ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ

varthajala
0

 ಚಾಮರಾಜನಗರ: ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ , ಶ್ರೀ  ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ,ಶಿರಸಿ ,ಉತ್ತರ ಕನ್ನಡ, ಕರ್ನಾಟಕ ಹಾಗೂ ಶ್ರೀ ಚಾಮರಾಜನಗರ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಶ್ರೀ ಭಗವದ್ಗೀತಾ ಅಭಿಯಾನ  ಪ್ರಯುಕ್ತ 11ನೇ ಅಧ್ಯಾಯದ ಸಮರ್ಪಣಾ ಸಮಾರಂಭ ಕಾರ್ಯಕ್ರಮವನ್ನು 23ರ ಶುಕ್ರವಾರ ಬೆಳಗ್ಗೆ 10.30 ಕ್ಕೆ ಸೇವಾ ಭಾರತಿ ಶಾಲೆ ಹಾಗೂ  ಮಧ್ಯಾಹ್ನ 2.30 ಯುನಿವರ್ಸ್ ಇಂಗ್ಲಿಷ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. 

ಈ ಸಮಾರಂಭದ ಉದ್ಘಾಟನೆಯನ್ನು ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ ಕಾರ್ಯಾಧ್ಯಕ್ಷರಾದ ಹಿರಿಯ ವಕೀಲರಾದ ಶಿವಮೊಗ್ಗದ ಅಶೋಕ್ ಭಟ್ ರವರು ನೆರವೇರಿಸುವರು.ಶ್ರೀ ಭಗವದ್ಗೀತಾ ಮಹತ್ವ ಕುರಿತು ಮೈಸೂರಿನ ಮಹರ್ಷಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನಾರಾಯಣ ದೇಸಾಯಿ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಮುಖ್ಯ ಅತಿಥಿಗಳಾಗಿ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ವಾಸುದೇವರಾವ್ ,ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಗೌರವಾಧ್ಯಕ್ಷರಾದ ಜಿಎಂ ಹೆಗಡೆ , ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭಗವದ್ಗೀತಾ ಅಭಿಯಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್  ಎನ್ ಋಗ್ವೇದಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಉಪಾಧ್ಯಕ್ಷರು ಹಾಗೂ ಭಗವದ್ಗೀತೆ ಅಭಿಯಾನ ಸಮಿತಿಯ ಖಜಾಂಚಿಗಳಾದ ಎಸ್ ಬಾಲಸುಬ್ರಹ್ಮಣ್ಯ ಹಾಗೂ ಯೂನಿವರ್ಸ್ ಇಂಗ್ಲಿಷ್ ಶಾಲೆ ಪ್ರಾಚಾರ್ಯ  ವಿಜಯಲಕ್ಷ್ಮಿರವರು ಭಾಗವಹಿಸಲಿದ್ದಾರೆ.ನೂರಾರು ನಾಗರಿಕರು ಹಾಗೂ ವಿದ್ಯಾರ್ಥಿ ಸಮೂಹದಿಂದ ಭಗವದ್ಗೀತಾ ಸಮರ್ಪಣಾ ಸಮಾರಂಭ ನಡೆಯಲಿದೆ .ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟ ಹಾಗೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ಶ್ರೀ ಭಗವದ್ಗೀತೆ ಪಾರಾಯಣದ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಗುವುದು ಎಂದು ಸಮಿತಿಯ ಸಂಚಾಲಕರಾದ ಎಸ್ ಸುರೇಶ್ ಹಾಗೂ ಕೇಶವಮೂರ್ತಿ ತಿಳಿಸಿದ್ದಾರೆ

Post a Comment

0Comments

Post a Comment (0)