ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರದ ಅಗತ್ಯ ಕ್ರಮ- ಗೃಹ ಸಚಿವ ಡಾ: ಜಿ. ಪರಮೇಶ್ವರ್

varthajala
0

 ಬೆಂಗಳೂರು : ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಕಳೆದ ಸಾಲಿಗೆ ಹೋಲಿಸಿದ್ದಲ್ಲಿ ಕಡಿಮೆ ಪ್ರಕರಣಗಳು ವರದಿಯಾಗಿರುತ್ತವೆ. ಮೈಸೂರು ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಗಡಿ ಭಾಗಗಳ್ಲಿ ಚೆಕ್ ಪೆÇೀಸ್ಟ್ ಗಳನ್ನು ರಚಿಸಲಾಗಿದ್ದು, ಚೆಕ್ ಪೆÇೀಸ್ಟ್ ಗಳಲ್ಲಿ ಸರದಿಯಂತೆ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಶಸ್ತಾಸ್ತ್ರ ನಿಯೋಜಿಸಿ ಯಾವುದೇ ಕಾನೂನು ಬಾಹಿರ/ಅಪರಾಧ ಚಟುವಟಿಕೆಗಳು ನಡೆಯದಂತೆ ಮುಂಜಾಗ್ರತ ಕ್ರಮಗಳನ್ನುಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು. 

ಇಂದು ವಿಧಾನಸಭೆಯಲ್ಲಿ ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಜಿಲ್ಲೆಯಲ್ಲಿ ರಾತ್ರಿ ಹಾಗೂ ಹಗಲು ಗಸ್ತುಗಳನ್ನು ನಿರಂತರವಾಗ ನಿರ್ವಹಿಸಿ ಯಾವುದೇ ಅಪರಾಧ ಚಟುವಟಿಕೆಗಳನು ನಡೆಯದಂತೆ ಮುಂಜಾಗ್ರತ ಕ್ರಮ ವಹಿಸಲಾಗಿರುತ್ತದೆ. ಮಾನಿರ್ಂಗ್ ಬೀಟ್ ಮತ್ತು ಫೂಟ್ ಪೆಟ್ರೋಲಿಂಗ್ ಗಸ್ತುಗಳನ್ನು ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ವಹಿಸಲಾಗಿರುತ್ತದೆ. ಪಬ್ಲಿಕ್ ಸೇಪ್ಟಿ ಕಾಯ್ದೆಯಡಿಯಲ್ಲಿ ಒಟ್ಟು 3221 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದುರು. ಅಪರಾಧ ಪ್ರಕರಣಗಳ ಭಾಗಿಯಾದ ಹಿಂದಿನ ಪ್ರಕರಣಗಳ ಆರೋಪಿತರ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ಪರಮೇಶ್ವರ್ ಉತ್ತರಿಸಿದರು. 
ಹೊಸ ಯೋಜನೆ-ಮನೆಮನೆಗೆ ಪೆÇಲೀಸ್-ಡಾ: ಜಿ. ಪರಮೇಶ್ವರ್ ಗೃಹ ಇಲಾಖೆ ಹೊಸ ಯೋಜನೆಯಾದ ಮನೆ-ಮನೆಗೆ ಪೆÇಲೀಸ್ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುμÁ್ಠನಗೊಳಿಸಿದ್ದು, ಸದರಿ ಕಾರ್ಯಕ್ರಮದ ಅಡಿಯಲ್ಲಿ ಭೇಟಿ ನೀಡುವ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿದಾಗ ಅವರಿಗೆ ಇಲಾಖೆಯಿಂದ ಪೂರೈಕೆಯಾದ ಸಿ.ಯು.ಜಿ ಮೊಬೈಲ್ ನಂಬರ್ ಗಳನ್ನು ನೀಡಿದ್ದು ಯಾವುದೇ ಕುಂದು ಕೊರತೆಗಳು ಇದ್ದಲ್ಲಿ 112 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿರತ್ತದೆ ಎಂದು ಹೇಳಿದರು.
ಡ್ರಗ್ ಮಾಫಿಯಾ ಮಟ್ಟ ಹಾಕಲು ಕ್ರಮ: ಮೈಸೂರು ಜಿಲ್ಲೆಯಲ್ಲಿ ಡ್ರಗ್ ಮಾಫಿಯಾವನ್ನು ಪಟ್ಟ ಹಾಕಲು ಕೇಂದ್ರ ಗೃಹ ಸಚಿವಾಲಯದ ಆದೇಶದನ್ವಯ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾರ್ಕೋ ಸಮನ್ವಯ ಸಮಿತಿಯನ್ನು ರಚಿಸಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಇನ್ನೂ ಹಲವಾರು ಇಲಾಖೆಗಳನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿದ್ದು, ಮಾದಕ ಪದಾರ್ಥಗಳ ಉತ್ಪಾದನೆ, ಸಾಗಾಟ, ಮಾರಾಟ, ವಿತರಣೆ ಹಾಗೂ ಇದರ ದುರ್ಬಳಕೆಯನ್ನು ತಡೆಗಟ್ಟುವಲ್ಲಿ ಎಲ್ಲಾ ಇಲಾಖೆಗಿಂದ ಮಾಹಿತಿ ವಿನಿಮಯ ಮಾಡಿಕೊಂಡು ಅಪರಾಧ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.

Post a Comment

0Comments

Post a Comment (0)