ಮಲ್ಲೇಶ್ವರ ನಿವಾಸಿ ಶ್ರೀಯುತ ಚಿಂತಲಪಲ್ಲಿ ಅಶ್ವತ್ಥ ಸಂಗೀತಗಾರರು

varthajala
0

ಇದು ಬಹಳ ಹಿಂದಿನ ಬರಹ

ಚಿಂತಲಪಲ್ಲಿ ಪರಂಪರೆ

ಚಿಂತಲಪಲ್ಲಿ ಎಂದರೆ ಹುಣಸೆಹಣ್ಣು ಹಳ್ಳಿ ಅಥವಾ ಚಿಂಚ ಪಂಡು ಎಂದರೆ ಹುಣಸೆಹಣ್ಣು.

ಈ ಊರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ.ಇದು ಸಂಗೀತ ಪರಂಪರೆಗೆ ಪ್ರಸಿದ್ಧ.ಹಿಂದೆ ಇದು ಆದಿಲಶಾಹಿ ಆಳ್ವಿಕೆಯಲ್ಲಿತ್ತು.ಆಗ ಅಲ್ಲಿಗೆ ಸೇನಾಪತಿ ರಣದುಲ್ಲಾಖಾನ್ ಬಂದಿದ್ದ.ಅವನು ಚಿಂತಲಪಲ್ಲಿ ಪರಂಪರೆಯ ಪೂರ್ವಜರಾದ ತಿಮ್ಮಣ್ಣನವರಿಗೆ ಕರೆದು ಅಲ್ಲಿನ ಆಂಜನೇಯ ದೇವಾಲಯದ ಕಂಬಕ್ಕೆ ತಂತಿ ಕಟ್ಟಿ ವೀನಾ ನುಡಿಸು ಎಂದ.ತಿಮ್ಮಣ್ಣನವರು ಆಗ ಸುಲಭವಾಗಿ ವೀಣೆ ನುಡಿಸಿದಾಗ ಅವರಿಗೆ ಸಂಗೀತಗಾರ ಎಂದು ಬಿರುದು ಕೊಟ್ಟ.ಇದು ಅಲ್ಲಿನ ಗ್ರಾಮದ ಇತಿಹಾಸ.

ಅವರನ್ನು ತಂಜಾವೂರಿನ ಅನ್ನೈಪಿಲ್ಲೈ ರಾಯರ ಬಳಿ ಸಂಗೀತಾಭ್ಯಾಸ ಮಾಡಲು ಕಳಿಸಿದರು.ಅಲ್ಲಿ 5-6 ವರುಷ ಅಭ್ಯಾಸ ನಡೆಸಿ ತಮಿಳುನಾಡು ಆಕಾಶವಾಣಿಯಲ್ಲಿ ಕಚೇರಿ ನೀಡುತ್ತಿದ್ದರು.ನಂತರ ಕೇರಳದ ಪಲನಿಯಲ್ಲಿ ಒಂದು ಕಾರ್ಯಕ್ರಮ ನೀಡಿದರು. ಆಗ ಅವರ ಅದೃಷ್ಟ ಖುಲಾಯಿಸಿತು.

ಹಾಗು ಚಿಂಥಲಪಲ್ಲಿ ವೆಂಕಟರಾಯರು ತ್ಯಾಗರಾಜ ರ ಶಿಷ್ಯ.ಅವರ ಮಗ ಸಂಗೀತ ಚೂಡಾಮಣಿ ರಾಮಚಂದ್ರರಾಯರು.ಚಿಂತಲಪಲ್ಲಿ ವೆಂಕಟಾಚಾಲಯ್ಯ ಬೆಂಗಳೂರಿನಲ್ಲಿದ್ದರು.ಅವರು ಮಗನನ್ನುಚೆನ್ನೈ ನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು.

ಅವರನ್ನು ತಂಜಾವೂರಿನ ಅನ್ನೈಪಿಲ್ಲೈ ರಾಯರ ಬಳಿ ಸಂಗೀತಾಭ್ಯಾಸ ಮಾಡಲು ಕಳಿಸಿದರು.ಅಲ್ಲಿ 5-6 ವರುಷ ಅಭ್ಯಾಸ ನಡೆಸಿ ತಮಿಳುನಾಡು ಆಕಾಶವಾಣಿಯಲ್ಲಿ ಕಚೇರಿ ನೀಡುತ್ತಿದ್ದರು.ನಂತರ ಕೇರಳದ ಪಲನಿಯಲ್ಲಿ ಒಂದು ಕಾರ್ಯಕ್ರಮ ನೀಡಿದರು. ಆಗ ಅವರ ಅದೃಷ್ಟ ಖುಲಾಯಿಸಿತು.

 ರಾಮಚಂದ್ರರಾಯರು ಆಕಾಶವಾಣಿಯ ಏ ಗ್ರೇಡ್ ಕಲಾವಿದರಾಗಿದ್ದರು ಹಾಗು ತಿರುಚಿನಾಪಲ್ಲಿ, ಹೈದರಾಬಾದ್,ವಿಜಯವಾಡ, ದೆಹಲಿ ಮುಂತಾದ ಕಡೆ ಕಚೇರಿ ನೀಡಿದರು.ಗ್ರಾಮಫೋನ್ ಡಿಸ್ಕ್ ಸಹಿತ ಮಾಡಿದ್ದರು.ಸ್ವಾತಂತ್ರ್ಯ ನಂತರ ಪ್ರತಿ ದಿನ 3-4 ಕಾರ್ಯಕ್ರಮ ಇರುತ್ತಿತ್ತು. ಡಾ ರಾಜ್ ಇವರನ್ನು ಗುರುಗಳು ಎನ್ನುತ್ತಿದ್ದರು ಬಹಳ ಸಲ ಇವರ ಮನೆಗೆ ಬಂದಿದ್ದಾರೆ.ಸೋಸಲೆ ಮಠಾ ಧೀಶರು ಇವರಿಗೆ ಸನ್ಗೀತ ಚೂಡಾಮಣಿ ಬಿರುದು ನೀಡಿ ಬಂಗಾರದ ಪದಕ ನೀಡಿ ಸನ್ಮಾನ ಮಾಡಿದ್ದರು.

 ನಂತರ ದಿ ಹಿಂದೂ ನ್ಯೂಸಪೇಪರ್ನಲ್ಲಿ ಆ ಕಾರ್ಯಕ್ರಮದ ಕುರಿತು ಒಂದು ವರದಿ ಬಂತು.ಕಸ್ಥೂರಿ ರಂಗಾಚಾರ್ಯರು ಅದರ ಸಂಪಾದಕರಾಗಿದ್ದರು. ಆ ಪತ್ರಿಕೆ ಓದಿದ ಮೈಸುರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಮೈಸೂರು ಅರಮನೆಯಲ್ಲಿ ಒಂದು ಕಚೇರಿ ಏರ್ಪಡಿಸಿದರು.ನಂತರ ರಾಮಚಂದ್ರರಾಯರು ತಮ್ಮ ತಂದೆ ಜೊತೆ ಮತ್ತೊಂದು ಸಂಗೀತ ಕಚೇರಿ ನೀಡಿದರು.ತಂದೆಯವರದ್ದುಉಚ್ಚ ಸ್ವರ.ನಂತರ ಅವರಿಗೆ ಸಂಗೀತ ಕಲಾರತ್ನ ಬಿರುದು ಕೊಟ್ಟು ಬಂಗಾರ ದ ಬಳೆ ಹಾಗು ಚಾಮುಂಡೇಶ್ವರಿ ಪದಕ ಕೊಟ್ಟರು.ತದ ನಂತರ ಪ್ರತಿ ದಸರಾ ಹಬ್ಬದಲ್ಲಿ ಭಾಗವಹಿಸಲು ರಾಮಚಂದ್ರರಾಯರಿಗೆ ಅವಕಾಶ ನೀಡಲಾಯಿತು.ಮುಂದೆ ಜಯಚಾಮರಾಜೇಂದ್ರ ಒಡೆಯರು ರಾಜ್ಯಪಾಲರಾಗುವವರೆಗೆ ಪ್ರತಿ ತಿಂಗಳು ರಾಮಚಂದ್ರ ಹಾಗು ವೆಂಕಟರಾಯರಿಗೆ ಪ್ರತಿ ತಿಂಗಳ ಮಾಸಾಶನ ನೀಡುತ್ತಿದ್ದರು.

 ಇವರ ಮಗ ಆರ್ ಅಶ್ವತ್ಥನಾರಾಯಣ ತಾಯಿ ಲಕ್ಷ್ಮೀದೇವಮ್ಮ.ಇವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಸೋದರಮಾವನ ಮಗಳು.ಇವರು ಬೆಂಗಳೂರು ಮಲ್ಲೇಶ್ವರಂ ನಿವಾಸಿ.

 ಇವರು ಮುಂದೆ ಸ್ವಂತ ಮನೆಯಲ್ಲಿ 1985ರಲ್ಲಿ ನಿಧನರಾದರು.

ಹಾಗು ಚಿಂಥಲಪಲ್ಲಿ ವೆಂಕಟರಾಯರು ತ್ಯಾಗರಾಜ ರ ಶಿಷ್ಯ.ಅವರ ಮಗ ಸಂಗೀತ ಚೂಡಾಮಣಿ ರಾಮಚಂದ್ರರಾಯರು.ಚಿಂತಲಪಲ್ಲಿ ವೆಂಕಟಾಚಾಲಯ್ಯ ಬೆಂಗಳೂರಿನಲ್ಲಿದ್ದರು.ಅವರು ಚೆನ್ನೈ ನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು.

ಗಾಯನ ಸಮಾಜದ 9 ನೀ ಸಮ್ಮೇಳನದ ಅಧ್ಯಕ್ಷ ಆಗ ಬಾಲಮುರಳಿ ಕೃಷ್ಣ ಆಗಿದ್ದರು ಅವರು ರಾಮಚಂದ್ರರಾಯರು ಕರ್ನಾಟಕದ ಹೆಮ್ಮೆಯ ಕಲಾವಿದ ಎಂದರು.

ಈಗ ಅಶ್ವತರು ಇಲ್ಲ ಆದರೆ ಬಹುಶಃ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ.

ಬೇಕಾದಷ್ಟು ಕಡೆ ಸನ್ಮಾನ ಗೌರವ ಇವರಿಗೆ ಲಭಿಸಿದೆ.ಪರಂಪರೆ ನಿಧಿ ಎಂಬ ಗೌರವ ಲಭಿಸಿದೆ.ಇವರು ಪುರ್ವಿಕರ ಸಂಗೀತ ವೃತ್ತಿ ಮುಂದುವರೆಸಿ ತಂದೆಯವರ ಹೆಸರಲ್ಲಿ ಸಂಗೀತ ವಿದ್ಯಾಲಯ ತೆರೆದಿದ್ದರು.ಇವರ ಸಂದೇಶಗಳು.ಪರಿಶ್ರಮ, ಸಂಸ್ಕಾರ,ದೈವಾನುಗ್ರಹ ಇದ್ದಾರೆ ಸಫಲತೆ ಸಾಧ್ಯ.ಗುರುವಿನಲ್ಲಿ ನಂಬಿಕೆ ಭಕ್ತಿ ಇರಬೇಕು.ಸಂಗೀತದಿಂದ ಮನಶ್ಯಾಂತಿ ಸಾಧ್ಯ.ಅನೇಕ ಕಾಯಿಲೆ ವಾಸಿ ಮಾಡಬಹುದು.2005ರಲಿ ಒಂದು ಟ್ರಸ್ಟ್ ಮಾಡಿದ್ದರು.ದತ್ತಾತ್ರೇಯ ಮಂದಿರದಿಂದ 12ಕ್ರಾಸ್ವರಗೆ ಸುಧೀಂದ್ರನಗರ ರಸ್ತೆಗೆ ಚಿಂತಲಪಲ್ಲಿ ರಾಮಚಂದ್ರರಾಯರ ಹೆಸರನ್ನು ಇಟ್ಟಿದ್ದಾರೆ.

ಇವರು ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ 8*1*1943 ರಲಿ ಜನಿಸಿದರು.ಕೋಲಾರದ ತಿಮ್ಮಪ್ಪಯ್ಯನವರ ಬಳಿ ಸಂಗೀತಾಭ್ಯಾಸ ಮಾಡಿದರು.ಅಶ್ವತರು ಓದುವಾಗಲೇ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದರು.ಮಲ್ಲೇಶ್ವರಂ MES ಕಾಲೇಜಿನಲ್ಲಿ ಬಿಕಾಂ ಓದಿದರು.ಕೃಷಿ ಇಲಾಖೆಯಲ್ಲಿ ಸಹಾಯಕ ಪತ್ರಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.ಕೋಲಾರದ ರಾಘವೇಂದ್ರ ಆರಾಧನೆಯಲ್ಲಿ ಹಾಡುತ್ತಿದ್ದರು.ಆಗಿನ ಪ್ರಧಾನಿಗಳೇ ಇವರನ್ನು ಪ್ರಶಂಸೆ ಮಾಡುತ್ತಿದ್ದರು.ಕಾರ್ಯಕ್ರಮ ಒಂದರಲ್ಲಿ ದೇವೇಗೌಡರ ಮೇಲೆ ಸ್ವಂತ ರಚನೆ ಮಾಡಿ ಸ್ವಾಗತ ಗೀತೆ ಹಾಡಿದರು.

ರಾಧಿಕಾ ಜಿ.ಎನ್

ಟೀವೀ ಹೋಸ್ಟ್ 

brahmies@gmail.com

Post a Comment

0Comments

Post a Comment (0)