಂವಾದ ಕಾರ್ಯಕ್ರಮ, ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಡೆಯಲಿದೆ.
‘ಬಡವರ ರಾಜಕುಮಾರʼ ಪುಸ್ತಕದ ಕುರಿತು ಮಾತುಕತೆ : ಭಾಗವಹಿಸುವವರು -ಪುಸ್ತಕದ ಲೇಖಕ ಮಂಜುನಾಥ ಅದ್ದೆ, ಸಾಹಿತಿ -ಪತ್ರಕರ್ತರಾದ ಚ.ಹಾ ರಘುನಾಥ್ ಮತ್ತು ಡಾ. ಸಾಧುಕೋಕಿಲ, ಡಾ.ಮುರಳಿ ಮೋಹನ ಕಾಟಿ ಸಂವಾದ ನಡೆಸಿಕೊಡಲಿದ್ದಾರೆ.
ಪಾಲಿμï ಇನ್ಸಿಟಿಟ್ಯೂಟ್, ನವದೆಹಲಿ ಸಹಯೋಗದೊಂದಿಗೆ ಆಸ್ಕರ್ ಪ್ರಶಸ್ತಿ ಪುರಸ್ಕøತ ಪ್ರಖ್ಯಾತ ಪೋಲೆಂಡಿನ ಚಲನಚಿತ್ರ ನಿರ್ದೇಶಕರಾದ ‘ಆಂದ್ರೆ ವಾಯ್ದಾ – ಶತಮಾನೋತ್ಸವ ಸ್ಮರಣೆʼ, ಉಪನ್ಯಾಸ ಮತ್ತು ಪೆÇೀಲಿμï ಚಲನಚಿತ್ರ ಸಂಸ್ಕøತಿ ಕುರಿತು ಸಂವಾದ ಇರಲಿದೆ.
‘ಫಿಪ್ರೆಸ್ಕಿ 100 ವರ್ಷ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ) –ಚಲನಚಿತ್ರ ವಿಮರ್ಶೆ : ಮುಂದಿನ ಹಾದಿ (ಸವಾಲುಗಳು ಮತ್ತು ಸಾಧ್ಯತೆಗಳು)’ : ಈ ವಿಚಾರ ಸಂಕಿರಣದಲ್ಲಿ ಹಿರಿಯ ಚಲನಚಿತ್ರ ವಿಮರ್ಶಕರು ಭಾಗವಹಿಸಲಿದ್ದಾರೆ.
ಮಾಯಾ ಚಂದ್ರ ಅವರಿಂದ ಫಿಲ್ಮ್ ಮೇಕಿಂಗ್ ಪ್ರಕ್ರಿಯೆ ಬಗ್ಗೆ ಮಾಸ್ಟರ್ ಕ್ಲಾಸ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಪಿ.ಬಿ., ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.