ಇ.ಎಸ್.ಐ ಅಡಿಯಲ್ಲಿ ನೋಂದಾವಣೆಯಾಗಿರದ ಕಾರ್ಖಾನೆ/ ಘಟಕಗಳ ನೋಂದಣಿಗೆ ಸ್ಪ್ರೀ ಯೋಜನೆಯಡಿ ಜನವರಿ 31 ರವರೆಗೆ ವಿಸ್ತರಣೆ

varthajala
0

 ಬೆಂಗಳೂರು : ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC), ಉಪ ಪ್ರಾದೇಶಿಕ ಕಚೇರಿ, ಬೊಮ್ಮಸಂದ್ರ, ಕಛೇರಿಯು ಎಲ್ಲಾ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲು ವಿವಿಧ ಫಲಾನುಭವಿಗಳಿಂದ ಬಂದ ವಿನಂತಿಗಳ ಆಧಾರದ ಮೇಲೆ, ಕಾರ್ಮಿಕರ ರಾಜ್ಯ ವಿಮಾ ನಿಗಮ ವತಿಯಿಂದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಸ್ಪ್ರೀ ಯೋಜನೆಯನ್ನು 01 ಜನವರಿ 2026 ರಿಂದ 31 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ.ಈ ವಿಸ್ತರಣಾವಧಿಯು ಇದುವರೆಗೆ ಇಎಸ್‍ಐ ವ್ಯಾಪ್ತಿಗೆ ಒಳಪಡದ ಹಾಗೂ ನೋಂದಣಿ ಮಾಡಿಸದ ಘಟಕಗಳಿಗೆ ಸುವರ್ಣಾವಕಾಶವಾಗಿದ್ದು, ಅರ್ಹ ಉದ್ಯೋಗಿಗಳನ್ನು ಇಎಸ್‍ಐ ಕಾಯ್ದೆಯ ಅಡಿಯಲ್ಲಿ ವ್ಯಾಪ್ತಿಗೊಳಪಟ್ಟು ವೈದ್ಯಕೀಯ ಚಿಕಿತ್ಸೆ ಮತ್ತು ನಗದು ಸೌಲಭ್ಯಗಳೊಂದಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಲು ಸಹಕಾರಿಯಾಗಿದೆ.

ಈ ಒಂದು ಬಾರಿಯ ಅವಕಾಶ, ಅರ್ಹ ಉದ್ಯೋಗದಾರರು ಹಿಂದಿನ ಅವಧಿಗೆ ಸಂಬಂಧಿಸಿದಂತೆ ಯಾವುದೇ ದಂಡಾತ್ಮಕ ಕ್ರಮಗಳಿಲ್ಲದೆ (ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು) ತಮ್ಮ ಸಂಸ್ಥೆಗಳು ಮತ್ತು ಉದ್ಯೋಗಿಗಳನ್ನು ನೋಂದಣಿ ಮಾಡಬಹುದು. ಇದರಿಂದ ಉದ್ಯೋಗದಾತರು ಕಾನೂನು ಬದ್ಧ ಅನುಸರಣೆಯ ಜೊತೆಗೆ ಉದ್ಯೋಗಿಗಳ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತ ಪಡಿಸಬಹುದು.
ಉದ್ಯೋಗದಾತರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ನೋಂದಣಿ ಪ್ರಕ್ರಿಯೆಯನ್ನು ಆದಷ್ಟು ಮುಂಚಿತವಾಗಿ ಪೂರ್ಣಗೊಳಿಸುವಂತೆ ವಿನಂತಿಸಲಾಗಿದೆ.
ಕಾರ್ಮಿಕರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯು ಇದುವರೆಗೆ ವ್ಯಾಪ್ತಿಗೆ ಒಳಪಡದ ಉದ್ಯೋಗದಾತರು ಹಾಗೂ ಅರ್ಹ ಉದ್ಯೋಗಿಗಳಿಗೆ ಈ ವಿಸ್ತರಿತ ಅವಧಿಯ ಪ್ರಯೋಜನ ಪಡೆದುಕೊಳ್ಳುವಂತೆ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯತ್ತ ಕೈಜೋಡಿಸುವಂತೆ ವಿನಂತಿಸಿದೆ. ಆನ್‍ಲೈನ್ ನೋಂದಣಿಗಾಗಿ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧಿಕಾರಿಗಳು ಮುಖ್ಯ ಕಛೇರಿಯ ನಿರ್ದೇಶನದಂತೆ ಒದಗಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರ ರಾಜ್ಯ ವಿಮಾ ನಿಗಮ ಉಪ ಪ್ರಾದೇಶಿಕ ಕಚೇರಿ, ಬೊಮ್ಮಸಂದ್ರ ಹಾಗೂ ಇ-ಮೇಲ್: sro-bommasandra@esic.gov.in ಅಥವಾ ದೂರವಾಣಿ: 080-26786393 / 080-26786391 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)