ಬೆಂಗಳೂರು 21.01.2026: “ತಂತ್ರಜ್ಞಾನದ ಬಳಕೆಯು ಮಾನವೀಯತೆಗೆ ಪ್ರಯೋಜನವಾದಾಗ ಮಾತ್ರ ಅದು ರ‍್ಥಪರ‍್ಣವಾಗಿರುತ್ತದೆ” ಎಂದು ರ‍್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಬೆಳ್ಳಿ ಮಹೋತ್ಸವ ಆಚರಣೆಗಳು ಮತ್ತು ಇನ್ಕ್ಯುಬೇಷನ್ ಸೆಂಟರ್ ಮತ್ತು ಆಡಿಟೋರಿಯಂ ಉದ್ಘಾಟನಾ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
“ಇಂದು ತ್ವರಿತ ತಾಂತ್ರಿಕ ಬದಲಾವಣೆಯ ಯುಗ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ರೊಬೊಟಿಕ್ಸ್, ಹಸಿರು ತಂತ್ರಜ್ಞಾನ ಮತ್ತು ಡಿಜಿಟಲ್ ರ‍್ಥಿಕತೆಯು ನಮ್ಮ ಭವಿಷ್ಯವನ್ನು ರೂಪಿಸುತ್ತಿವೆ. ಈ ಕಾಲದಲ್ಲಿ, ಶಿಕ್ಷಣ ಸಂಸ್ಥೆಗಳ ಪಾತ್ರವು ಇನ್ನಷ್ಟು ನರ‍್ಣಾಯಕವಾಗುತ್ತಿದೆ” ಎಂದರು.ಈ ದಿನ ಸಿಎಂಆರ್ ಸಂಸ್ಥೆಯಲ್ಲಿ ಉದ್ಘಾಟನೆಗೊಂಡ ಇನ್‌ಕ್ಯುಬೇಶನ್ ಸೆಂಟರ್ "ಸ್ಟರ‍್ಟ್‌ಅಪ್ ಇಂಡಿಯಾ" ಮತ್ತು "ಆತ್ಮನರ‍್ಭರ ಭಾರತ"ದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕೇಂದ್ರವು ನಾವೀನ್ಯತೆಯನ್ನು ಬೆಳೆಸುತ್ತದೆ, ಯುವಜನರ ಆಲೋಚನೆಗಳನ್ನು ಉದ್ಯಮಗಳಾಗಿ ಪರಿರ‍್ತಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಗೆ ಪ್ರಬಲ ವಾಹನವಾಗುತ್ತದೆ.
ಇಲ್ಲಿಂದ ಹೊರಹೊಮ್ಮುವ ಸ್ಟರ‍್ಟ್‌ಅಪ್‌ಗಳು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಪ್ರಯಾಣ ಬೆಳೆಸುತ್ತವೆ ಮತ್ತು ಭಾರತದ ರ‍್ಥಿಕತೆಗೆ ಶಕ್ತಿ ತುಂಬುತ್ತದೆ ಎಂಬ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.“ಪ್ರಿಯ ವಿದ್ಯರ‍್ಥಿಗಳೇ, ನೀವು ದೇಶದ ದೊಡ್ಡ ಶಕ್ತಿ. 21 ನೇ ಶತಮಾನದ ಭಾರತವು ನಿಮ್ಮಿಂದ ತಾಂತ್ರಿಕ ಪ್ರಾವೀಣ್ಯತೆಯನ್ನು ಮಾತ್ರವಲ್ಲದೆ ನೀತಿಶಾಸ್ತ್ರ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಹ ನಿರೀಕ್ಷಿಸುತ್ತದೆ. ಯೋಗಕ್ಷೇಮ, ಸರ‍್ಪಡೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಿ. ಬೆಳೆದಂತೆಲ್ಲ ನೀವು ಕುತೂಹಲದಿಂದಿರಿ, ಪ್ರಶ್ನಿಸಿ, ಪ್ರಯೋಗಿಸಿ ಮತ್ತು ವೈಫಲ್ಯಗಳಿಂದ ಪಾಠ ಕಲಿಯಿರಿ” ಎಂದು ಕಿವಿಮಾತು ಹೇಳಿದರು.ಪ್ರಸ್ತುತ ಭಾರತವು "2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ" ಎಂಬ ಗುರಿಯತ್ತ ಸಾಗುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ನಾವೀನ್ಯಕಾರರು ನರ‍್ಣಾಯಕ ಪಾತ್ರ ವಹಿಸುತ್ತಾರೆ.2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವು ಯುವಜನರ ಹೆಗಲ ಮೇಲೆ ನಿಂತಿದೆ. ಯುವಜನತೆಯ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸು ಮತ್ತು ರಾಷ್ಟ್ರ ನರ‍್ಮಾಣ ಎರಡಕ್ಕೂ ಬಳಸಬೇಕು ಎಂದು ಕರೆ ನೀಡಿದರು.“ರ‍್ನಾಟಕವು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ಬೆಂಗಳೂರು ಭಾರತದ ಶಿಕ್ಷಣ ಮತ್ತು ಐಟಿ ಕೇಂದ್ರ ಎಂದು ಪ್ರಸಿದ್ಧವಾಗಿದೆ. ಇದು ಅಒಖ ಸಂಸ್ಥೆಗಳ ಸಮೂಹ ಸೇರಿದಂತೆ ಹಲವಾರು ವಿಶ್ವ ರ‍್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ ಮತ್ತು ಅಒಖ ತಂತ್ರಜ್ಞಾನ ಸಂಸ್ಥೆಯು ಬೆಂಗಳೂರನ್ನು ಐಟಿ ಕೇಂದ್ರವಾಗಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಈ ದಿನ ಮಹತ್ವದ ದಿನವಾಗಿದ್ದು, ಇದು 25 ರ‍್ಷಗಳ ಶೈಕ್ಷಣಿಕ ಇತಿಹಾಸದ ಬೆಳ್ಳಿ ಮಹೋತ್ಸವವನ್ನು ಆಚರಿಸುತ್ತಿದೆ. ಇದಲ್ಲದೆ, ಇನ್ಕ್ಯುಬೇಷನ್ ಸೆಂಟರ್ ಮತ್ತು ಆಧುನಿಕ ಸಭಾಂಗಣದ ಉದ್ಘಾಟನೆಯು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯ ನಿರಂತರ ಪ್ರಗತಿಗೆ ಸಾಕ್ಷಿಯಾಗಿದೆ. ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಳೆದ 25 ರ‍್ಷಗಳಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಐಟಿ ಮತ್ತು ನಾವೀನ್ಯತೆ ಕೇಂದ್ರವಾದ ಬೆಂಗಳೂರಿನಲ್ಲಿರುವ ಈ ಸಂಸ್ಥೆ, ಶಿಕ್ಷಣ, ಕೈಗಾರಿಕೆ ಮತ್ತು ಸಂಶೋಧನೆಯ ಒಮ್ಮುಖಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ರಾಜ್ಯಪಾಲರು ಪ್ರಶಂಸಿದರು.ಸಿಎಂಆರ್ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಕೆ.ಸಿ. ರಾಮಮರ‍್ತಿ, ಜ್ಞಾನಧಾರ ಟ್ರಸ್ಟ್‌ನ ಅಧ್ಯಕ್ಷೆ ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸವಿತಾ ರಾಮಮರ‍್ತಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.