ಬೆಂಗಳೂರು : ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ 2025-30 ನ್ನು ಜಾರಿಗೊಳಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಂ ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಜವಳಿ ಕ್ಷೇತ್ರವನ್ನು ಉತ್ತೇಜಿಸಲು ಹೊಸ ನೀತಿಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. 2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದಲ್ಲಿ ಜವಳಿ ಹಾಗೂ ನೇಕಾರಿಕೆ ಅಭಿವೃದ್ಧಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು 2024-29ರ ಅವಧಿಗೆ 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗಗಳ ಸೃಜನೆಯ ಗುರಿಯೊಂದಿಗೆ ಹೊಸ ಜವಳಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
2024-25ನೇ ಸಾಲಿನ ಆಯವ್ಯಯ ಕಂಡಿಕೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ದಿನಾಂಕ:15.04.2024 ರನ್ವಯ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ
ನೂತನ ಜವಳಿ ನೀತಿಯನ್ನು ಅನುμÁ್ಠನಗೊಳಿಸಲು ಉನ್ನತಮಟ್ಟದ ತಜ್ಞರ ಸಮಿತಿಯು ದಿನಾಂಕ: 01.08.2024 ರಂದು ಸಭೆ ಸೇರಿ ಹೊಸ ಜವಳಿ ನೀತಿ ತಯಾರಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಿದ್ದು ಅದರನ್ವಯ, ಕರಡು ಜವಳಿ ನೀತಿ ತಯಾರಿಸಲು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರನ್ನು ನೇಮಕ ಮಾಡಲಾಗಿರುತ್ತದೆ ಕರಡು ನೀತಿಯನ್ನು ಸಿದ್ಧಪಡಿಸಲು ಅಗತ್ಯ ಕ್ರಮವಹಿಸಲಾಗಿರುತ್ತದೆ.
ಕರಡು ಹೊಸ ಜವಳು ಪಾಲಿಸಿ ಕೈಗೊಳ್ಳಲು ಸಲಹೆಗಾರರೊಬ್ಬರನ್ನು ನೇಮಿಸಲು ಪ್ರೊಕ್ಯೂರ್‍ಮೆಂಟ್ ಟೆಂಡರ್‍ನ್ನು ಆಹ್ವಾನಿಸಲಾಗಿರುತ್ತದೆ.
ಸಲಹೆಗಾರನ್ನಾಗಿ ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರನ್ನು ಆಯ್ಕೆ ಮಾಡಿ ದಿನಾಂಕ:19.10.2024 ರಂದು ಲೆಟರ್ ಆಪ್ ಅವಾರ್ಡ್ ನೀಡಲಾಗಿರುತ್ತದೆ.
ದಿನಾಂಕ:21.02.2025 ರಂದು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ಕರಡು ಜವಳಿ ನೀತಿ ಪ್ರತಿಯನ್ನು ಇ-ಮೇಲ್ ಮುಖಾಂತರ ಸಲ್ಲಿಸಿರುತ್ತಾರೆ. ದಿನಾಂಕ:24.02.2025 ಹಾಗೂ ದಿನಾಂಕ:27.02.2025 ರಂದು ಅಪರ ನಿರ್ದೇಶಕರು ಹಾಗೂ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇವರ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ಸಲಹೆ ಮತ್ತು ಬದಲಾವಣೆ ಮಾಡಲು ಸೂಚಿಸಲಾಗಿರುತ್ತದೆ.
ಅದರನ್ವಯ, ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ದಿನಾಂಕ:06.03.2025 ಮತ್ತು ದಿನಾಂಕ:17.03.2025 ರಂದು ಬದಲಾವಣೆ ಹಾಗೂ ಸಲಹೆಗಳನ್ನು ಅಳವಡಿಸಿ ಇ-ಮೇಲ್ ಮುಖಾಂತರ ಸಲ್ಲಿಸಿರುತ್ತಾರೆ. ಮತ್ತೊಮ್ಮೆ ಪರಿಶೀಲಿಸಿದ್ದು ಬದಲಾವಣೆಗಳನ್ನು ಅಳವಡಿಸಿ ದಿನಾಂಕ:25.04.2025 ರಂದು ಪರಿಷ್ಕøತ ಕರಡು ಜವಳಿ ನೀತಿಯನ್ನು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರು ಸಲ್ಲಿಸಿರುತ್ತಾರೆ. ಸದರಿ ಕರಡು ಜವಳಿ ನೀತಿಯನ್ನು ಅನುಮೋದನೆಗಾಗಿ ದಿನಾಂಕ:13.05.2025 ರಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.
ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್, ಅವರು ಜವಳಿ ನೀತಿಯನ್ನು ರೂಪಿಸಲು ಅಗತ್ಯ ಸಲಹೆಗಳನ್ನು ಪಡೆಯುವ ಸಲುವಾಗಿ ವಲಯಮಟ್ಟದ ಸ್ಟೇಕ್ ಹೋಲ್ಡರ್ಸ್ ಸಭೆಯನ್ನು ದಿನಾಂಕ:20.11.2024 ರಂದು ದಕ್ಷಿಣ ವಲಯ ಮತ್ತು ಪೂರ್ವ ವಲಯ ಉದ್ದಿಮೆದಾರರೊಂದಿಗೆ ಬೆಂಗಳೂರಿನಲ್ಲಿ ಹಾಗೂ ದಿನಾಂಕ:22.11.2024 ರಂದು ಪಶ್ಚಿಮ ವಲಯ ಮತ್ತು ಉತ್ತರ ವಲಯ ಉದ್ಧಿಮೆದಾರರೊಂದಿಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿರುತ್ತಾರೆ.
ದಿನಾಂಕ:03.01.2025 ರಂದು ಸರ್ಕಾರದ ಕಾರ್ಯದರ್ಶಿ (ಎಂ.ಎಸ್.ಎಂ.ಇ & ಗಣಿ), ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ ರವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಉದ್ಯಮದಾರರೊಂದಿಗೆ ಸ್ಟೇಕ್ ಹೋಲ್ಡರ್ಸ್ ಸಭೆಯನ್ನು ಆಯೋಜಿಸಲಾಗಿರುತ್ತದೆ.
ಸದರಿ ಸಭೆಗಳಲ್ಲಿ ಅನೇಕ ನೇಕಾರರು/ಉದ್ದಿಮೆದಾರರು ಭಾಗವಹಿಸಿದ್ದು, ಉತ್ತಮ ಸಲಹೆ/ಸೂಚನೆಗಳನ್ನು ನೀಡಿದ್ದು ಅವುಗಳನ್ನು ಕರಡು ಜವಳಿ ನೀತಿಯಲ್ಲಿ ಅಳವಡಿಸಿ, ಜವಳಿ ಕ್ಷೇತ್ರ ಹಾಗೂ ನೇಕಾರಿಕೆ ಅಭಿವೃದ್ಧಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜಿಸಲು, ಉದ್ಯಮಿ ಸ್ನೇಹಿ ಕರಡು ನೂತನ ಜವಳಿ ನೀತಿ 2025-30 ಅನ್ನು ದಿನಾಂಕ:21.02.2025 ರಂದು ಸಿದ್ಧಪಡಿಸಿ ಸಲ್ಲಿಸಿರುತ್ತಾರೆ.
ದಿನಾಂಕ:24.02.2025 ಹಾಗೂ ದಿನಾಂಕ:27.02.2025 ರಂದು ಅಪರ ನಿರ್ದೇಶಕರು ಹಾಗೂ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇವರ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅಗತ್ಯ ಸಲಹೆ ಮತ್ತು ಬದಲಾವಣೆ ಮಾಡಲು ಸೂಚಿಸಲಾಗಿರುತ್ತದೆ.
ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ಅಳವಡಿಸಿ, ದಿನಾಂಕ:06.03.2025 ರಂದು ಕರಡು ನೂತನ ಜವಳಿ ಮತ್ತು ಸಿದ್ದ ಉಡುವು ನೀತಿ 2025-30 ನ್ನು ಸಲ್ಲಿಸಿರುತ್ತಾರೆ. ಜವಳಿ ಆಯುಕ್ತರು ಮೆ. ಕೆ.ಪಿ.ಎಂ.ಜಿ. ಅಡ್ವೈಸರಿ ಕನ್ಸಲ್ಟೆಂಟ್ ಸರ್ವೀಸ್ ಪ್ರೈ.ಲಿಮಿಟೆಡ್ ರವರೊಂದಿಗೆ ಚರ್ಚಿಸಿ ಕಲವು ಅಂಶಗಳನ್ನು ಅಳವಡಿಸುವಂತೆ ಸೂಚಿಸಿರುತ್ತಾರೆ.
ಅದರಂತೆ, ಸದರಿ ಸಂಸ್ಥೆಯವರು ಸೂಚಿಸಲಾಗಿರುವ ಅಂಶಗಳನ್ನು ಅಳವಡಿಸಿ. ದಿನಾಂಕ:25.04.2025 ರಂದು ಕರಡು ನೂತನ ಜವಳಿ ಮತ್ತು ಸಿದ್ಧ ಉಡುವು ನೀತಿ 2025-30ನ್ನು ಸಲ್ಲಿಸಿರುತ್ತಾರೆ. ದಿನಾಂಕ:31.05.2025, ದಿನಾಂಕ:21.06.2025 ಹಾಗೂ ದಿನಾಂಕ:04.07.2025 ರಂದು ಸರ್ಕಾರದ ಕಾರ್ಯದರ್ಶಿ (ಎಂ.ಎಸ್.ಎಂ.ಇ & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ರವರು ಕರಡು ನೂತನ ಜವಳಿ ಮತ್ತು ಸಿದ್ಧ ಉಡುವು ನೀತಿ 2025-30ನ್ನು ಪರಿಶೀಲಿಸಿದ್ದು, ಕೆಲವು ಅಂಶಗಳನ್ನು ಅಳವಡಿಸುವಂತೆ ಸೂಚಿಸಿರುತ್ತಾರೆ.
ಅದರಂತೆ, ಸದರಿ ಸಂಸ್ಥೆಯವರು ಸೂಚಿಸಲಾಗಿರುವ ಅಂಶಗಳನ್ನು ಅಳವಡಿಸಿ ಜವಳಿ ಮತ್ತು ಸಿದ್ದ ಉಡುವು ನೀತಿ 2025-30ನ್ನು ಸಲ್ಲಿಸಿರುತ್ತಾರೆ.
ಸಿದ್ದಪಡಿಸಿದ ಕರಡು ನೂತನ ಜವಳಿ ನೀತಿ 2025-30ನ್ನು ದಿನಾಂಕ: 31-07-2025, ದಿನಾಂಕ: 12-09-2025 ಹಾಗೂ ದಿನಾಂಕ: 19-01-2026 ರಂದು ಮಾನ್ಯ ಜವಳಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಂಡಿಸಲಾಗಿದ್ದು ಜವಳಿ ಕ್ಷೇತ್ರದ ಉದ್ದಿಮೆದಾರರರು, ನೇಕಾರರು ಹಾಗೂ ನೇಕಾರರ ಸಾಂದ್ರತೆಯಿರುವ ಪ್ರದೇಶದ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದುಕೊಂಡು ಕರಡು ನೂತನ ಜವಳಿ ಮತ್ತು ಸಿದ್ದ ಉಡುವು ನೀತಿ 2026-31ನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅನುμÁ್ಠನಗೊಳಿಸಲಾಗುವುದು ಎಂದು ತಿಳಿಸಿದರು.