ಲಾಲ್ ಬಾಗ್ - 219 ನೇಯ ಫಲಪುಷ್ಪ ಪ್ರದರ್ಶನಕ್ಕೆ ಪೂರಕವಾಗಿ ವಿವಿಧ ಪುಷ್ಪಾಧಾರಿತ ಕಲೆಗಳ ಪ್ರದರ್ಶನ ಸ್ಪರ್ಧೆಗಳು

varthajala
0

 ಬೆಂಗಳೂರು : ಲಾಲ್‍ಬಾಗ್ ಸಸ್ಯ ಶಾಸ್ತ್ರೀಯ ತೋಟದಲ್ಲಿ ಜನವರಿ-2026 ರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ತೇಜಸ್ವಿ-ವಿಸ್ಮಯ; ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ" ವಿಷಯಾಧಾರಿತ 219ನೇ ಫಲಪುಷ್ಪ ಪ್ರದರ್ಶನಕ್ಕೆ ಪೂರಕವಾಗಿ, ವಿವಿಧ ಪುμÁ್ಪಧಾರಿತ ಕಲೆಗಳ ಇಕೆಬಾನ ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಹಾಗೂ ಪುಷ್ಪ ರಂಗೋಲಿ ಪ್ರದರ್ಶನ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ. 

ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ಕಚೇರಿ ವೇಳೆಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತೋಟಗಾರಿಕೆ ಅಪರ ನಿರ್ದೇಶಕರ ಕಚೇರಿ (ಯೋಜನೆ), ಲಾಲ್‍ಬಾಗ್, ಬೆಂಗಳೂರು ಇವರಿಂದ ಅರ್ಜಿಗಳನ್ನು ಪಡೆದು, ಪ್ರತಿ ಅರ್ಜಿಗೆ ರೂ. 100/- ಶುಲ್ಕವನ್ನು ಪಾವತಿಸಿ 2026 ನೇ ಜನವರಿ 14 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಲಾಲ್ ಬಾಗ್ ಸಸ್ಯ ತೋಟ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)