ಲಯನ್ಸ್ ಇಂಟರ್ನ್ಯಾಷನಲ್ ಮತ್ತು ಸಿಂಚ ಚಾರಿಟೆಬಲ್ ಟ್ರಸ್ಟ್, ಬೆಂಗಳೂರಿನ ಶ್ರೀ ಕೃಷ್ಣ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ *ಸುಗ್ಗಿ ಸಂಭ್ರಮ* ಕಾರ್ಯಕ್ರಮವನ್ನು ವಿಧಾನಪರಿಷತ್ ನ ಮಾಜಿ ಸದಸ್ಯರಾದ ಯು ಬಿ ವೆಂಕಟೇಶ್ ಅವರು ಉದ್ಘಾಟಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಶಂಕರ್ ಎಸ್ ಎನ್, ಹಿರಿಯ ಪತ್ರಕರ್ತ ಶ್ರೀ ಸುಧೀಂದ್ರ ರಾವ್, ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಶ್ರೀ ಕೆ ಈಶ್ವರನ್, ಡಾ. ಶಶಿಧರ್ ಗಂಜಿಗಟ್ಟಿ, ಡಾ. ನಾಗೇಶ್ ರಾವ್, ಶ್ರೀ ವೀರಭದ್ರ ಬ್ಯಾಡಗಿ, ಶ್ರೀಮತಿ ಎನ್ ಮಾಲಿನಿ, ಶ್ರೀಮತಿ ಚಂಪಕಾವತಿ, ಶ್ರೀಮತಿ ಮಮತಾ ಸುಂದರರಾಜು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ನೂತನ ವರ್ಷವನ್ನು ಸ್ವಾಗತಿಸುವ ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಸ್ಕಾಲರ್ಶಿಪ್ ಮತ್ತು ಅಶಕ್ತ ಮಹಿಳೆಯರಿಗೆ ಸಹಾಯಧನವನ್ನು ವಿತರಿಸಲಾಯಿತು.

