ಗ್ರಾಹಕ ಸ್ನೇಹಿ ನಿಯೋ ಫ್ರೆಶ್ 5ನೇ ಶಾಖೆ ವಿದ್ಯಾರಣ್ಯಪುರದಲ್ಲಿ ಉದ್ಘಾಟನೆ

varthajala
0

 ಬೆಂಗಳೂರು: ಗ್ರಾಹಕರಿಗೆ ಗುಣಮಟ್ಟದ ದಿನಸಿ ವಸ್ತುಗಳು, ತಾಜಾ ಹಣ್ಣು–ತರಕಾರಿಗಳು ಹಾಗೂ ದಿನಬಳಕೆ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಸ್ಥಾಪಿತವಾದ ಸ್ಮಾರ್ಟ್ ಕ್ವಿಕ್ ಇ–ಕಾಮರ್ಸ್ ಸಂಸ್ಥೆಯ ಗ್ರಾಹಕ ಸ್ನೇಹಿ ಬೃಹತ್ ಮಳಿಗೆ ನಿಯೋ ಫ್ರೆಶ್ 5ನೇ ಶಾಖೆ ವಿದ್ಯಾರಣ್ಯಪುರದಲ್ಲಿ ಶುಭಾರಂಭಗೊಂಡಿತು.

ಮಳಿಗೆಯ ಉದ್ಘಾಟನೆಯನ್ನು ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಮಾರ್ಟ್ ಕ್ವಿಕ್ ಸಂಸ್ಥೆಯ ಸಂಸ್ಥಾಪಕರಾದ ದೀಪುಗೌಡ, ಜೊತೆಗೆ ಸುಧೀಪ್ ಗೌಡ, ಶಿವು ಗೌಡ, ಉದಯ ಶೆಟ್ಟಿ, ಕಲ್ಯಾಣ್ ಪಾಟೀಲ್, ಸೇತುಕುಮಾರ್ ಮತ್ತು ನವೀನ್ ಚಂದ್ರಶೇಖರ್, ಸುನೀಲಕುಮಾರ್ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿರವರು, “ರೈತರು ಹಾಗೂ ಗುಡಿ ಕೈಗಾರಿಕೆಗಳಲ್ಲಿ ನಿರತರಾದ ಕಾರ್ಮಿಕರ ಜೀವನ ಹಸನಾಗಬೇಕು, ಅವರ ಬದುಕಿನಲ್ಲಿ ಬೆಳಕು ಮೂಡಬೇಕು ಎಂಬ ಧ್ಯೇಯದೊಂದಿಗೆ ನಿಯೋ ಫ್ರೆಶ್ ರೂಪಿಸಿದ ಕಾರ್ಯಯೋಜನೆ ಶ್ಲಾಘನೀಯವಾಗಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಸಮಂಜಸ ದರದಲ್ಲಿ ಒದಗಿಸುವುದು ದೇವರ ಸೇವೆಗೆ ಸಮಾನ” ಎಂದು ಹೇಳಿದರು. ನಿಯೋ ಫ್ರೆಶ್ ಮಳಿಗೆಗಳು ಗ್ರಾಮೀಣ ಭಾಗದ ಯುವಕ–ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿವೆ ಎಂಬುದನ್ನೂ ಅವರು ಮೆಚ್ಚುಗೆಯೊಂದಿಗೆ ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕರಾದ ದೀಪುಗೌಡ ಅವರು, “ಆತ್ಮನಿರ್ಭರ ಭಾರತ ಕನಸನ್ನು ನನಸು ಮಾಡುವ ಉದ್ದೇಶದಿಂದ ನಮ್ಮ ಸಂಸ್ಥೆ ಕಟಿಬದ್ಧವಾಗಿ ಶ್ರಮಿಸುತ್ತಿದೆ.
ದಿನಬಳಕೆ ವಸ್ತುಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಮೂಲಕ ಮಧ್ಯವರ್ತಿಗಳಿಲ್ಲದ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ” ಎಂದರು. ವಿದ್ಯಾರಣ್ಯಪುರದಲ್ಲಿ ಆರಂಭವಾದ ಈ 5ನೇ ಶಾಖೆಯೊಂದಿಗೆ, ಬೆಂಗಳೂರು ನಗರ ಮಾತ್ರವಲ್ಲದೆ ರಾಜ್ಯದ ಹಲವು ನಗರಗಳಿಗೆ ನಿಯೋ ಫ್ರೆಶ್ ವಿಸ್ತರಿಸುವ ಗುರಿ ಹೊಂದಿದೆ. ಮಳಿಗೆಯ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಮತ್ತು ಆಕರ್ಷಕ ಆಫರ್‌ಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

Post a Comment

0Comments

Post a Comment (0)