ಸಾಮೂಹಿಕ ವಿವಾಹಕ್ಕೆ ಸೇವಾ ಸ್ಪೂರ್ತಿ: 35 ಜೋಡಿ ಬಾಸಿಂಗ ದಾನ ಮಾಡಿದ ಸೋಮಶೇಖರ್ ಹೋರಕೇರಿ

varthajala
0

 ಚಿಕ್ಕೋಡಿಯ ಶ್ರೀ ಸಾಯಿ ಮಂದಿರದಲ್ಲಿ ದಿನಾಂಕ 30-01-2026 ರಂದು ನಡೆಯಲಿರುವ 19ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಉಚಿತವಾಗಿ ಬಾಸಿಂಗ ವಿತರಿಸುತ್ತಿರುವ ದಾನಿಗಳಾದ ಶ್ರೀ ಸೋಮಶೇಖರ್ ಚಂದ್ರಪ್ಪ ಹೋರಕೇರಿ ಅವರು ಈ ವರ್ಷವೂ 35 ಜೋಡಿ ಬಾಸಿಂಗಗಳನ್ನು ಕೊಡುಗೆಯಾಗಿ ನೀಡಿದರು. 

ಈ ಬಾಸಿಂಗಗಳನ್ನು ದಿನಾಂಕ 24-01-2026 ರಂದು ಯಮಕನಮರಡಿಯ ವಿದ್ಯಾವರ್ಧಕ ಸಂಘದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖಂಡರಾದ ಶ್ರೀ ರವೀಂದ್ರ ಹಂಜಿ ಅವರ ಅಮೃತ ಹಸ್ತದಿಂದ ಪೂಜೆ ನೆರವೇರಿಸಿ ಚಿಕ್ಕೋಡಿಯ ಶ್ರೀ ಸಾಯಿ ಮಂದಿರಕ್ಕೆ ಕಳುಹಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ-ಶಿಕ್ಷಕಿಯರು, ಬಜರಂಗದಳ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದು ದಾನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Post a Comment

0Comments

Post a Comment (0)