ಕನ್ನಡ ಕಿಟ್ ಪುಸ್ತಕ ವಿಮರ್ಶೆ

varthajala
0

ಶ್ರೀಮತಿ ರಾಧಿಕಾ ಜಿ.ಎನ್. ರವರು ಬರೆದಿರುವ ಕನ್ನಡ ಕಿಟ್ ಎಂಬ ಪುಸ್ತಕವು ಬಹಳ ಉಪಯುಕ್ತವೂ ಹಾಗೂ ಆಸಕ್ತಿ ಮೂಡುವಂಥದ್ದೂ ಆಗಿದೆ.ಈ ಪುಸ್ತಕದ ಪ್ರಾರಂಭ ದಲ್ಲಿಯೇ ನಾಡಗೀತೆಯನ್ನು ಮುದ್ರಿಸಿರುವುದು ಶ್ರೀಮತಿ ರಾಧಿಕಾರವರ ಕನ್ನಡಾಭಿಮಾನ ವನ್ನೂ ಪ್ರತಿಬಿಂಬಿಸುವಂತಿದೆ.ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ ಇದೊಂದು ಕೈಗನ್ನಡಿ ಆಗಿದೆ.ಇದರಲ್ಲಿರುವ ಪದ ಸರಣಿ, ಪದತ್ರಿಕೋಣ, ಪದ ಮಾಲೆ, ಪದ ಬಂಧ,ನುಡಿಗಟ್ಟು ಗಳು --- ಎಲ್ಲವೂ ಬಹಳ ಉತ್ತಮ ಕೌಶಲ್ಯ ವನ್ನು ಸೂಚಿಸುತ್ತವೆ.ಶಿಶುಗೀತೆ ಗಳು ,ಕಥೆಗಳು ಇವನ್ನೆಲ್ಲ ಓ ದುತ್ತಿದ್ದರೆ , ನಮ್ಮ ಬಾಲ್ಯ ಮರುಕಳಿಸಿದಂತಿದೆ.


ಶ್ರೀಮತಿ ರಾಧಿಕಾ ಜಿ. ಎನ್. ರವರ ಭಾಷಾ ಜ್ಞಾನ, ಭಾಷಾಭಿಮಾನ, ಸಾಹಿತ್ಯದ ಅಭಿರುಚಿ, ಸಾಮಾಜಿಕ ಕಳಕಳಿ ನಿಜಕ್ಕೂ ಪ್ರಶಂಸನೀಯ.ನಿಮ್ಮ ಪ್ರಯತ್ನ ಹಾಗೂ ಸಾಹಿತ್ಯದ ಈ ಪಯಣ ಹೀಗೇ ಮುಂದುವರಿಯಲಿ ಎಂದು ಹಾರೈಸುವ ----

ನಿಮ್ಮ ಆತ್ಮೀಯ ಹಾಗೂ ಪ್ರೀತಿಯ ಹಿತೈಷಿ,

ವಾಸಂತಿ ಲಕ್ಷ್ಮಣ್     ಎಂಎ

 ಹೆಚ್ಓಡಿ, ಕನ್ನಡ ಡಿಪಾರ್ಟ್ಮೆಂಟ್ ನ್ಯೂಹಾರಿಝನ್ ಇಂಗ್ಲಿಷ್ ಸ್ಕೂಲ್ ಕಸ್ತೂರಿ ನಗರ,ಬೆಂಗಳೂರು

Post a Comment

0Comments

Post a Comment (0)