ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ‘ಇಸ್ರೇಲ್ ಮತ್ತು ಭಾರತಕ್ಕೆ ಎದುರಾಗಿರುವ ಅಪಾಯಗಳಲ್ಲಿ ಸ್ವಲ್ಪ ಸಾಮ್ಯವಿದೆ. ಅವರು ಪದೇ ಪದೇ ಆಕ್ರಮಣಕ್ಕೆ ಒಳಗಾಗುತ್ತಾರೆ. ನಾವು ರ‍್ಷದಲ್ಲಿ ಹಲವಾರು ಬಾರಿ ಭಯೋತ್ಪಾದಕ ಕೃತಿಗಳಿಗೆ ಒಳಗಾಗುತ್ತೇವೆ. ಆದರೆ ಆ ದೇಶ ಅವರನ್ನು ಕೆಣಕಲು ಬಂದವರಿಗೆ ಸರಿಯಾದ ಪ್ರತೀಕಾರ ಕ್ರಮ ಕೈಗೊಂಡಿದೆ. ಅವರ ದೇಶಪ್ರೇಮ ಮಾದರಿಯಾಗುವಂತಿದೆ. ನಮ್ಮಲ್ಲಿ ಈ ಮೊದಲು ಭಯೋತ್ಪಾದಕ ಕೃತ್ಯಗಳಿಗೆ ಸೂಕ್ತ ಪ್ರತಿಕ್ರಿಯೆಯೇ ನೀಡುತ್ತಿರಲಿಲ್ಲ, ಪ್ರತೀಕಾರ ಸೊನ್ನೆಯಾಗಿತ್ತು’ ಎಂದು ಪತ್ರರ‍್ತ ವಿಶ್ವೇಶ್ವರ ಭಟ್ ಹೇಳಿದರು.
ಅವರು ಬರೆದಿರುವ ‘ಬದುಕುಳಿದವರು ಕಂಡಂತೆ’ ಎಂಬ ಕೃತಿಯ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಕುರಿತು ಸಂಪರ‍್ಣವಾಗಿ ತಿಳಿದುಕೊಳ್ಳಬೇಕಾದರೆ ಆ ದೇಶಗಳ ಇತಿಹಾಸವನ್ನು ನೋಡಬೇಕು. ಬಲ ಮತ್ತು ಎಡ ಎಂಬ ಮಸೂರ ಇಟ್ಟುಕೊಂಡು ನೋಡಬಾರದು. ಇಸ್ರೇಲಿಗರ ದೇಶಪ್ರೇಮ ಅಭೂತಪರ‍್ವವಾದದ್ದುಎಂದರು. ಇಸ್ರೇಲಿಗರನ್ನು ಮೆಚ್ಚಿಕೊಂಡ ಅವರು, ‘ಇಸ್ರೇಲ್ ನ ಶೇ.65 ಭಾಗ ಮರುಭೂಮಿಯಿಂದ ಕೂಡಿದೆ.
ಮಂಗಳೂರಿನಲ್ಲಿ ಒಂದು ಗಂಟೆಯಲ್ಲಿ ಬರುವ ಮಳೆ ಅಲ್ಲಿ ಒಂದು ರ‍್ಷದಲ್ಲಿ ಬರುತ್ತದೆ. ಆದರೂ ಅವರು ನೀರಾವರಿ ಕುರಿತು ಜಗತ್ತಿಗೆ ಪಾಠ ಮಾಡುತ್ತಾರೆ. ಇಡೀ ವಿಶ್ವದಲ್ಲಿ ಇಸ್ರೇಲಿಗರು ಎಲ್ಲೇ ತೊಂದರೆಗೆ ಒಳಗಾದರೂ ಇಡೀ ರಾಷ್ಟ್ರವೇ ಅವರ ನೆರವಿಗೆ ಧಾವಿಸುತ್ತದೆ’ ಎಂದರು. ಇಸ್ರೇಲ್ ನ ಅತ್ತ ಇತ್ತ ಇರುವ ಎಲ್ಲಾ ರಾಷ್ಟ್ರಗಳು ಅವರ ವಿರುದ್ದ ದಾಳಿ ಮಾಡಿವೆ. ಅವರು ಯಾವಾಗಲೋ ನರ‍್ಣಾಮ ಆಗಬೇಕಿತ್ತು. ಆದರೆ ಅವರ ಇಚ್ಛಾಶಕ್ತಿಯಿಂದ ಅವರು ಇಂದಿಗೂ ಹೋರಾಡುತ್ತಲೇ ಇದ್ದಾರೆ’ ಎಂದು ಹೇಳಿದರು. ಇಸ್ರೇಲ್ ನ ಭೌಗೋಳಿಕತೆ ಕುರಿತ ಸಂಪರ‍್ಣ ವಿವರ ನೀಡಿದ ಅವರ ಗೋಷ್ಠಿ ಕಿಕ್ಕಿರಿದು ತುಂಬಿತ್ತು.