ಇನ್ವೆಸ್ಟ್ ಕರ್ನಾಟಕ ಸಮಾವೇಶ – 2025ಕ್ಕೆ ರೂ 100.69 ಕೋಟಿ ವೆಚ್ಚ – ಸಚಿವ ಎಂಬಿ ಪಾಟೀಲ್

varthajala
0

 ಬೆಂಗಳೂರು : ಇನ್ವೆಸ್ಟ್ ಕರ್ನಾಟಕ-2025 ಸಮಾವೇಶಕ್ಕಾಗಿ ಒಟ್ಟು ರೂ. 100.69 ಕೋಟಿ ವೆಚ್ಚವಾಗಿರುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯೆ ಡಾ. ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಹಿಂದಿನ ಇನ್ವೆಸ್ಟ್ ಕರ್ನಾಟಕ-2022 ಸಮಾವೇಶಕ್ಕಾಗಿ ಒಟ್ಟು ರೂ. 74.99 ಕೋಟಿ ವೆಚ್ಚವಾಗಿರುತ್ತದೆ. ಇನ್ವೆಸ್ಟ್ ಕರ್ನಾಟಕ-2025 ರ ಸಮಾವೇಶದಲ್ಲಿ ಸರ್ಕಾರವು 98 ಕಂಪನಿಗಳೊಂದಿಗೆ ಒಟ್ಟು ರೂ.6,23,970/- ಕೋಟಿ ಬಂಡವಾಳ ಹೂಡಲು ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಎಂದು ತಿಳಿಸಿದರು. 

ಬಂಡವಾಳ ಹೂಡುವ ಕಂಪನಿಗಳಿಗೆ ಕೈಗಾರಿಕಾ ನೀತಿ 2025-30, ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27 ಹಾಗೂ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ರನ್ವಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲು ಹಾಗೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಲು ಏಕ ಗವಾಕ್ಷಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಹಾಗೂ ಇತರ ಸಂಬಂಧಿಸಿದ ಇಲಾಖೆಗಳ ಸೇವೆಗಳನ್ನು ಸಂಯೋಜಿಸಲಾಗಿದೆ. ಹೊಸ ಏಕ ಗವಾಕ್ಷಿ ವ್ಯವಸ್ಥೆಯು ರಾಜ್ಯದಲ್ಲಿ ಹೂಡಿಕೆಗಳನ್ನು ಸುಗಮಗೊಳಿಸಲು ಮತ್ತು ತ್ವರಿತಗೊಳಿಸಲು ವ್ಯವಸ್ಥಿತ ಮತ್ತು ಡಿಜಿಟಲ್ ಪ್ರಥಮ ವಿಧಾನ ಒದಗಿಸಿದೆ ಮತ್ತು ಎಲ್ಲಾ ಕೈಗಾರಿಕೆ ಚಟುವಟಿಕೆ ಸಂಬಂಧಿತ ಬಂಡವಾಳ ಹೂಡಿಕೆ ಯೋಜನೆಗಳಿಗೆ ಒಂದೇ ಕಡೆ ಎಲ್ಲಾ ಅನುಮೋದನೆಗಳು/ಮಂಜೂರಾತಿ/ನಿರಾಕ್ಷೇಪಣೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಒಡಂಬಡಿಕೆಗಳಿಗೆ ಸಹಿ ಮಾಡಲಾದ ಕಂಪನಿಗಳಿಂದ ಸುಮಾರು 2,20,051 ಜನರಿಗೆ ಉದ್ಯೋಗ ನಿರೀಕ್ಷಿಸಲಾಗಿದೆ. ಈ ಹಿಂದೆ ನಡೆದಂತಹ 'ಇನ್ವೆಸ್ಟ್ ಕರ್ನಾಟಕ-2022 ರ 5 ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪನಿಗಳೊಂದಿಗೆ ಒಟ್ಟು ರೂ 5,41,369 ಕೋಟಿ ಬಂಡವಾಳ ಹೂಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಈ ಪೈಕಿ 20 ಯೋಜನೆಗಳಿಗೆ – ರಾಜ್ಯಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ / ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಅನುಮೋದನ ನೀಡಲಾಗಿದೆ. ಇವುಗಳಿಂದ ರೂ.2,01,167/- ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ. ಇವುಗಳಲ್ಲಿ 2 ಅನುμÁ್ಠನಗೊಂಡಿದ್ದು, ರೂ.4,093/- ಕೋಟಿ ಬಂಡವಾಳ ಹೂಡಿಕೆಯಾಗಿದೆ ಮತ್ತು 1,415 ಉದ್ಯೋಗ ಸೃಜನೆಯಾಗಿದೆ. ಬಾಕಿ ಯೋಜನೆಗಳು ಅನುμÁ್ಠನದ ಹಂತದಲ್ಲಿರುತ್ತವೆ. ಇವುಗಳೆಲ್ಲಾ ಬೃಹತ್ ಯೋಜನೆಗಳಾಗಿರುವುದರಿಂದ ಅನುμÁ್ಠನಕ್ಕೆ ಕನಿಷ್ಠ 3 ರಿಂದ 5 ವರ್ಷಗಳು ಬೇಕಾಗುತ್ತದೆ. 
ಫೆಬ್ರವರಿ 2025 ರಂದು ಜರುಗಿದ ಜಾಗತಿಕ ಬಂಡವಾಳ = ಹೂಡಿಕೆದಾರರ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಗೆ, ಮೆ. ಜೆಎಸ್‍ಡಬ್ಲ್ಯೂ ಗ್ರೀನ್ ಫೀಲ್ಡ್ ಪೋರ್ಟ್ - ಖೇಣಿಯಲ್ಲಿ ಬಂದರು ಸ್ಥಾಪಿಸಲು ಘೋಷಣೆ ಮಾಡಿರುತ್ತದೆ. ಈ ಯೋಜನೆಗೆ ಸುಮಾರು ರೂ.4,453/- ಕೋಟಿ ಬಂಡವಾಳ ಹೂಡಲಿದ್ದು ಅಂದಾಜು 460 ಎಕರೆ ಭೂಮಿಯ ಅಗತ್ಯವಿರುತ್ತದೆ. ಈ ಭೂಮಿಯು ಲಭ್ಯವಿದ್ದಲ್ಲಿ ಕೆ.ಐ.ಎ.ಡಿ.ಬಿ ಯಿಂದ ನಿಯಮಾನುಸಾರ ಸ್ವಾಧೀನಪಡಿಸಲಾಗುತ್ತದೆ. 
ಮಂಡಳಿಯಿಂದ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲ್ಲೂಕು, ಬಲಕುಂದಿ ಗ್ರಾಮದಲ್ಲಿ 94.03 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದ್ದು ನಿವೇಶನಗಳು ಹಂಚಿಕೆಗೆ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪಿಸಲು ಖಾಸಗಿ ಕಂಪನಿಗಳು ಮುಂದೆ ಬಂದಲ್ಲಿ, ಅಂತಹ ಯೋಜನೆಗಳಿಗೆ ಭೂಮಿಯನ್ನು ನಿಯಮಾನುಸಾರ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

Post a Comment

0Comments

Post a Comment (0)