ಬೆಂಗಳೂರು: ಕೇಂದ್ರ ರ‍್ಕಾರದ ಕರ‍್ಪೋರೇಟ್ ವ್ಯವಹಾರಗಳ ಸಚಿವಾಲಯದಡಿ ಬರುವ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಸಂಸ್ಥೆಯ 2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿಎಸ್. ದ್ವಾರಕಾನಾಥ್ ಚೆನ್ನೂರ್ ಆಯ್ಕೆ ಯಾಗಿದ್ದಾರೆ.
ಸಿ.ಎಸ್. ಪವನ್ ಜಿ. ಚಂದಕ್ ಅವರು ಅವರು ರ‍್ಹ ಕರ‍್ಮಿಕ ಕಾನೂನುಗಳು ಹಾಗೂ ಕರ‍್ಮಿಕ ಕಲ್ಯಾಣ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಅವರು ಸಾಂಸ್ಥಿಕ ಕಾನೂನು, ವಿದೇಶಿ ವಿನಿಮಯ ಕಾನೂನು, ಕೈಗಾರಿಕಾ ಕಾನೂನು, ಕಾನೂನು ಮಾಪನ ಶಾಸ್ತ್ರ, ಸೆಕ್ರೇಟರಿ ವಲಯದಲ್ಲಿ ಲೆಕ್ಕಪತ್ರ ಪರಿಶೋಧನೆ, ಮಧ್ಯಸ್ಥಿಕೆ (ರ‍್ಬಿಟ್ರೇಷನ್) ವಿಚಾರಗಳು, ಎಸ್.ಇ.ಝಟ್, ಎಸ್.ಟಿ.ಪಿ.ಇ ಹಾಗೂ ಡಿಒಟಿ ಕ್ಷೇತ್ರಗಳಲ್ಲಿ ವಿಶಾಲ ಅನುಭವ ಹೊಂದಿದ್ದಾರೆ.ದೊಡ್ಡ ಸಾಂಸ್ಥಿಕ ಸಂಸ್ಥೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ವತಂತ್ರ ನರ‍್ದೇಶಕ ಮತ್ತು ಸಲಹೆಗಾರರಾಗಿ ಕರ‍್ಯನರ‍್ವಹಿಸಿದ್ದು, ತಮ್ಮ ಪರಿಣತಿಯ ಕ್ಷೇತ್ರಗಳಲ್ಲಿನ ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಆಳವಾದ ಅರಿವು ಹೊಂದಿದ್ದಾರೆ.
ಸಾಂಸ್ಥಿಕ ಕಾನೂನು ಸಂಬಂಧಿತ ವಿಷಯಗಳ ನರ‍್ವಹಣೆ, ವ್ಯವಹಾರ ರಚನೆ (ಡೀಲ್ ಸ್ಟ್ರಕ್ಚರಿಂಗ್) ಮತ್ತು ರ‍್ಜರ್–ಅಮಾಲ್ಗಮೇಷನ್ ಕುರಿತು ಸಲಹೆ ನೀಡುವಲ್ಲಿ ನಿಪುಣರು.ಸಿಎಸ್ ದ್ವಾರಕಾನಾಥ್ ಚೆನ್ನೂರು ಅವರು ಐಸಿಎಸ್ಐ ಫೆಲೋ ಸದಸ್ಯರಾಗಿದ್ದು, ದಿವಾಳಿತನ ವಲಯದಲ್ಲಿ ಅವರು ವೃತ್ತಿಪರರು ಮತ್ತು ರ‍್ಹತೆ ಪಡೆದ ಸಾಮಾಜಿಕ ಲೆಕ್ಕ ಪರಿಶೋಧಕರು. 1992ರಲ್ಲಿ ಕಂಪನಿ ಸೆಕ್ರಟರಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ಸುಮಾರು 10 ರ‍್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ 2002ರಲ್ಲಿ ವೃತ್ತಿಪರ ಅಭ್ಯಾಸ ಆರಂಭಿಸಿದರು. ಪ್ರಸ್ತುತ ಅವರು ಖಾಸಗಿ ಹಾಗೂ ಸರ‍್ವಜನಿಕ ವಲಯದಲ್ಲಿ ಪಟ್ಟಿ ಮಾಡಲಾದ ಕಂಪನಿಗಳು ಮತ್ತು ವಿದೇಶಿ ಕಂಪನಿಗಳ ಉಪಕಂಪನಿಗಳು ಒಳಗೊಂಡಂತೆ, ಕಂಪನಿಗಳ ಕಾಯ್ದೆ, ಫೆಮಾ, ಆರ್.ಬಿ.ಐ ನಿಯಮಗಳು ಮತ್ತು ಸೆಬಿ ನಿಯಮಗಳ ಅಡಿಯಲ್ಲಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ಪರಿಣತಿ ಕ್ಷೇತ್ರಗಳಲ್ಲಿ ಸಾಂಸ್ಥಿಕ ಕಾನೂನುಗಳು ಮತ್ತು ದಿವಾಳಿತನ ಹಾಗೂ ದಿವಾಳಿತನ ಸಂಹಿತೆ, 2016 ಸೇರಿವೆ.