74ನೇ ಸಾಂಸ್ಕøತಿಕ ಕಲಾ ಪ್ರತಿಭೋತ್ಸವ ಬುದ್ಧ-ಬಸವ-ಅಂಬೇಡ್ಕರ್ ರಾಷ್ಟ್ರೀಯ ವಿಚಾರಸಂಕಿರಣ

varthajala
0

 ಭೂ ಮಂಡಲದ ಮೊದಲ ಸಮಾನತೆಯ ಸಂತ, ಭರತ ಖಂಡದ ಮಹಾನ್ ಮಾನವತಾವಾದಿ ಬುದ್ಧ. ಈತ ಉತ್ತರ ಭಾರತದಲ್ಲಿ ಜನಿಸಿ ಭಾರತ, ಏಷ್ಯಾ, ಯುರೋಪ್ ಹಾಗೂ ಅನೇಕ ದೇಶಗಳಲ್ಲಿ ತನ್ನ ಧರ್ಮ ಬೆಳೆಯಲು ಕಾರಣವಾದರೆ, ದಕ್ಷಿಣ ಭಾರತದಲ್ಲಿ ಶ್ರೀ ಬಸವೇಶ್ವರು ಮುಂದುವರೆದು, ಜ್ಞಾನ, ಕಾಯಕ, ಅನ್ನದಾಸೋಹ, ಸಾಹಿತ್ಯದ ಮೂಲಕ ಸಮಾನತೆಯನ್ನು ಮುಂದುವರೆಸಿದ ಇನ್ನೊಬ್ಬ ಸಂತ. ದೇಶದ ಅಸಮಾನತೆ, ಅಸ್ಪ್ರಶ್ಯತೆ ಹಾಗೂ ದೌರ್ಜನ್ಯಗಳ ನಡುವೆ ಜನಿಸಿ, ಭಾರತದ ಜನಮಾನಸದ ದಿಕ್ಕನ್ನೆ ಬದಲಿಸಿ, ದೇಶದ ಸಂವಿಧಾನದ ಮೂಲಕ, ಕಾನೂನು ಹಾಗೂ ಮೂಲಭೂತ ಹಕ್ಕನ್ನೊದಗಿಸಿದವರು ಡಾ. ಬಿ.ಆರ್. ಅಂಬೇಡ್ಕರ್. ಬುದ್ಧ, ಬಸವ, ಅಂಬೇಡ್ಕರ್ ತ್ರಿಮೂರ್ತಿಗಳ ಮೂಲ ಉದ್ದೇಶ, ಮನುಷ್ಯತ್ವ ಅಥವಾ ಮಾನವತಾವಾದ. ಜನ ಜೀವಗಳ ಮೌಡ್ಯ ಹೋಗಲಾಡಿಸಿ, ಜ್ಞಾನದ ಸಂಪತ್ತನ್ನು ಬಗೆದು, ಸೋಸಿದವರೇ ಅಂಬೇಡ್ಕರ್. ವಿಶ್ವಮಟ್ಟದ ಜ್ಞಾನವನ್ನು ಅರೆದು ಕುಡಿದು, ಭಾರತಕ್ಕೆ ನೀಡಿದವರು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ಜನರ ಕೊಡುಗೆ, ಹೋರಾಟಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ದೃಷ್ಟಿಯಲ್ಲಿ, ಬುದ್ಧ, ಬಸವ, ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 11-01-2026 ಭಾನುವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. 

ಬುದ್ಧನ ಕುರಿತು - ಡಾ. ಅಶೋಕ ನರೋಡೆ, ಸಾಹಿತಿಗಳು, ಭಾಷಾ ಚಿಂತಕರು ಬಾಗಲಕೋಟೆ ಜಿಲ್ಲೆ. ಬಸವಣ್ಣನ ಕುರಿತು - ಡಾ. ಚಿಕ್ಕಹೆಜ್ಜಾಜಿ ಮಹದೇವ, ಶಿಕ್ಷಣ ತಜ್ಞರು, ಚಿತ್ರನಟರು ಬೆಂಗಳೂರು. ಅಂಬೇಡ್ಕರ್ ಕುರಿತು - ಶ್ರೀ ವೈ.ಬಿ.ಎಚ್. ಜಯದೇವ, ಸಾಹಿತಿಗಳು, ಕನ್ನಡಪರ ಚಿಂತಕರು ಬೆಂಗಳೂರು. ಈ ಮೂರು ಜನ ವಿಷಯ ಮಂಡಿಸಿ, ಮಾತನಾಡಲಿದ್ದಾರೆ. 

ಸಾಂಸ್ಕøತಿಕ ಕಾರ್ಯಕ್ರಮ : ಬೆಳಿಗ್ಗೆ 10.30ಕ್ಕೆ 74ನೇ ಸಾಂಸ್ಕøತಿಕ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಶಿಕ್ಷಣ ತಜ್ಞೆ ಶ್ರೀಮತಿ ರಾಜೇಶ್ವರಿ ಚಲುವಪ್ಪರವರು ಉದ್ಘಾಟಿಸಲಿದ್ದು, ವ್ಯಂಗ್ಯಚಿತ್ರಕಲಾ ಪ್ರದರ್ಶನವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಶ್ರೀ ದೇವರಾಜ್ ಮತ್ತು ಕರಕುಶಲ ಪ್ರದರ್ಶನವನ್ನು ಸಾಯಿ ಆರ್ಟ್ ಇಂಟರ್‍ನ್ಯಾಷನಲ್ ಅಧ್ಯಕ್ಷ ಶ್ರೀ ಸಾಯಿ ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಚಿಪ್ಪಲಕಟ್ಟಿ ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು, ಸಮ್ಮೇಳನಾಧ್ಯಕ್ಷ ಡಾ. ಎಂ. ಲಕ್ಷ್ಮೀನಾರಾಯಣ ಮತ್ತು ಕೊಪ್ಪಳ ಸಮಾಜಸೇವಕ ಶ್ರೀ ಮುನೀರ್ ಅಹ್ಮದ್ ಸಿದ್ಧಕಿ, ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿರುತ್ತಾರೆ. 
ಕೊಪ್ಪಳದ ಬದರಿ ನಾರಾಯಣ ಪುರೋಹಿತ್ ವ್ಯಂಗ್ಯಚಿತ್ರ ಪ್ರದರ್ಶನ ಮತ್ತು ಬೆಂಗಳೂರಿನ ರಜನಿ ಎಸ್. ಮತ್ತು ತೇಜಸ್ವಿ ಕೆ. ಸುರ್ವೆಯವರು ಚಿತ್ರಕಲೆ ಮತ್ತು ಕರಕುಶಲ ಪ್ರದರ್ಶನ ಮಾಡಲಿದ್ದಾರೆ. ಸಾಯಿ ಆರ್ಟ್ ಇಂಟರ್‍ನ್ಯಾಷನಲ್ ವಿದ್ಯಾರ್ಥಿಗಳಿಂದ ಅಂತರರಾಷ್ಟ್ರೀಯ ನೃತ್ಯಗುರುಗಳಾದ ಡಾ. ಸುಪರ್ಣಾ ವೆಂಕಟೇಶ ಮತ್ತು ಶ್ವೇತಾ ವೆಂಕಟೇಶ್‍ರವರ ಮಾರ್ಗದರ್ಶನದಲ್ಲಿ “ಸುರ್ವೆ ನೃತ್ಯೋಲ್ಲಾಸ” ನೃತ್ಯ ಮಾಡಲಿದ್ದಾರೆ. ಬೆಂಗಳೂರಿನ ನೃತ್ಯ ಕಲಾವಿದರಾದ ನಕುಲ್ಯ ಎಂ. ಕಶ್ಯಪ್, ತಜೋಮಯಿ ಗದ್ದಿ, ತನುಶ್ರೀ ಎನ್. ಮತ್ತು ಶಾಲಿನಿ ಸಿ. ತಂಡ ಮತ್ತು ಮಾಲೂರಿನ ಸರಸ್ವತಿ ಕಲಾ ಅಕಾಡೆಮಿಯ ಪ್ರೇಮಾ ಜಿ. ನಾಯಕ್ ನೇತೃತ್ವದಲ್ಲಿ ಭರತನಾಟ್ಯ ಮತ್ತು ಸಮೂಹ ನೃತ್ಯಗಳನ್ನು ಮಾಡಲಿದ್ದಾರೆ.
ಗೀಟಾರ್ ವಾದನವನ್ನು ಬೆಂಗಳೂರಿನ ಎ. ಅರುಣ್ ಪ್ರಕಾಶ್ ಮತ್ತು ಜನರಲ್ ನಾಲೇಜ್ ಮತ್ತು ರಂಗಗೀತೆಯನ್ನು ರಾಜಭಕ್ತಿ ಪಿಂಜಾರ ಮತ್ತು ರಹಿಮಾನಸಾಬ್, ಭಜನಾ ಪದಗಳನ್ನು ಯಮನಪ್ಪ ಶಿ. ಮಾದ ಮತ್ತು ಕರೋಕೆ ಚಲನಚಿತ್ರ ಗೀತೆಗಳನ್ನು ಈ ವಸಂತ ಕುಮಾರಿ ನಡೆಸಿಕೊಡಲಿದ್ದಾರೆ.

ಕವಿಗೋಷ್ಠಿ : ಮದ್ಯಾಹ್ನ 2.30ಕ್ಕೆ ಕೊಪ್ಪಳ ಸಾಹಿತಿ ಜಿ.ಎಸ್. ಗೋನಾಳ್ ಉದ್ಘಾಟಿಸಲಿದ್ದು, ದೊಡ್ಡಬಳ್ಳಾಪುರ ಸಾಹಿತಿ ಮ.ಚಿ. ಕೃಷ್ಣರವರು ಆಶಯ ನುಡಿ ನೀಡಲಿದ್ದಾರೆ. ಕವಿಗೋಷ್ಠಿಯಲ್ಲಿ ರಮೇಶ ಸುರ್ವೆ, ಚಿಕ್ಕಮಗಳೂರಿನ ಡಿ. ನಳಿನಾ, ಬೆಂಗಳೂರಿನ ಜಯರಾಮ ರೈ ಕುಂಜಾಡಿ, ಗೋರೂರು ಪಂಕಜಾ, ರಾಜೇಶ್ವರಿ ಚಲುವಪ್ಪ, ಸುಮಲತಾ ಬಿ.ಕೆ., ಬುಜ್ಜಪ್ಪ ಸಾಸಲಮರಿ, ಕುಪ್ಪಮ್‍ನ ಡಾ. ಎಂ.ಎಸ್. ದುರ್ಗಾಪ್ರವೀಣ್, ಹೂವಿನ ಹಡಗಲಿಯ ತುಳಚಾ ನಾಯ್ಕ, ನಿಡಗುಂದಿಯ ಕಲ್ಮೇಶ ದು. ಗುಡ್ಡಪ್ಪನವರ, ಅಳವಂಡಿಯ ಈರಮ್ಮ ಕುಂದಗೋಳ, ಇಟಗಿಯ ಜಯಶ್ರೀ ಗುಳಗಣ್ಣವರ ಮತ್ತು ಮೈಸೂರಿನ ಕಿರಣ್ ಎಸ್. ಭಾಗವಹಿಸಲಿದ್ದಾರೆ.

ಬುದ್ಧ-ಬಸವ-ಅಂಬೇಡ್ಕರ್ ವಿಚಾರ ಸಂಕಿರಣ : ಸಂಜೆ 6ಕ್ಕೆ ವಿಚಾರ ಸಂಕಿರಣವನ್ನು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ವಿ.ಎಸ್. ಉಗ್ರಪ್ಪನವರು ಉದ್ಘಾಟಿಸಲಿದ್ದು, ದಿವ್ಯಸಾನಿಧ್ಯವನ್ನು ಉಡುಪಿಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ವಹಿಸಿದ್ದಾರೆ. ಆಶೀರ್ವಚನವನ್ನು ಹಿರೇಮಠದ ಡಾ. ಕಲ್ಮೇಶ್ವರ ಮಹಾಸ್ವಾಮಿಗಳು ನೀಡಲಿದ್ದಾರೆ. ವಿಚಾರ ಸಂಕಿರಣ ಅಧ್ಯಕ್ಷತೆಯನ್ನು ಗುಲಬುರ್ಗಾ ವಿಶ್ವವಿದ್ಯಾಲಯದ ದೀನ್ ಕಲಾನಿಕಾಯದ ಪ್ರೊ. ಎಚ್.ಟಿ. ಪೋತೆ ವಹಿಸಿದ್ದಾರೆ. ಸಮ್ಮೇಳನಾಧ್ಯ ಡಾ. ಎಂ. ಲಕ್ಷ್ಮೀನಾರಾಯಣ ಮತ್ತು ಪ್ರಶಸ್ತಿ ಪ್ರದಾನವನ್ನು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ್ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರಾದ ಶ್ರೀಮತಿ ಮೀನಾ ಉಪಸ್ಥಿತರಿರುತ್ತಾರೆ.ಕೊಪ್ಪಳದ ಸಹಕಾರಿ ಧುರಿಣ ನೀಲಕಂಠಯ್ಯ ಜಿ. ಹಿರೇಮಠ ಮತ್ತು ನಾಡಿನ 25 ಸಾಧಕರಿಗೆ ಅಕಾಡೆಮಿಯ 33ನೇ ವಾರ್ಷಿಕೋತ್ಸವದ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದೇವೆ ಎಂದು ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)