ಚಿಕ್ಕನಾಯಕನಹಳ್ಳಿ ಪಟ್ಟಣ ಒಳ ಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ - ಸಚಿವ ಬಿ.ಎಸ್. ಸುರೇಶ್

varthajala
0

 ಬೆಂಗಳೂರು : ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಒಳಚರಂಡಿ ಯೋಜನೆಯ ರೂ 5542.00 ಲಕ್ಷಗಳ ಅಂದಾಜಿಗೆ ದಿನಾಂಕ: 18-10-2019 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಸದರಿ ಕಾಮಗಾರಿಯನ್ನು ಮೆ. ಕೆ. ಗೌಡ ಮತ್ತು ಕಂಪನಿ ಬೆಂಗಳೂರು ಜಂಟಿ ಉದ್ಯಮ ಮೆ. ಶ್ರೀ ಶುಭ ಸೇಲ್ಸ್ ಇಂಜಿನಿಯರ್ ಅಂಡ್ ಕಂಟ್ರಾಕ್ಟರ್ಸ್  ಅವರಿಗೆ ದಿನಾಂಕ: 13-07-2022 ರಂದು ರೂ 4182.00 ಲಕ್ಷಗಳಿಗೆ ವಹಿಸಲಾಗಿದೆ. ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು 24 ತಿಂಗಳುಗಳ ಕಾಲಾವಧಿಯನ್ನು ನೀಡಲಾಗಿರುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಅವರು ತಿಳಿಸಿದರು. 

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ರಮೇಶ್‍ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಿಕ್ಕನಾಯಕನಹಳ್ಳಿ ಪಟ್ಟಣದ ಒಳಚರಂಡಿ ಯೋಜನೆಯಡಿ 4 ಸಂಖ್ಯೆ ಮಲಿನ ನೀರು ಸಂಸ್ಕರಣಾ ಘಟಕವನ್ನು ಮತ್ತು 3 ಸಂಖ್ಯೆ ವೆಟ್ ವೆಲ್ ಘಟಕವನ್ನು ನಿರ್ಮಿಸಲು ಅವಕಶ ಕಲ್ಪಿಸಲಾಗಿದೆ. ಮಲಿನ ನೀರು ಸಂಸ್ಕರಣಾ ಘಟಕಗಳು ಮತ್ತು ವೆಟ್‍ವೆಲ್ ಘಟಕಗಳನ್ನು ನಿರ್ಮಿಸಲು ಅವಶ್ಯವಿರುವ ಖಾಸಗಿ ಜಮೀನುಗಳನ್ನು ಸ್ಥಳೀಯ ಸಂಸ್ಥೆಯ ವತಿಯಿಂದ ಭೂಸ್ವಾಧೀನಪಡಿಸಿಕೊಂಡು ಮಂಡಳಿಗೆ ಹಸ್ತಾಂತರಿಸುವಲ್ಲಿ ವಿಳಂಬವಾಗಿದ್ದು, ವಲಯ 4ರಲ್ಲಿ ಅಗಸರಹೊಳೆ ಬಳಿ 2.00 ದಶಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಹಾಗೂ 8.00 ಮೀ ವ್ಯಾಸದ ವೆಟ್‍ವೆಲ್ ಘಟಕ ನಿರ್ಮಿಸಲು ಚಿಕ್ಕನಾಯಕನಹಳ್ಳಿ ಗ್ರಾಮದ ಸರ್ವೆ ನಂ. 7/1 ರಲ್ಲಿ  15 ಗುಂಟೆ, ಸರ್ವೆ ನಂ. 7/2 ರಲ್ಲಿ 27 ಗುಂಟೆ ಸರ್ವೆ ನಂ. 8/4 ರಲ್ಲಿ 16 ಗುಂಟೆ ಸರ್ವೆ ನಂ. 83/2 ರಲ್ಲಿ 6 ಗುಂಟೆ ಜಮೀನನ್ನು ಪರಸ್ಪರÀ ಒಪ್ಪಂದದ ಆಧಾರದಲ್ಲಿ ಖಾಸಗಿ ಜಮೀನಿನ ಭೂ ಸ್ವಾಧೀನ ವೆಚ್ಚ ಪಾವತಿಸಿಕೊಂಡು ಮುಖ್ಯಾಧಿಕಾರಿಗಳು ಪುರಸಭೆ, ಚಿಕ್ಕನಾಯಕನಹಳ್ಳಿ ಅವರು 02-01-2024ರಂದು (ಗುತ್ತಿಗೆ ದಿನಾಂಕದಿಂದ 1 ವರ್ಷ 9 ತಿಂಗಳುಗಳ ನಂತರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ ಎಂದು ತಿಳಿಸಿದರು. ಸದರಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಸಬಾ ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸರ್ವೆ ನಂ. 5/5 ಎಫ್ ರಲ್ಲಿ 10 ಗುಂಟೆ ಜಮೀನನ್ನು ಪರಸ್ಪರ ಒಪ್ಪಂದದ ಆಧಾರದಲ್ಲಿ ಜಮೀನಿನ ಭೂ ಸ್ವಾಧೀನ ವೆಚ್ಚ ಪಾವತಿಸಿಕೊಂಡು ಮುಖ್ಯಾಧಿಕಾರಿಗಳು ಪುರಸಭೆ ಚಿಕ್ಕನಾಯಕನಹಳ್ಳಿ ಅವರು ದಿನಾಂಕ: 25-06-2024ರಂದು (ಗುತ್ತಿಗೆ ದಿನಾಂಕದಿಂದ 1 ವರ್ಷ 11 ತಿಂಗಳ ನಂತರರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ. 
ವಲಯ-6 ರಲ್ಲಿ, ಜೋಗಿಹಳ್ಳಿ ಹತ್ತಿರ ನಿರ್ಮಿಸಲು ಉದ್ದೇಶಿಸಿರುವ 6.00 ಮೀ ವ್ಯಾಸದ ವೆಟ್‍ವೆಲ್ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಜಾಗವನ್ನು ಮುಖ್ಯಾಧಿಕಾರಿಗಳು, ಪುರಸಭೆ, ಚಿಕ್ಕನಾಯಕನಹಳ್ಳಿ ರವರು ದಿನಾಂಕ: 02-09-2025 ರಂದು (ಗುತ್ತಿಗೆ ದಿನಾಂಕದಿಂದ 3 ವರ್ಷ 2 ತಿಂಗಳುಗಳ ನಂತರ) ಮಂಡಳಿಗೆ ಹಸ್ತಾಂತರಿಸಿರುತ್ತಾರೆ. 
ವಲಯ-2 ರ ಕುರುಬರಹಳ್ಳಿ ಹತ್ತಿರ 110 ಕೆ.ಎಲ್.ಡಿ ಮತ್ತು ವಲಯ-3 ರ ಕೇದಿಗೆಹಳ್ಳಿ ಹತ್ತಿರ 715 ಕೆ.ಎಲ್.ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕುರುಬರಹಳ್ಳಿ ಗ್ರಾಮದ ಸರ್ವೆ ನಂ.35/1ಎ ರಲ್ಲಿ 2 ಗುಂಟೆ ಸರ್ವೆ ನಂ.35/8 ರಲ್ಲಿ 1 ಗುಂಟೆ, ಸರ್ವೆ ನಂ.35/9 ರಲ್ಲಿ 1 ಗುಂಟೆ ಮತ್ತು ಕೇದಿಗೆಹಳ್ಳಿ ಗ್ರಾಮದ ಸರ್ವೆ ನಂ.22 ರಲ್ಲಿ 15 ಗುಂಟೆ ಒಟ್ಟು 19 ಗುಂಟೆ ಜಮೀನಿನಲ್ಲಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಿಸಲು  ಭೂಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿದೆ, 19(1) ಅಧಿಸೂಚನೆ ಅನುಮೋದನೆ ಹಂತದಲ್ಲಿರುತ್ತದೆ. ಕಾಮಗಾರಿ ಸ್ಥಳ ಇದುವರೆವಿಗೂ ಲಭ್ಯವಿರುವುದಿಲ್ಲ. 
ವಲಯ-1 ರ ಮಾರುತಿ ನಗರದಲ್ಲಿ 100 ಕೆ.ಎಲ್.ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ ಮುಖ್ಯಾಧಿಕಾರಿಗಳು, ಪುರಸಭೆ, ಚಿಕ್ಕನಾಯಕನಹಳ್ಳಿ ರವರು ದಿನಾಂಕ: 12-10-2023 ರಲ್ಲಿ  ಹಸ್ತಾಂತರಿಸಿರುವ ಜಮೀನಿನಲ್ಲಿ ಕಾಮಗಾರಿ ಪ್ರಾರಂಭಿಸಲು ಸ್ಥಳೀಯ ನಾಗರೀಕರು ಆಕ್ಷೇಪಿಸಿರುತ್ತಾರೆ ಹಾಗೂ ಈ ಸ್ಥಳದಲ್ಲಿ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಸ್ಥಳದ ಅಭಾವವಿರುತ್ತದೆ. ಈ ಬಗ್ಗೆ ಸದರಿ ಸ್ಥಳದಲ್ಲಿ ಮಲಿನ ನೀರು ಮೆಷಿನ್ ಹೋಲ್ ಪಂಪಿಂಗ್ ಸ್ಟೇಷನ್ ನಿರ್ಮಿಸಲು ಹಾಗೂ ಮಲಿನ ನೀರನ್ನು 2.6ಎಂ.ಎಲ್.ಡಿ ಮಲಿನ ನೀರು ಸಂಸ್ಕರಣಾ ಘಟಕಕ್ಕೆ ಪಂಪು ಮಾಡಲು ವಿನ್ಯಾಸ ಮತ್ತು ನಕ್ಷೆಯನ್ನು ಸಲ್ಲಿಸಲು ಮುಖ್ಯ ಅಭಿಯಂತರರು(ಬೆಂ), ಕನನೀಸ ಮತ್ತು ಒಚ ಮಂಡಳಿ, ಬೆಂಗಳೂರು ರವರು ದಿನಾಂಕ  11-12-2025 ರಂದು ನಡೆದ ಕಾಮಗಾರಿ ಪರಿವೀಕ್ಷಣೆಯ ಸಮಯದಲ್ಲಿ ತೀರ್ಮಾನಿಸಿದಂತೆ ಮೆಷಿನ್ ಹೋಲ್ ಪಂಪಿಂಗ್ ಸ್ಟೇಷನ್ ಗೆ ವಿನ್ಯಾಸ ಮತ್ತು ನಕ್ಷೆಯನ್ನು ಗುತ್ತಿಗೆದಾರರು ಸಲ್ಲಿಸಿದ್ದು ಅನುಮೋದನೆಯ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. 
ಲೋಕೋಪಯೋಗಿ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಕಾಮಗಾರಿ ನಿರ್ವಹಿಸಲು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ 150 ಎ ಗಳಲ್ಲಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಮೆಷಿನ್‍ಹೋಲ್ ಗಳನ್ನು ನಿರ್ಮಿಸಲು ಅನುಮತಿ ದೊರೆಯುವಲ್ಲಿ ವಿಳಂಬವಾಗಿರುತ್ತದೆ. 
ಲೋಕೋಪಯೋಗಿ ರಸ್ತೆಗಳಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಅನುಮತಿ ನೀಡಲು ಮಂಡಳಿಯನ್ನು ದಿನಾಂಕ:12-03-2024 ಹಾಗೂ ದಿನಾಂಕ:13-06-2024 ರಲ್ಲಿ ಕೋರಲಾಗಿದೆ. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ವಿಭಾಗ, ತುಮಕೂರು ರವರು ದಿನಾಂಕ 29-10-2025  ಮತ್ತು ದಿನಾಂಕ: 29-10-2025 ರಲ್ಲಿ ಅನುಮತಿ ನೀಡಿರುತ್ತಾರೆ. 
ರಾಷ್ಟ್ರೀಯ ಹೆದ್ದಾರಿ 150 ಎ ಪಕ್ಕದಲ್ಲಿ ಒಳಚರಂಡಿ ಕೊಳವೆಗಳನ್ನು ಅಳವಡಿಸಿ ಮೆಷಿನ್‍ಹೋಲ್ ಗಳನ್ನು ನಿರ್ಮಿಸಲು ಅನುಮತಿ ನೀಡಲು ಮಂಡಳಿ ದಿನಾಂಕ:28-10-2024 ರಂದು ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರಿಗೆ ಕೋರಲಾಗಿದೆ. ದಿನಾಂಕ:17-12-2024 ರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರು ಜಂಟಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಸದರಿಯವರು ಕೋರಿರುವಂತೆ ನಕ್ಷೆಗಳನ್ನು ಮಂಡಳಿಯು ದಿನಾಂಕ:18-01-2025 ರಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಬೆಳ್ಳೂರು ಕ್ರಾಸ್ ರವರಿಗೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅನುಮತಿ ನೀಡಿರುವುದಿಲ್ಲ. 
ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಪುರಸಭೆ ವ್ಯಾಪ್ತಿಯ 10 ಕಡೆಗಳಲ್ಲಿ ಒಟ್ಟು ಸುಮಾರು 1.15 ಕಿಮೀ ಉದ್ದಕ್ಕೆ ಸ್ಥಳದ ತಕರಾರುಗಳು ಇರುವುದರಿಂದ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಸದರಿ  ಆರ್.ಒ.ಡಬ್ಲ್ಯೂ ಸಮಸ್ಯೆಗಳನ್ನು ಬಗೆಹರಿಸಿಕೊಡಲು ಚಿಕ್ಕನಾಯಕನಹಳ್ಳಿ ರವರಿಗೆ ಮನವಿ ಮಾಡಲಾಗಿದೆ. ಇದುವರೆಗೂ ಗುತ್ತಿಗೆದಾರರಿಂದಾಗಿರುವ ಕಾಮಗಾರಿ ವಿಳಂಭಕ್ಕೆ ವಿಭಾಗ ಮತ್ತು ಉಪವಿಭಾಗ ಕಛೇರಿಗಳಿಂದ ನೋಟೀಸ್ ನೀಡಲಾಗಿರುತ್ತದೆ ಹಾಗೂ ಗುತ್ತಿಗೆದಾರರೊಂದಿಗೆ ವಿಭಾಗ ಕಛೇರಿಯಲ್ಲಿ ಪರಿಶೀಲನಾ ಪ್ರಗತಿ ನಡೆಸಲಾಗಿರುತ್ತದೆ. ಗುತ್ತಿಗೆದಾರರಿಂದಾಗಿರುವ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ಬಿಲ್ಲುಗಳಲ್ಲಿ ರೂ.25.00 ಲಕ್ಷಗಳನ್ನು ತಡೆಹಿಡಿಯಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ, ಚಿಕ್ಕನಾಯಕನಹಳ್ಳಿ ಪಟ್ಟಣದ ಒಳಚರಂಡಿ ಕಾಮಗಾರಿಗಳನ್ನು ದಿನಾಂಕ:12-07-2026 ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 
ಈ ಯೋಜನೆಯಡಿ ವಿವಿಧ ಘಟಕಗಳಿಗೆ ಅವಶ್ಯವಿರುವ ಜಮೀನನ್ನು ಹಸ್ತಾಂತರಿಸುವಲ್ಲಿ ಆಗಿರುವ ವಿಳಂಬದಿಂದಾಗಿ ಮತ್ತು ಇತರ ವಿಳಂಬಗಳನ್ನು ಪರಿಗಣಿಸಿ ಮಾರ್ಪಾಡಿತ  ವರ್ಕ್ ಪ್ರೋಗ್ರಾಂ ಅನ್ನು ಅನುಮೋದಿಸಿಕೊಂಡು ಅದರನ್ವಯ ಪ್ರತಿ ತಿಂಗಳು ಗುತ್ತಿಗೆದಾರರಿಂದ ಕಾಮಗಾರಿಯ ಪ್ರಗತಿಯ ವಿವರಗಳನ್ನು ಪಡೆದು ಮಂಡಳಿಯ ನಿಗಧಿತ ನಮೂನೆ ಕೆ.ಡಬ್ಲ್ಯೂಬಿ ಎಫ್ - 52ನಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗುತ್ತಿದೆ. 
ಪ್ರಸ್ತುತ ಕಾಮಗಾರಿಯಡಿ ಶೇಕಡಿ 70 ರಷ್ಟು ಭೌತಿಕ ಪ್ರಗತಿ ಹಾಗೂ ಶೇಕಡ 45 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಹಾಗೂ ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಯೋಜನೆಯನ್ನು ಜುಲೈ 2026ಕ್ಕೆ ಪೂರ್ಣಗೊಳಿಸಿ ಚಾಲನೆಗೊಳಿಸಲಾಗುವುದು ಎಂದು ತಿಳಿಸಿದರು.  

Post a Comment

0Comments

Post a Comment (0)