ಜನವರಿ 24 ರಂದು ಜಿಕೆವಿಕೆ ಆವರಣದಲ್ಲಿ ರೈತ ಸಂತೆ

varthajala
0

ಬೆಂಗಳೂರು : ವರ್ಷದ ಮೊದಲ ಕೃಷಿ ಸಂತೆಯನ್ನು ಜನವರಿ 24 ರಂದು ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಜಿ.ಕೆ.ವಿ.ಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರ ಆಚರಿಸಲಾಗುತ್ತಿದೆ.ಕೃಷಿ ವಿಶ್ವವಿದ್ಯಾಲಯದ ಕೃಷಿ ಮಹಾವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು, ವಿಸ್ತರಣಾ ಶಿಕ್ಷಣ ಘಟಕಗಳು ಹಾಗೂ ಸಂಶೋಧನಾ ಕೇಂದ್ರಗಳು ಅಭಿವೃದ್ಧಿ ಪಡಿಸಿರುವ ಕೃಷಿ ಉತ್ಪನ್ನಗಳು / ಕೃಷಿ ಪರಿಕರಗಳನ್ನು ಮತ್ತು ವಿಶ್ವವಿದ್ಯಾನಿಲಯದ ವೈಜ್ಞಾನಿಕ ಸಲಹೆಗಳಿಂದ ರೈತರು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಕೃಷಿ ಉತ್ಪನ್ನ ಮತ್ತು ಪರಿಕರಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಆಯೋಜಿಸಲಾಗುವುದು.
ಈ ಬಾರಿ ಕಲ್ಲಂಗಡಿ, ಕರಬೂಜ ಹಣ್ಣು, ಅವರೆಕಾಯಿ, ಸಗಣಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳು (ಹಣತೆಗಳು, ಗೋಡೆಗೆ ನೇತಾಕುವ ಆಲಂಕಾರಿಕೆ, ಮೊಬೈಲ್ ಸ್ಟಾರ್, ಗಣೇಶ ಮೂರ್ತಿಗಳು ಇನ್ನೂ ಮುಂತಾದವು), ಗುಣಮಟ್ಟದ ರಾಜಮುಡಿ ಅಕ್ಕಿ, ತಾಜಾ ಅಣಬೆ, ಆರೋಗ್ಯಯುತ ಹಣ್ಣು ಹಾಗೂ ತರಕಾರಿಗಳ ಪಾನಿಯ ಮಿಶ್ರಣಗಳು, ಅಲಂಕಾರಿಕ ಮೀನು ಮರಿಗಳು ಇತ್ಯಾದಿ ರೈತರ ಸಂತೆಯ ವಿಶೇಷತೆಗಳಾಗಿವೆ.
ಇದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ತೋಟಗಾರಿಕೆ: ಮಾವು, ಹಲಸು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಆಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ: ಜೈವಿಕ ಕೀಟನಾಶಕಗಳು, ಕರಕುಶಲ ವಸ್ತುಗಳು: ಅಡಿಕೆ ಉತ್ಪನ್ನಗಳು, ರೇμÉ್ಮ ಕೃಷಿಯ ಉಪ ಉತ್ಪನ್ನಗಳು, ಜೇನು ಕೃಷಿ, ವಾಣಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)