ಬಳ್ಳಾರಿ ಮಹಾನಗರ ಪಾಲಿಕೆ – ಅಪಾರ್ಟ್‍ಮೆಂಟ್ ಪ್ಲಾಟ್‍ಗಳ ಆಸ್ತಿ ತೆರಿಗೆ ಸಂಗ್ರಹಿಸಿ ದುರುಪಯೋಗ ಮಾಡಿಕೊಂಡಿರುವವರ ವಿರುದ್ದ ಕಾನೂನಾತ್ಮಕ ಕ್ರಮ

varthajala
0

 ಬೆಂಗಳೂರು : ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿನ ವಾರ್ಡ್ ಸಂ. 19 ರಲ್ಲಿನ ಅಪಾರ್ಟ್‍ಮೆಂಟ್ ಪ್ಲಾಟ್‍ಗಳ ಆಸ್ತಿ ತೆರಿಗೆಯಲ್ಲಿ ಕರ ಸಂಗ್ರಹಿಸಿ ಪಾಲಿಕೆಯ ಖಾತೆಗೆ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿ ಮತ್ತು ನೌಕರರುಗಳ ವಿರುದ್ಧ ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ಅವರು ತಿಳಿಸಿದರು. 

ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಕಛೇರಿ-1ರ - ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ:18/19 ರ - ವ್ಯಾಪ್ತಿಯ ಅನಂತಪುರ ರಸ್ತೆಯ ಹತ್ತಿರವಿರುವ ಅಪಾರ್ಟ್‍ಮೆಂಟ್  ಒಂದರಲ್ಲಿ ಸುಮಾರು 35 ಪ್ಲಾಟ್ ಗಳಿಗೆ ನಮೂನೆ-2ನ್ನು ನೀಡಿರುವುದು ಕಂಡುಬಂದಿರುತ್ತದೆ. ಆದರೆ, ನಮೂನೆ-2ನ್ನು ನೀಡಲು ತೆರಿಗೆಯ ಮೊತ್ತ ರೂ.2.80,179/- ಗಳನ್ನು ಮಾಲೀಕರಿಂದ ಸಂಗ್ರಹಿಸಿ, ಪಾಲಿಕೆಯ ಖಾತೆಗೆ ಜಮಾ ಮಾಡದೇ ತೆರಿಗೆಯ ಮೊತ್ತವನ್ನು ದುರುಪಯೋಗ ಮಾಡಿಕೊಳ್ಳುವುದಲ್ಲದೇ ಬಳ್ಳಾರಿ ಒನ್ ರಸೀದಿಗಳನ್ನು ಕೊಟ್ಟಿ (ನಕಲು) ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ತೆರಿಗೆ ಮೊತ್ತವನ್ನು ಪಾಲಿಕೆಯ ಖಾತೆಗೆ ಪಾವತಿಸದೇ ಇರುವ ಕಾರಣ, ಸದರಿ ಮೊತ್ತದ ಜೊತೆಗೆ ಶೇ.18%ರಷ್ಟು ಬಡ್ಡಿಯೊಂದಿಗೆ ಪಾಲಿಕೆಯ ಹಿಂದುರುಗಿಸಿಕೊಂಡು ಕರ್ತವ್ಯ ನಿರ್ಲಕ್ಷ್ಯ ತೋರಿರುವ ಎನ್. ವೀರೇಶ್ ಕುಮಾರ್, ಸಹಾಯಕ ಕಂದಾಯ ಅಧಿಕಾರಿ, ಮನೋಹರ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕೆ.  ದೊಡ್ಡಬಸಪ್ಪ ದ್ವಿತೀಯ ದರ್ಜೆ ಸಹಾಯಕರು ರವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ-110 ಮೇರೆಗೆ ಶಿಸ್ತು ಕ್ರಮ ಜರುಗಿಸಲು ಉದ್ದೇಶಿಸಲಾಗಿದ್ದು ದೋμÁರೋಪಣಾ ಪಟ್ಟಿಯನ್ನು ಜಾರಿ ಮಾಡಿ  ಆಪಾದನೆಗಳ ಬಗ್ಗೆ, ಲಿಖಿತ ಸಮಜಾಯಿಷಿ ಯಾವುದಾದರೂ ಇದ್ದಲ್ಲಿ ಮನವಿ ಸಲ್ಲಿಸುವಂತೆ  ದಿನಾಂಕ:26.03.2025ರಂದು ನೋಟಿಸ್ ನೀಡಲಾಗಿರುತ್ತದೆ. ಸದರಿ ನೋಟಿಸ್‍ಗೆ ಆರೋಪಿತ ನೌಕರರಾದ  ಎನ್.ವೀರೇಶ್ ಕುಮಾರ್ ಸಹಾಯಕ ಕಂದಾಯಾಧಿಕಾರಿ ರವರು ಮನೋಹರ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ದಿನಾಂಕ 08.04.2025 ರಂದು ಮತ್ತು          ಕೆ.ದೊಡ್ಡಬಸಪ್ಪ ದ್ವಿತೀಯ ದರ್ಜೆ ಸಹಾಯಕರು, ರವರು ದಿನಾಂಕ:11.04.2025ರಂದು ಲಿಖಿತ ಉತ್ತರವನ್ನು ಸಲ್ಲಿಸಿದ್ದು ಆರೋಪಗಳನ್ನು ನಿರಾಕರಿಸಿ ದೋಷಾರೋಪಣಾ ಪಟ್ಟಿಯಿಂದ ಕೈಬಿಡುವಂತೆ ಕೋರಿರುತ್ತಾರೆ. ಸಮಜಾಯಿಷಿಯು ಒಪ್ಪಲರ್ಹವಲ್ಲದ ಕಾರಣ, ಗ್ರೂಪ್ 'ಸಿ ಮತ್ತು ಡಿ" ವೃಂದದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವು ಮಹಾನಗರಪಾಲಿಕೆ ಆಯುಕ್ತರಿಗೆ ಪ್ರತ್ಯಾಯೋಜನೆಯಾಗಿರುವುದರಿಂದ, ಸದರಿಯವರುಗಳ ವಿರುದ್ಧದ ಆರೋಪಗಳ ಕುರಿತು ಜಂಟಿ ವಿಚಾರಣೆಯನ್ನು ನಡೆಸಲು ಉದ್ದೇಶಿಸಿ, ಆಯುಕ್ತರು, ಬಳ್ಳಾರಿ ಮಹಾನಗರ ಪಾಲಿಕೆ ರವರು ದಿನಾಂಕ 31.05.20250 ನಿವೃತ್ತ ನ್ಯಾಯಾಧೀಶರಾದ ಈಶ್ವರ್ ಜಂತ್ಲಿ ದಾವಣಗೆರೆ, ಇವರನ್ನು ವಿಚಾರಣಾಧಿಕಾರಿಗಳನ್ನಾಗಿ ಹಾಗೂ ಈ ಹಿಂದಿನ ಸಾಂಖ್ಯಿಕ ಅಧಿಕಾರಿಗಳಾದ ರಮೇಶ್, ಸಹಾಯಕ ನಿರ್ದೇಶಕರು ರವರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ.  ಅಲ್ಲದೆ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಗಾಂಧಿ ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 0135/2024ರನ್ವಯ ಪ್ರಕರಣ ದಾಖಲಿಸಲಾಗಿರುತ್ತದೆ.

ಪ್ರಸ್ತುತ ಇಲಾಖಾ ವಿಚಾರಣೆಯು ವಿಚಾರಣೆ ಹಂತದಲ್ಲಿದ್ದು ಈವರೆಗೂ ವಿಚಾರಣಾಧಿಕಾರಿಗಳು ಒಟ್ಟು 06 ಸಭೆಗಳನ್ನು ನಡೆಸಿರುತ್ತಾರೆ. ಅಂತಿಮ ವಿಚಾರಣಾ ವರದಿ ಇನ್ನೂ ಸ್ವೀಕೃತವಾಗಿರುವುದಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ತೊಡಕುಂಟಾಗುತ್ತಿರುವುದರಿಂದ ಹಾಗೂ ಗ್ರೂಪ್ 'ಸಿ' ವೃಂದದ ನೌಕರರ ಶಿಸ್ತು ಪ್ರಾಧಿಕಾರವು  ಸಂಬಂಧಿಸಿದ ಪಾಲಿಕೆಯ ಆಯುಕ್ತರಾಗಿರುವುದರಿಂದ, ಹಣ ದುರುಪಯೋಗ ಮಾಡಿರುವ ಸಿಬ್ಬಂದಿಗಳನ್ನು ಅವರು ಕಾರ್ಯನಿರ್ವಹಿಸುತ್ತಿದ್ದ ವಲಯ ಕಛೇರಿಯನ್ನು ಹೊರತುಪಡಿಸಿ ಪಾಲಿಕೆಯ ಇತರೆ ವಲಯ ಕಛೇರಿಯಲ್ಲಿ ಪುನರ್ ಸ್ಥಾಪಿಸಲಾಗಿರುತ್ತದೆ.
ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಭಾಗಿಯಾದ ಸಿಬ್ಬಂದಿಗಳ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿರುತ್ತದೆ.  ಹಣ ದುರುಪಯೋಗಪಡಿಸಿಕೊಂಡ ಅಧಿಕಾರಿ/ನೌಕರರನ್ನು ಅಮಾನತ್ತುಗೊಳಿಸಿ ನಿಯಮಗಳಂತೆ 06 ತಿಂಗಳೊಳಗಾಗಿ ಪುನರ್ ಸ್ಥಾಪಿಸಲಾಗಿರುತ್ತದೆ.ಸದರಿಯವರ ವಿರುದ್ಧ ನಿವೃತ್ತ ವಿಚಾರಣಾ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ. ಆದೇಶಿಸಲಾಗಿದ್ದು, ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.
ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಇವರನ್ನು ಒಳಗೊಂಡ ಪ್ರಾಥಮಿಕ ತನಿಖಾ ಸಮಿತಿಯನ್ನು ರಚಿಸಿದ್ದು ದಿನಾಂಕ:10.12.2024 ರಂದು ಸಮಿತಿಯು ನೀಡಿದ ವರದಿಯಲ್ಲಿ ದಿನಾಂಕ:11.11.2024 ರಂದು ಪುನಃ ತೆರಿಗೆಯನ್ನು ಪಾವತಿಸಿ, ತೆರಿಗೆ ರಸೀದಿಗಳನ್ನು ಮಾಲೀಕರಿಗೆ ಸಲ್ಲಿಸಿರುವುದಾಗಿ ತಿಳಿಸಲಾಗಿರುತ್ತದೆ.
ಪಾಲಿಕೆಗೆ ತಡವಾಗಿ ಪಾವತಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದರಿಂದ, ಬಡ್ಡಿ ಸಮೇತ ವಸೂಲಿಗೆ ಕ್ರಮವಹಿಸಲಾಗುವುದು ಹಾಗೂ ಇಲಾಖಾ ವಿಚಾರಣೆಯ ಅಂತಿಮ ವರದಿ ಸ್ವೀಕೃತವಾದ ನಂತರ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Post a Comment

0Comments

Post a Comment (0)