ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮತ್ತು ಅವುಗಳ ಆಡಳಿತದ ಕಾರ್ಯವ್ಯಾಪ್ತಿಯಲ್ಲಿ ಬರುವ ಕ್ಷೇತ್ರ ಇಲಾಖೆ ನಿಗಮ, ಮಂಡಳಿ, ಆಯೋಗ ಮತ್ತು ಸ್ನಾಯತ್ರ ಸಂಸ್ಥೆಗಳಲ್ಲಿ RTI online portal ನಲ್ಲಿ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು onboard ಆಗಲು ಕ್ರಮವಹಿಸಿ ವರದಿ ಸಲ್ಲಿಸುವಂತೆ ಪತ್ರಗಳ ಮೂಲಕ ನಿರ್ದೇಶನಗಳನ್ನು ನೀಡಲಾಗಿರುತ್ತದೆ. ಆದರೆ ಇದುವರೆವಿಗೆ ಹೆಚ್ಚಿನ ಇಲಾಖೆಗಳು ಅನುμÁ್ಠನಗೊಳಿಸದಿರುವುದು ಗಮನಕ್ಕೆ ಬಂದಿರುತ್ತದೆ.
ಎಲ್ಲಾ, ಸಾರ್ವಜನಿಕ ಪ್ರಾಧಿಕಾರಗಳು ತಮ್ಮ ಅಧೀನದ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳನ್ನು ಈ ಕೂಡಲೇ RTI online portal ನಲ್ಲಿ ಕಡ್ಡಾಯವಾಗಿ onboard ಆಗಲು ಸೂಚನೆ ನೀಡುವಂತೆ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ವಿವರಗಳನ್ನು ಕಡ್ಡಾಯವಾಗಿ ಕಛೇರಿಯ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ತಿಳಿಸಿದೆ.ಈ ಕುರಿತಂತೆ ಸಚಿವಾಲಯದ ಎಲ್ಲಾ ಇಲಾಖೆಯ ಸಂಬಂಧಿಸಿದ ನೋಡಲ್ ಅಧಿಕಾರಿಗಳು ತಮ್ಮ ಆಡಳಿತಾಧೀನದ ಅಧೀನ ಇಲಾಖೆ/ನಿಗಮ/ಮಂಡಳಿ/ಸ್ಥಳೀಯ ಸಂಸ್ಥೆಗಳು/ಸ್ವಾಯತ್ತ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಹಾಗೂ ಕ್ರಮ ವಹಿಸಿರುವ ಕುರಿತಂತೆ ಅನುಸರಣಾ ವರದಿಯನ್ನು ಪಡೆದು ದಿನಾಂಕ 2026 ರ ಫೆಬ್ರವರಿ 12 ರ ಒಳಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ) ಇಲಾಖೆಗೆ ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ಸುಧಾರಣೆ-ತರಬೇತಿ & ಮಾಹಿತಿ ಹಕ್ಕು ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.